ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: 759 ರನ್ ಗಳಿಸಿ ಶುಭಮನ್ ಗಿಲ್ ದಾಖಲೆ ಮುರಿದ ಸಾಯಿ ಸುದರ್ಶನ್!

Sai Sudharsan scripts IPL history: ಗುಜರಾತ್ ಟೈಟನ್ಸ್ ಯುವ ಆರಂಭಿಕ ಸಾಯಿ ಸುದರ್ಶನ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 750ಕ್ಕೂ ಅತಿ ಹೆಚ್ಚು ರನ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಯಕ ಹಾಗೂ ತಮ್ಮ ಸಹ ಆಟಗಾರ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಈ ದಾಖಲೆ ಬರೆದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

IPL 2025: ಶುಭಮನ್‌ ಗಿಲ್‌ ದಾಖಲೆ ಮುರಿದ ಸಾಯಿ ಸುದರ್ಶನ್‌!

ಶುಭಮನ್‌ ಗಿಲ್‌ ದಾಖಲೆ ಮುರಿದ ಸಾಯಿ ಸುದರ್ಶನ್‌.

Profile Ramesh Kote May 31, 2025 8:54 PM

ನವದೆಹಲಿ: ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಗುಜರಾತ್ ಟೈಟನ್ಸ್ (GT) ತಂಡದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ (Sai Sudarshan) ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (80 ರನ್) ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ನ ಏಕೈಕ ಆವೃತ್ತಿಯಲ್ಲಿ 700ಕ್ಕೂ ಅಧಿಕ ರನ್ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾಗಿ ತಮ್ಮ ನಾಯಕ ಹಾಗೂ ಸಹ ಆಟಗಾರ ಶುಭಮನ್ ಗಿಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಶುಕ್ರವಾರ ಚಂಡೀಗಢದ ಮುಲ್ಲನ್‌ಪುರದಲ್ಲಿನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್ 80 ರನ್ ಸಿಡಿಸಿದ ಹೊರತಾಗಿಯು ಜಿಟಿ 20 ರನ್‌ಗಳಿಂದ ಸೋಲು ಕಂಡು ಎಲಿಮಿನೇಟರ್-2ರ ರೇಸ್ ನಿಂದ ಹೊರಬಿದ್ದಿತು. ಆದರೆ ಟೂರ್ನಿಯಲ್ಲಿ ಸಾಯಿ ಸುದರ್ಶನ್ ಒಟ್ಟಾರೆ 759 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

IPL 2025: ಕೊಹ್ಲಿ-ಎಬಿಡಿ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ಗಿಲ್‌-ಸುದರ್ಶನ್!

ಏಕೈಕ ಆವೃತ್ತಿಯಲ್ಲಿ ಅತಿ ಹೆಚ್ಚು ರನ್

ಗುಜರಾತ್ ಟೈಟನ್ಸ್ ಎಡಗೈ ಆಟಗಾರ ಸಾಯಿ ಸುದರ್ಶನ್ 759 ರನ್ ಗಳಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಏಕೈಕ ಆವೃತ್ತಿಯಲ್ಲಿ 750ಕ್ಕೂ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡಿದ್ದಾರೆ.

* 973 ರನ್ - ವಿರಾಟ್ ಕೊಹ್ಲಿ - 2016

* 890 ರನ್- ಶುಭಮನ್ ಗಿಲ್ - 2023

* 863 ರನ್- ಜೋಸ್ ಬಟ್ಲರ್ - 2022

* 848 ರನ್- ಡೇವಿಡ್ ವಾರ್ನರ್ - 2016

MI vs GT: ಗುಜರಾತ್‌ ಟೈಟನ್ಸ್‌ ಕನಸು ಭಗ್ನ, ಎರಡನೇ ಕ್ವಾಲಿಫೈಯರ್‌ಗೆ ಮುಂಬೈ ಇಂಡಿಯನ್ಸ್‌!

700ಕ್ಕೂ ಅತಿ ಹೆಚ್ಚು ರನ್ ಗಳಿಸಿದ ಯುವ ಆಟಗಾರ

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ಆಟಗಾರನಾಗಿ ಅಲ್ಲದೆ ತಂಡದ ಪರ ಆಂಕರ್ ಪಾತ್ರ ನಿರ್ವಹಿಸಿ ರನ್ ಹೊಳೆ ಹರಿಸುವ ಮೂಲಕ ತಂಡದ ಗೆಲುವಿನ ರೂವಾರಿ ಆಗಿರುವ ಸಾಯಿ ಸುದರ್ಶನ್, ಐಪಿಎಲ್ ಟೂರ್ನಿಯ ಏಕೈಕ ಆವೃತ್ತಿಯಲ್ಲಿ 700ಕ್ಕೂ ಹೆಚ್ಚು ರನ್ ಸಿಡಿಸಿದ 9ನೇ ಆಟಗಾರನಾಗಿ ಗುರುತಿಸಿಕೊಂಡರು. ಅಲ್ಲದೆ 23 ವರ್ಷ 227 ದಿನಗಳಲ್ಲೇ ಐಪಿಎಲ್ ಟೂರ್ನಿಯಲ್ಲಿ 750ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಶುಭಮನ್ ಗಿಲ್ (23 ವರ್ಷ 257 ದಿನ) ದಾಖಲೆ ಹಿಂದಿಕ್ಕಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಆಗಿದ್ದಾರೆ.

IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಸುದರ್ಶನ್

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳಿಂದ 156.17 ಸ್ಟ್ರೆಕ್ ರೇಟ್ ನಲ್ಲಿ ಒಂದು ಶತಕ ಹಾಗೂ 6 ಅರ್ಧಶತಕಗಳ ನೆರವಿನಿಂದ 759 ರನ್ ಸಿಡಿಸಿರುವ ಸಾಯಿ ಸುದರ್ಶನ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇದರಲ್ಲಿ 88 ಬೌಂಡರಿ ಹಾಗೂ 21 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್‌ನ ಸೂರ್ಯ ಕುಮಾರ್ ಯಾದವ್ (673 ರನ್) ಪ್ರಬಲ ಪೈಪೋಟಿ ನೀಡಿದರೆ, ಶುಭಮನ್ ಗಿಲ್ (650 ರನ್), ಮಿಚೆಲ್ ಮಾರ್ಷ್ (627 ರನ್) ಹಾಗೂ ವಿರಾಟ್ ಕೊಹ್ಲಿ (614 ರನ್) ಟಾಪ್ 5ರಲ್ಲಿದ್ದಾರೆ.