ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ʻಎಂಎಸ್‌ ಧೋನಿ ಆಡುವುದಿಲ್ಲವಾದರೆ ರಿಲೀಸ್‌ ಮಾಡಿʼ-ಸಿಎಸ್‌ಕೆಗೆ ಆರ್‌ ಅಶ್ವಿನ್‌ ಸಲಹೆ!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಮಹತ್ವದ ಸಲಹೆ ನೀಡಿದ್ದಾರೆ. ಧೋನಿ ಅವರು ಮುಂದಿನ ಸೀಸನ್‌ನಲ್ಲಿ ಆಡುವುದಿಲ್ಲವಾದರೆ ರಿಲೀಸ್‌ ಮಾಡಬೇಕೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IPL 2027: ಎಂಎಸ್‌ ಧೋನಿಯನ್ನು ರಿಲೀಸ್‌ ಮಾಡಿ ಎಂದ ಅಶ್ವಿನ್‌!

ಎಂಎಸ್‌ ಧೋನಿಯನ್ನು ರಿಲೀಸ್‌ ಮಾಡಬೇಕೆಂದ ಆರ್‌ ಅಶ್ವಿನ್‌. -

Profile
Ramesh Kote Nov 17, 2026 2:59 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2027 Mini Auction) ಮಿನಿ ಹರಾಜಿನ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎಂಎಸ್‌ ಧೋನಿಯನ್ನು (MS Dhoni) ರಿಲೀಸ್‌ ಮಾಡಬೇಕೆಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಸಲಹೆ ನೀಡಿದ್ದಾರೆ. ಮಾಜಿ ನಾಯಕ ಮುಂದಿನ ಐಪಿಎಲ್‌ ಟೂರ್ನಿಯಲ್ಲಿ ಆಡುವುದಿಲ್ಲವಾದರೆ, ಹಿರಿಯ ಆಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌, 45ರ ವಯಸ್ಸಿನ ಮಾಜಿ ನಾಯಕನ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮುಂದಿನ ಸೀಸನ್‌ನಲ್ಲಿ ಎಂಎಸ್‌ ಧೋನಿ ಆಡುವುದಿಲ್ಲ ಎಂದು ಖಚಿತವಾದರೆ, ಅವರನ್ನು ಬಿಡುಗಡೆ ಮಾಡುವುದು ಒಳ್ಳೆಯದು. ಎಂದಿದ್ದಾರೆ. ಆ ಮೂಲಕ ಚೆನ್ನೈ ಫ್ರಾಂಚೈಸಿ ಖಾತೆಯಲ್ಲಿ 4 ಕೋಟಿ ರು ಉಳಿತಾಯವಾಗಲಿದೆ ಎಂದಿದ್ದಾರೆ. ಇದರೊಂದಿಗೆ ರಾಹುಲ್‌ ಚಹರ್‌, ಪ್ರಶಾಂತ್‌ ವೀರ್‌, ಮ್ಯಾಟ್‌ ಶಾರ್ಟ್‌ ಹಾಗೂ ಕಾರ್ತಿಕ್‌ ಶರ್ಮಾ ಅವರನ್ನು ಪರಿಗಣಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಇಂದು ಐಪಿಎಲ್​ ತಂಡಗಳ ರಿಟೇನ್​ ಪಟ್ಟಿ ಪ್ರಕಟ; ಧೋನಿ ನಿವೃತ್ತಿ ಭವಿಷ್ಯ ಪ್ರಕಟ ಸಾಧ್ಯತೆ

"ಸಿಎಸ್‌ಕೆ ರಾಹುಲ್‌ ಚಹರ್‌ ಅವರನ್ನು ರಿಲೀಸ್‌ ಮಾಡಬಹುದು. ಇವರ ಜೊತೆಗೆ ಪ್ರಶಾಂತ್‌ ವೀರ್‌ ಕೂಡ. ಎಂಎಸ್‌ ಧೋನಿ ಬಗ್ಗೆ ಏನು? ಅವರು ಬಿಡುಗಡೆಗೊಳ್ಳಬಲ್ಲ ಆಸಕ್ತದಾಯಕ ವಿಷಯ. ಅವರು ಆಡದೇ ಉಳಿಯಲು ಬಯಸಬಹುದು ಹಾಗೂ ಅದರಿಂದ ತಂಡಕ್ಕೆ 4 ಕೋಟಿ ರು. ಗಳು ಸಿಗಬಹುದು. ಅವರು ಮುಂದಿನ ಟೂರ್ನಿಯಲ್ಲಿ ಆಡುವುದಿಲ್ಲವಾದರೆ, ನಿಮಗೆ 4 ಕೋಟಿ ರು. ಗಳು ಸಿಗಲಿದೆ ಎಂಬುದನ್ನು ನೀವು ಪರಿಗಣಿಸಬೇಕಾಗುತ್ತದೆ. ಮ್ಯಾಥ್ಯೂ ಶಾರ್ಟ್‌ ಅವರನ್ನು ಬಳಸಿಕೊಳ್ಳುವುದಿಲ್ಲವಾದರೆ, ಅವರನ್ನು ಕೂಡ ನೀವು ರಿಲೀಸ್‌ ಮಾಡಬಹುದು. ಕಾರ್ತಿಕ್‌ ಶರ್ಮಾ ಮತ್ತೊಂದು ಆಯ್ಕೆ. ಈ ಆಟಗಾರರನ್ನು ನೀವು ರಿಲೀಸ್‌ ಮಾಡಿದರೆ, 40 ರಿಂದ 45 ಕೋಟಿ ರು. ಗಳು ಉಳಿಯಲಿದೆ," ಎಂದು ಅಶ್ವಿನ್‌ ತಿಳಿಸಿದ್ದಾರೆ.

ಕಾರ್ತಿಕ್ ಶರ್ಮಾ ಅವರನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಮತ್ತೆ ಖರೀದಿಸುವ ಸಾಧ್ಯತೆಯ ಬಗ್ಗೆಯೂ ರವಿಚಂದ್ರನ್ ಅಶ್ವಿನ್ ಒಲವು ವ್ಯಕ್ತಪಡಿಸಿದ್ದಾರೆ. ಕಳೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕಾರ್ತಿಕ್ ಶರ್ಮಾ ಅವರನ್ನು ಬರೋಬ್ಬರಿ 14.2 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಮೂಲಕ ಅವರು ಪ್ರಶಾಂತ್ ವೀರ್ ಅವರೊಂದಿಗೆ ಅನ್‌ಕ್ಯಾಪ್ಡ್ ಆಟಗಾರರ ಪೈಕಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ದಾಖಲೆ ಹಂಚಿಕೊಂಡಿದ್ದರು.

ಕೋಟಿ ವೇತನ ಕಡಿತದೊಂದಿಗೆ ಗುಜರಾತ್ ಟೈಟಾನ್ಸ್ ಸೇರಿದ ಹರ್ಷಲ್ ಪಟೇಲ್

"ಕಾರ್ತಿಕ್ ಶರ್ಮಾ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬಹುದು. ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಾರೆ. ಆದರೆ ಶಿವಂ ದುಬೆ ಕೂಡ ಆ ಸ್ಥಾನದಲ್ಲಿ ಆಡಬಲ್ಲರು. ಡೆವಾಲ್ಡ್ ಬ್ರೆವಿಸ್ ಕೂಡ ಇದೇ ಕ್ರಮಾಂಕದಲ್ಲಿ ಆಡುತ್ತಾರೆ. ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಈ ಇಬ್ಬರೂ ಅದೇ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ತಂಡದಲ್ಲಿ ಈಗಾಗಲೇ ಊರ್ವಿಲ್ ಪಟೇಲ್ ವಿಕೆಟ್ ಕೀಪರ್ ಆಗಿದ್ದಾರೆ. ಒಂದು ವೇಳೆ ನಿಮಗೆ ಕಾರ್ತಿಕ್ ಶರ್ಮಾ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕೆಂದಿದ್ದರೆ, ಮೊದಲು ಅವರನ್ನು ಬಿಡುಗಡೆ ಮಾಡಿ, ನಂತರ ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಪ್ರಯತ್ನಿಸಬಹುದು," ಎಂದು ಅಶ್ವಿನ್ ತಿಳಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕಾರ್ತಿಕ್ ಶರ್ಮಾ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು 32.7ರ ಸರಾಸರಿಯಲ್ಲಿ ಒಟ್ಟು 295 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು.