ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶತಕಕ್ಕೂ ಮುನ್ನ ತಿಲಕ್‌ ವರ್ಮಾಗೆ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ ಹಾರ್ದಿಕ್‌ ಪಾಂಡ್ಯ!

Hardik Pandya statements: ಗುಜರಾತ್‌ ಟೈಟನ್ಸ್‌ ವಿರುದ್ಧ ಶತಕ ಸಿಡಿಸಿ ಮುಂಬೈ ಇಂಡಿಯನ್ಸ್‌ ಗೆಲುವಿಗೆ ನೆರವು ನೀಡದ್ದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾಗೆ ನೀಡಿದ್ದ ಸಲಹೆಯನ್ನು ನಾಯಕ ಹಾರ್ದಿಕ್‌ ಪಾಂಡ್ಯ ರಿವೀಲ್‌ ಮಾಡಿದ್ದಾರೆ. ಈ ಪಂದ್ಯದಲ್ಲಿ ತಿಲಕ್‌ 45 ಎಸೆತಗಳಲ್ಲಿ 101 ರನ್‌ಗಳನ್ನು ಬಾರಿಸಿದ್ದರು.

ತಿಲಕ್‌ ವರ್ಮಾಗೆ ನೀಡಿದ್ದ ಸಲಹೆಯನ್ನು ನೆನೆದ ಹಾರ್ದಿಕ್‌ ಪಾಂಡ್ಯ!

ತಿಲಕ್‌ ವರ್ಮಾಗೆ ನೀಡಿದ್ದ ಸಲಹೆಯನ್ನು ನೆನೆದ ಹಾರ್ದಿಕ್‌ ಪಾಂಡ್ಯ. -

Profile
Ramesh Kote Apr 21, 2026 6:37 PM

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ (Gujarat Titans) ಎದುರು ಮುಂಬೈ ಇಂಡಿಯನ್ಸ್‌ (MI) 99 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಈ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್ಸ್‌ ಎರಡನೇ ಗೆಲುವು ಸಾಧಿಸಿತ್ತು. ಈ ಪಂದ್ಯದ ಗೆಲುವಿನ ಶ್ರೇಯ ತಿಲಕ್‌ ವರ್ಮಾಗೆ (Tilak Verma) ಸಲ್ಲಬೇಕು. ಅವರು ಈ ಪಂದ್ಯದಲ್ಲಿ 45 ಎಸೆತಗಳಲ್ಲಿ 101 ರನ್‌ಗಳನ್ನು ಬಾರಿಸಿದ್ದರು. ಮುಂಬೈ ಇಂಡಿಯನ್ಸ್‌ ಗೆಲುವಿನ ಬಳಿಕ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ತಮ್ಮ ಸಹ ಆಟಗಾರ ತಿಲಕ್‌ ವರ್ಮಾಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡ, ತಿಲಕ್‌ ವರ್ಮಾ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 200 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ಅಶ್ವಿನಿ ಕುಮಾರ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 100 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

Ayush Mhatre: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೊಂದು ಆಘಾತ, ಐಪಿಎಲ್‌ ಟೂರ್ನಿಯಿಂದ ಯುವ ಬ್ಯಾಟ್ಸ್‌ಮನ್‌ ಔಟ್‌!

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ಬ್ಯಾಟಿಂಗ್‌ ವೇಳೆ ತಮ್ಮ ಸಹ ಆಟಗಾರ ತಿಲಕ್‌ ವರ್ಮಾಗೆ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ್ದಾರೆ. ಚೆಂಡನ್ನು ನೋಡಿ, ಶಾಟ್‌ ಹೊಡೆಯಿರಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ. ಅಂದ ಹಾಗೆ ಹಾರ್ದಿಕ್‌, ತಿಲಕ್‌ಗೆ ಜೋರಾಗಿ ಕೂಗಿ ಹೇಳಿದ್ದರು. ನೋಡುಗರಿಗೆ ಇವರು ಬಯ್ಯುತ್ತಿದ್ದ ಹಾಗೆ ಕಾಣಿಸಿತ್ತು. ಈ ಬಗ್ಗೆ ಹಾರ್ದಿಕ್‌ ಸ್ಪಷ್ಟನೆ ನೀಡಿದ್ದಾರೆ.

“ತಿಲಕ್‌ ಬಳಿ ಇರುವ ಪ್ರತಿಭೆಯನ್ನು ನೋಡಿದರೆ, ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಕಾದ ಅಗತ್ಯವೇ ಇಲ್ಲ. ನಾನು ಅವರಿಗೆ ನಿರಂತರವಾಗಿ ಹೇಳುತ್ತಿದ್ದದ್ದು ಒಂದೇ—ಯಾವ ಪರಿಸ್ಥಿತಿಯಾದರೂ ಚೆಂಡನ್ನು ಗಮನಿಸಿ, ಅದನ್ನು ಹೊಡೆಯಬೇಕು. ಅವರ ಬ್ಯಾಟ್‌ನಿಂದ ಹೊರಡುವ ಶಾಟ್‌ಗಳ ಗುಣಮಟ್ಟವೇ ವಿಶೇಷ,” ಎಂದು ಹಾರ್ದಿಕ್‌ ಶ್ಲಾಘಿಸಿದ್ದಾರೆ.

GT vs MI: ಬುಮ್ರಾ ವಿಕೆಟ್ ಬರಗಾಲ ನನ್ನ ಸಮಸ್ಯೆಯಲ್ಲ ಎಂದ ಹಾರ್ದಿಕ್ ಪಾಂಡ್ಯ

“ಇದು ಅವರು ಮುಂದೆ ಬಂದು ತನ್ನ ಸಾಮರ್ಥ್ಯವನ್ನು ತೋರಿಸಬೇಕಾದ ಸಮಯವಾಗಿತ್ತು. ಕೆಲವೊಮ್ಮೆ ನಾನು ತುಂಬಾ ಜೋರಾಗಿ ಕೂಗಿದರಿಂದ ತಲೆ ಸುತ್ತಿದಂತಾಯಿತು. ಆದರೆ ಆ ಶಕ್ತಿ ತಂಡಕ್ಕೆ ಬಹಳ ಅಗತ್ಯವಾಗಿತ್ತ. ತಿಲಕ್‌ಗೆ, ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾಗೂ ನಾಯಕನಾಗಿ ನನಗೂ ಅದು ಮಹತ್ವದ್ದಾಗಿತ್ತು,” ಎಂದು ಅವರು ತಿಳಿಸಿದ್ದಾರೆ.

199 ರನ್‌ಗಳನ್ನು ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್‌

ಇನ್ನು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡದ ಆರಂಭ ನಿಧಾನಗತಿಯಿಂದ ಕೂಡಿತ್ತು. ಮುಂಬೈ ಕೇವಲ 44 ರನ್‌ಗಳಿಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ತಿಲಕ್‌ ವರ್ಮಾ ಮತ್ತು ನಮನ್‌ ಧಿರ್‌ 52 ರನ್‌ಗಳ ಜೊತೆಯಾಟದ ಮೂಲಕ ಇನಿಂಗ್ಸ್‌ಗೆ ಸ್ಥಿರತೆ ತಂದರು. ನಮನ್ 45 ರನ್‌ಗಳಿಗೆ ಔಟಾದರು.

SRH vs DC: ಇಂದು ಸನ್‌ರೈಸರ್ಸ್‌ ವಿರುದ್ಧ ರಾಹುಲ್‌ ಅರ್ಧಶತಕ ಬಾರಿಸಿದರೆ ಧೋನಿ ದಾಖಲೆ ಪತನ

ಆ ಬಳಿಕ ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಆ ಮೂಲಕ ಗುಜರಾತ್‌ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಅವರು ಕೇವಲ 45 ಎಸೆತಗಳಲ್ಲಿ 101 ರನ್‌ಗಳನ್ನು ಸಿಡಿಸಿ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ಇದರ ಜೊತೆಗೆ ಹಾರ್ದಿಕ್‌ ಪಾಂಡ್ಯ ಜೊತೆ 81 ರನ್‌ಗಳ ಜೊತೆಯಾಟ ಮತ್ತು ಶೆರ್ಫೆನ್‌ ಋದರ್‌ಫೋರ್ಡ್‌ ಜೊತೆ ಕೇವಲ 7 ಚೆಂಡುಗಳಲ್ಲಿ 22 ರನ್‌ಗಳ ವೇಗದ ಜೊತೆಯಾಟ ನಡೆಸಿದರು. ಇದರ ಫಲವಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳ ಅಂತ್ಯಕ್ಕೆ 199/5 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತ್ತು.