ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs KKR: ಸುನೀಲ್‌ ನರೇನ್‌ ಆಲ್‌ರೌಂಡ್‌ ಆಟದಿಂದ ಗೆದ್ದ ಕೋಲ್ಕತಾ ನೈಟ್‌ ರೈಡರ್ಸ್!‌

DC vs KKR Match Highlights: ಸುನೀಲ್‌ ನರೇನ್‌ ಆಲ್‌ರೌಂಡ್‌ ಆಟದ ನೆರವಿನಿಂದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು 14 ರನ್‌ಗಳ ಗೆಲುವು ಪಡೆಯಿತು.

DC vs KKR: ಡೆಲ್ಲಿ ಎದುರು ಕೋಲ್ಕತಾಗೆ ಅಧಿಕಾರಯುತ ಜಯ!

ಡೆಲ್ಲಿ ಎದುರು ಕೋಲ್ಕತಾಗೆ ಜಯ.

Profile Ramesh Kote Apr 30, 2025 12:41 AM

ನವದೆಹಲಿ: ಸುನೀಲ್‌ ನರೇನ್‌ ಆಲ್‌ರೌಂಡ್‌ ಆಟದ ಬಲದಿಂದ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ತಂಡ, ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 14 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸುವ ಮೂಲಕ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌, ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ತವರು ಅಂಗಣದಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಉಳಿದಿದೆ.

ಮಂಗಳವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸುನೀಲ್‌ ನರೇನ್‌ ಸ್ಪಿನ್‌ ಮೋಡಿಗೆ ನಲುಗಿ 20 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳಿಗೆ ಸೀಮಿತವಾಯಿತು.

IPL 2025: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ವಿಕ್ರಮ್‌ ರಾಥೋಡ್‌!

ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಫಾಪ್‌ ಡು ಪ್ಲೆಸಿಸ್‌, 45 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ 62 ರನ್‌ ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 15.2 ಓವರ್‌ಗಳಿಗೆ 146 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಅಂತಿಮವಾಗಿ ಇವರು ಸುನೀಲ್‌ ನರೇನ್‌ಗೆ ವಿಕೆಟ್‌ ಒಪ್ಪಿಸಿದರು.

ಫಾಫ್‌ ಔಟ್‌ ಆಗುವುದಕ್ಕೂ ಮುನ್ನ ಒಂದು ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ನಾಯಕ ಅಕ್ಷರ್‌ ಪಟೇಲ್ 23‌ ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿದ್ದರು. ಆದರ, ಇವರನ್ನು ಮುಂದುವರಿಯಲು ನರೇನ್‌ ಬಿಡಲಿಲ್ಲ.

ಆದರೆ, ಅಭಿಷೇಕ್‌ ಪೊರೆಲ್‌, ಕೆಎಲ್‌ ರಾಹುಲ್‌, ಕರುಣ್‌ ನಾಯಕ, ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಆಶುತೋಷ್‌ ಶರ್ಮಾ ಅವರು ನಿರಾಸೆ ಮೂಡಿಸಿದರು. ಅಂತಿಮ ಹಂತದಲ್ಲಿ ವಿಪ್ರಜ್‌ ನಿಗಮ್‌ 19 ಎಸೆತಗಳಲ್ಲಿ 38 ರನ್‌ ಸಿಡಿಸಿದರೂ ಡೆಲ್ಲಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

IPL 2025: ಸೂರ್ಯವಂಶಿ ಶತಕ ಕಂಡು ವೀಲ್‌ ಚೇರ್‌ನಿಂದ ಎದ್ದು ಸಂಭ್ರಮಿಸಿದ ದ್ರಾವಿಡ್‌

ಕೆಕೆಆರ್‌ ಪರ ಸ್ಪಿನ್‌ ಮೋಡಿ ಮಾಡಿದ್ದ ಸುನೀಲ್‌ ನರೇನ್‌ 4 ಓವರ್‌ಗಳಿಗೆ 29 ರನ್‌ ನೀಡಿ 3 ವಿಕೆಟ್‌ ಕಿತ್ತರು.

ರಘುವಂಶಿ 44 ರನ್‌

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ಅರ್ಧಶತಕಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಲಿಲ್ಲ. ಆದರೆ, ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಯೋಗ್ಯ ಪ್ರದರ್ಶನ ತೋರುವಲ್ಲಿ ಸಫಲರಾದರು. ರೆಹಮಾನುಲ್ಲಾ ಗುರ್ಬಾಜ್‌ ಹಾಗೂ ಅಜಿಂಕ್ಯ ರಹಾನೆ ತಲಾ 26 ರನ್‌ಗಳನ್ನು ಕಲೆ ಹಾಕಿದರೆ, ಸುನೀಲ್‌ ನರೇನ್‌ 27 ರನ್‌ ಹಾಗೂ ಅಂಗ್‌ಕ್ರಿಷ್‌ ರಘುವಂಶಿ 44 ರನ್‌ಗಳ ಉಪಯುಕ್ತ ಕೊಟುಗೆಯನ್ನು ನೀಡಿದರು. ನಂತರ ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ 36 ರನ್‌ ಹಾಗೂ ಆಂಡ್ರೆ ರಸೆಲ್‌ 17 ರನ್‌ ಸಿಡಿಸಿದ್ದರು. ಆ ಮೂಲಕ ಕೆಕೆಆರ್‌ 200ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿತ್ತು.

ಡೆಲ್ಲಿ ಪರ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಕಿತ್ತರೆ, ಅಕ್ಷರ್‌ ಪಟೇಲ್‌ ಹಾಗೂ ವಿಪ್ರಜ್‌ ನಿಗಮ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.