ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ವಿನಿಮಯ ಮಾಡಿಕೊಳ್ಳಲಿರುವ ಮೂವರು ಆಟಗಾರರು!

ಮುಂದಿನ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿಗೆ ಇನ್ನೇನು ಸಮಯ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಅಗತ್ಯ ತಯಾರಿ ನಡೆಸುತ್ತಿವೆ. ಅದರಂತೆ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡ ಸಜ್ಜಾಗುತ್ತಿದೆ. ಬೆಂಗಳೂರು ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ಟ್ರೇಡ್‌ ಡೀಲ್‌ ಮಾಡಿಕೊಳ್ಳಬಲ್ಲ ಮೂವರು ಆಟಗಾರರ ಬಗ್ಗೆ ಇಲ್ಲಿ ವಿವರಸಲಾಗಿದೆ.

ಆರ್‌ಸಿಬಿ ಟ್ರೇಡ್‌ ಡೀಲ್‌ ಮಾಡಿಕೊಳ್ಳಲಿರುವ ಮೂವರು ಆಟಗಾರರು!

ಈ ಬಾರಿ ಆರ್‌ಸಿಬಿ ಟ್ರೇಡ್‌ ಡೀಲ್‌ ಮಾಡಬಲ್ಲ ಮೂವರು ಆಟಗಾರರು. -

Profile Ramesh Kote Oct 24, 2025 3:48 PM

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ (Royal Challengers Bengaluru) ಚೊಚ್ಚಲ ಕಪ್‌ ಗೆಲ್ಲುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡಿತ್ತು. ಇದೀಗ 2026ರ ಐಪಿಎಲ್‌ ಟೂರ್ನಿಯಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಆರ್‌ಸಿಬಿ ಎದುರು ನೋಡುತ್ತಿದೆ. ಅದರಂತೆ ಮುಂದಿನ ತಿಂಗಳು ನಡೆಯುವ ಆಟಗಾರರ ಮಿನಿ ಹರಾಜಿಗೆ ಆರ್‌ಸಿಬಿ ಸಜ್ಜಾಗುತ್ತಿದೆ.

ಕಳೆದ ಆವೃತ್ತಿಯಲ್ಲಿ ಆಡಿದ ಬಹುತೇಕ ಆಟಗಾರರನ್ನು ಮುಂದಿನ ಸೀಸನ್‌ಗೂ ಉಳಿಸಿಕೊಳ್ಳಲಾಗುತ್ತದೆ. ಆದರೆ ಗಾಯ ಹಾಗೂ ಫಾರ್ಮ್‌ ಆಧಿರಿಸಿ ಕೆಲ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಕೈ ಬಿಡುವ ಸಾಧ್ಯತೆ ಇದೆ. ಅಂದ ಹಾಗೆ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಟ್ರೇಡ್‌ ಡೀಲ್‌ ಮಾಡಿಕೊಳ್ಳಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ

ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಟ್ರೇಡ್‌ ಡೀಲ್‌ ಮಾಡಿಕೊಳ್ಳಬಲ್ಲ ಮೂವರು

1.ಜಾಕೋಬ್‌ ಬೆಥೆಲ್‌

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಜಾಕೋಬ್‌ ಬೆಥೆಲ್‌ ಅವರನ್ನು ಆಸಿಬಿ 2.6 ಕೋಟಿ ರೂ. ಗಳಿಗೆ ಖರೀದಿಸಿತ್ತು. ಹರಾಜಿಗೂ ಬರುವ ಮುನ್ನ ಬೆಥೆಲ್‌, ಇಂಗ್ಲೆಂಡ್‌ ವೈಟ್‌ ಬಾಲ್‌ ತಂಡಕ್ಕೆ ಆಯ್ಕೆಯಾಗಿದ್ದರು. ತಮ್ಮ ಆಲ್‌ರೌಂಡರ್‌ ಸಾಮರ್ಥ್ಯದ ಕಾರಣ ಅವರು ದುಬಾರಿ ಬೆಲೆಯನ್ನು ಪಡೆದಿದ್ದರು. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯ ನಿಮಿತ್ತ ಅವರು ಪ್ಲೇಆಫ್ಸ್‌ ಪಂದ್ಯಗಳಿಂದ ಹೊರ ನಡೆದಿದ್ದರು. ಅಂದ ಹಾಗೆ ಚನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ತವರು ಅಂಗಣದಲ್ಲಿ ಬೆಥೆಲ್‌ ಅರ್ಧಶತಕವನ್ನು ಬಾರಿಸಿದ್ದರು. ಕಳೆದ ಸೀಸನ್‌ನಲ್ಲಿ ಅವರ ಎಡಗೈ ಸ್ಪಿನ್‌ ಬೌಲಿಂಗ್‌ ಅನ್ನು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ನೊಂದಿಗೆ ಬೆಂಗಳೂರು ಫ್ರಾಂಚೈಸಿ ಟ್ರೇಟ್‌ ಡೀಲ್‌ ಮಾಡಿಕೊಳ್ಳುವ ಸಾಧ್ಯತೆ ಇದೆ.

IPL 2026: ಸುಂದರ್‌ ಸಿಎಸ್‌ಕೆಗೆ ವರ್ಗಾವಣೆ?; ಇಶಾನ್‌ ಕಿಶನ್‌ಗೆ 3 ಫ್ರಾಂಚೈಸಿ ಪೈಪೋಟಿ

2.ಲುಂಗಿ ಎನ್ಗಿಡಿ

ಕಳೆದ ವರ್ಷ ನಡೆದಿದ್ದ ಮೆಗಾ ಆಕ್ಷನ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಲುಂಗಿ ಎನ್ಗಿಡಿ ಅವರನ್ನು ಬೆಂಗಳೂರು ಫ್ರಾಂಚೈಸಿ ಒಂದು ಕೋಟಿ ರೂ. ಗಳನ್ನು ನೀಡಿ ಖರೀದಿಸಿತ್ತು. 2021ರಿಂದ ಐಪಿಎಲ್‌ ಮರಳುತ್ತಿದ್ದ ಲುಂಗಿ ಎನ್ಗಿಡಿ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಎರಡು ರನ್‌ನಿಂದ ಗೆಲ್ಲಲು ಎನ್ಗಿಡಿ ನೆರವು ನೀಡಿದ್ದರು. ಅವರಯ ಈ ಪಂದ್ಯದಲ್ಲಿ 30 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದರು.

ಆದರೆ ಬೆಥೆಲ್ ಅವರಂತೆಯೇ, ಎನ್ಗಿಡಿ ಕೂಡ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು, ನಂತರ ರಾಷ್ಟ್ರೀಯ ಬದ್ಧತೆಗಳ ಕಾರಣದಿಂದಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಾಯಿತು. ಅವರ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಲಾಯಿತು.

IPL Trophy: IPL​ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕ; ಏನಿದರ ಅರ್ಥ ನಿಮಗೆ ಗೊತ್ತಾ?

3.ರಾಸಿಖ್‌ ಸಲಾಮ್‌

ಆರು ಕೋಟಿ ರೂ. ಗಳಿಗೆ ಆರ್‌ಸಿಬಿಗೆ ಸೇರುವುದಕ್ಕೂ ಮುನ್ನ ಯುವ ವೇಗಿ ರಾಸಿಖ್‌ ದಾರ್‌ ಸಲಾಮ್‌ ಮೂರು ವಿಭಿನ್ನ ಫ್ರಾಂಚೈಸಿಗಳ ಪರ ಆಡಿದ್ದರು. ಬೆಥೆಲ್‌ ಹಾಗೂ ಲುಂಗಿ ಎನ್ಗಿಡಿ ಅವರ ರೀತಿ ರಾಸಿಖ್‌ ಕೂಡ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಆದರೂ ಅವರು ತಮ್ಮ ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿರಲಿಲ್ಲ.

ಆರ್‌ಸಿಬಿಗೂ ಮುನ್ನ ಸಲಾಮ್‌ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದರು. ಕಳೆದ ಸೀಸನ್‌ನಲ್ಲಿ ಡೆಲ್ಲಿ ಪರ ಆಡಲು ಅವರು ಬಯಸಿದ್ದರು. ಆದರೆ, ಕೊನೆಯ ಹಂತದಲ್ಲಿ ಆರ್‌ಸಿಬಿ ಟ್ರೇಡ್‌ ಡೀಲ್‌ ಮೂಲಕ ಅವರನ್ನು ಕರೆದುಕೊಂಡಿತ್ತು. ಇದೀಗ ಯುವ ವೇಗಿಯನ್ನು ಟ್ರೇಡ್‌ ಡೀಲ್‌ ಮೂಲಕ ಬದಲಾಯಿಸುವ ಸಾಧ್ಯತೆ ಇದೆ.