ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕ್ಯಾನ್‌ಗೆ ಒಳಗಾಗಲಿರುವ ಹಿಟ್‌ಮ್ಯಾನ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧ ರೋಹಿತ್‌ ಶರ್ಮಾ ಆಡ್ತಾರಾ?

Rohit Sharma Injury Updates: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು ಹಾಗೂ ಇದರಿಂದಾಗಿ ಅವರು ಬ್ಯಾಟಿಂಗ್‌ ಮುಂದುವರಿಸಲಿಲ್ಲ. ಇದೀಗ ಅವರು ಸ್ಕ್ಯಾನ್‌ಗೆ ಒಳಗಾಗಲಿದ್ದಾರೆಂದು ತಿಳಿದುಬಂದಿದೆ.

IPL 2026: ಪಂಜಾಬ್‌ ಕಿಂಗ್ಸ್‌ ಎದುರು ರೋಹಿತ್‌ ಶರ್ಮಾ ಆಡ್ತಾರಾ?

ರೋಹಿತ್‌ ಶರ್ಮಾ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ. -

Profile
Ramesh Kote Apr 13, 2026 6:23 PM

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಚೇಸಿಂಗ್ ವೇಳೆ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ರೋಹಿತ್ ಶರ್ಮಾ (Rohit Sharma) ಸ್ನಾಯು ಸೆಳೆತದ ಗಾಯದ ಕಾರಣ ಮೈದಾನ ತೊರೆದಿದ್ದರು. ನೋವಿನ ಹೊರತಾಗಿಯೂ ಅವರು ಬ್ಯಾಟಿಂಗ್ ಮುಂದುವರಿಸಲು ಪ್ರಯತ್ನಿಸಿದರು. ಆದರೆ 13 ಎಸೆತಗಳಲ್ಲಿ 19 ರನ್ ಗಳಿಸಿದ ಬಳಿಕ ಆರನೇ ಓವರ್‌ನಲ್ಲಿ ರೋಹಿತ್ ಕೊನೆಗೂ ಮೈದಾನ ತೊರೆಯುವ ನಿರ್ಧಾರ ಕೈಗೊಂಡರು. ಎಂಐ ತಂಡದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾದ ರೋಹಿತ್ ಗಾಯದ ಬಗ್ಗೆ ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕ್ರಿಕ್‌ಬಜ್ ವರದಿ ಪ್ರಕಾರ, ಈ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ರೋಹಿತ್ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ.

ವರದಿ ಪ್ರಕಾರ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಲಭ್ಯತೆ ಸ್ಕ್ಯಾನ್ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಮುಂಬೈ ಇಂಡಿಯನ್ಸ್ ಏಪ್ರಿಲ್ 16ರಂದು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಆತಿಥ್ಯ ವಹಿಸಲಿದೆ.

IPL 2026: ಆರ್‌ಸಿಬಿ ಪಂದ್ಯದ ವೇಳೆ ಮೊಬೈಲ್‌ ಬಳಸಿದ್ದೇಕೆಂದು ಕಾರಣ ತಿಳಿಸಿದ ಆರ್‌ಆರ್‌ ಮ್ಯಾನೇಜರ್‌!

ರೋಹಿತ್ ಆಡಲು ಸಾಧ್ಯವಾಗದಿದ್ದರೆ, ಅದು ಮಂಬೈಗೆ ದೊಡ್ಡ ಹೊಡೆತವಾಗಲಿದೆ. ಬಲಗೈ ಬ್ಯಾಟ್ಸ್‌ಮನ್ ಆಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ 137 ರನ್ ಗಳಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 78 ರನ್‌ಗಳ ಗೆಲುವಿನ ಇನಿಂಗ್ಸ್‌ ಆಡಿದ್ದರು.

ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲು

241 ರನ್‌ಗಳ ಗುರಿಯನ್ನು ಹಿಂಬಾಲಿಸಲು ವಿಫಲವಾದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 18 ರನ್‌ಗಳ ಸೋಲು ಕಂಡಿತು. ರಯಾನ್ ರಿಕೆಲ್ಟನ್‌ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲವಾಗಿ, 22 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ ದೊಡ್ಡ ಇನಿಂಗ್ಸ್ ಆಡಲು ವಿಫಲವಾಗಿ, 33 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.

ಕೊಹ್ಲಿ, ರೋಹಿತ್‌ಗೆ ಗಾಯ; ಮುಂದಿನ ಐಪಿಎಲ್‌ ಪಂದ್ಯಗಳಿಗೆ ಅನುಮಾನ!

ಮುಂಬೈ ಇಂಡಿಯನ್ಸ್ ತಮ್ಮ ನಿರೀಕ್ಷೆಯನ್ನು ಹಾರ್ದಿಕ್ ಪಾಂಡ್ಯ ಮೇಲೆ ಇಟ್ಟಿದೆ. ಅವರು 22 ಎಸೆತಗಳಲ್ಲಿ 40 ರನ್ ಗಳಿಸಿ 15ನೇ ಓವರ್‌ನಲ್ಲಿ ಔಟಾದರು. ನಂತರ ಶೆರ್ಫೆನ್‌ ಋದರ್‌ಫೋರ್ಡ್‌ ಅವರು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದು ಅಜೇಯ 71 ರನ್‌ ಸಿಡಿಸಿ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲುವಿನ ಸನಿಹ ತಂದಿದ್ದರು, ಆದರೆ ಅಂತಿಮವಾಗಿ ಮುಂಐ ಇಂಡಿಯನ್ಸ್‌ 18 ರನ್‌ಗಳಿಂದ ಸೋಲು ಅನುಭವಿಸಿತ್ತು.

ಐದು ಬಾರಿ ಐಪಿಎಲ್ ಚಾಂಪಿಯನ್‌ಗಳಾದ ಎಂಐ, 221 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯದಿಂದ ತಮ್ಮ ಅಭಿಯಾನವನ್ನು ಆರಂಭಿಸಿತ್ತು. ಆದರೆ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 163 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ವಿಫಲವಾಯಿತು. ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಎರಡನೇ ಸೋಲನ್ನು ಅನುಭವಿಸಿತು.