ಭಾರತ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಐರ್ಲೆಂಡ್
IRE vs IND 2nd T20: ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿರುವ ಪಿಚ್ ಪಂದ್ಯ ಮುಂದುವರೆದಂತೆ ಜಟಿಲವಾಗಲಿದೆ. ಇದು ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವುದು ಸ್ವಲ್ಪ ಕಷ್ಟಕರವಾದ ಕೆಲಸವಾಗಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
Ireland vs India 2nd T20I -
ಬೆಲ್‌ಫಾಸ್ಟ್, ಜೂ.27: ಐರ್ಲೆಂಡ್(IRE) ಮತ್ತು ಭಾರತ (IND) ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ ಬೆಲ್‌ಫಾಸ್ಟ್‌ನ ಸ್ಟೋರ್‌ಮಾಂಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಸೋತಿರುವ ಶ್ರೇಯಸ್ ಅಯ್ಯರ್ ಪಡೆಗೆ ಸರಣಿ ಸೋಲಿನ ಮುಖಭಂಗದಿಂದ ಪಾರಾಗಬೇಕಾದರೆ ಗೆಲುವು ಅನಿವಾರ್ಯ.
ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪದರ್ಶನ ತೋರಿರುವ ಐರ್ಲೆಂಡ್ ತಂಡ ಈ ಪಂದ್ಯವನ್ನು ಗೆದ್ದು ಐತಿಹಾಸಿಕ ಸರಣಿ ಗೆಲವಿನ ಇರಾದೆಯಲ್ಲಿದೆ. ಬೌಲರ್‌ಗಳಾದ ಮ್ಯಾಥ್ಯೂ ಹಂಪ್ರಿಸ್ ಮತ್ತು ಮ್ಯಾಥ್ಯೂ ಹೊಲಾರ್ಡ್ ಉತ್ತಮ ಲಯದಲ್ಲಿರುವುದು ಆತಿಥೇಯರಿಗೆ ಹೆಚ್ಚಿನ ಬಲ ನೀಡಿದೆ.
ಭಾರತ ತನ್ನ ಬೌಲಿಂಗ್ ವಿಭಾಗದಲ್ಲಿ ಕೆಲವು ಬಲಾವಣೆ ಮಾಡುವ ಅಗತ್ಯವಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ಪ್ರಿನ್ಸ್ ಯಾದವ್‌ಗೆ ಅವಕಾಶ ನೀಡುವ ಸಾಧ್ಯತೆ ಅಧಿಕವಾಗಿದೆ. ಪ್ರಸಿದ್ಧ್ 4 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಬ್ಯಾಟಿಂಗ್‌ನಲ್ಲಿಯೂ ಭಾರತ ಕ್ಷಿಪ್ರ ಪ್ರಗತಿ ಕಾಣಲೇಬೇಕು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್, ನಾಯಕ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟ್ ಸದ್ದು ಮಾಡಲೇಬೇಕು. ವೈಭವ್ ಸೂರ್ಯವಂಶಿಗೆ ಈ ಪಂದ್ಯದಲ್ಲಿಯೂ ಅವಕಾಶ ಸಿಗುವುದು ಅನುಮಾನ. ಇಂಗ್ಲೆಂಡ್ ಸರಣಿಯಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
IND vs IRE: ಮೊದಲನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಪಾತ್ರವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ!
ಪಿಚ್ ರಿಪೋರ್ಟ್
ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿರುವ ಪಿಚ್ ಪಂದ್ಯ ಮುಂದುವರೆದಂತೆ ಜಟಿಲವಾಗಲಿದೆ. ಇದು ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವುದು ಸ್ವಲ್ಪ ಕಷ್ಟಕರವಾದ ಕೆಲಸವಾಗಿದೆ. ಮೇಲ್ಮೈಯ ನಿಧಾನಗತಿಯ ಸ್ವಭಾವ ಮತ್ತು ಡೆಕ್‌ನಲ್ಲಿ ಸಾಕಷ್ಟು ಬೌನ್ಸ್ ಇಲ್ಲದಿರುವುದರಿಂದ, ವೇಗಿಗಳು ಬ್ಯಾಟರ್‌ಗಳನ್ನು ದೊಡ್ಡ ಹೊಡೆತಗಳನ್ನು ಆಡಲು ಆಕರ್ಷಿಸುವ ಮೂಲಕ ಲಾಭ ಪಡೆಯಬಹುದು, ಆದರೆ ವಿಕೆಟ್‌ಗಳು ನಷ್ಟಕ್ಕೆ ಕಾರಣವಾಗಬಹುದು. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
ಮುಖಾಮುಖಿ
ಉಭಯ ತಂಡಗಳು ಟಿ20ಯಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಭಾರತ 8 ಪಂದ್ಯ ಗೆದ್ದರೆ, ಐರ್ಲೆಂಡ್ ಒಂದು ಪಂದ್ಯ ಜಯಿಸಿದೆ. ಈ ಒಂದು ಗೆಲವು ಒಲಿದದ್ದು ಈ ಬಾರಿಯ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ.
ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್.
ಐರ್ಲೆಂಡ್: ಟಿಮ್ ಟೆಕ್ಟರ್, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ನಾಯಕ), ಬೆಂಜಮಿನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಲಿಯಾಮ್ ಮೆಕಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮೂಂಡ್ರಾ, ಮ್ಯಾಥ್ಯೂ ಹೊಲ್ಲಾರ್ಡ್.