ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: 5ನೇ ಒಡಿಐ ಗೆದ್ದರೂ ಭಾರತ ತಂಡದ ನಿರ್ಧಾರಗಳನ್ನು ಟೀಕಿಸಿದ ಮುರಳಿ ಕಾರ್ತಿಕ್‌!

ನ್ಯೂಜಿಲೆಂಡ್‌ ವಿರುದ್ಧದ ಐದನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಕಠಿಣ ಹೋರಾಟ ನಡೆಸಿ 22 ರನ್‌ಗಳ ರೋಚಕ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು. ಆದರೂ ಭಾರತ ತಂಡದ ನಿರ್ಧಾರಗಳನ್ನು ಮುರಳಿ ಕಾರ್ತಿಕ್‌ ಟೀಕಿಸಿದ್ದಾರೆ.

ಭಾರತ ತಂಡದ ನಿರ್ಧಾರಗಳನ್ನು ಟೀಕಿಸಿದ ಮುರಳಿ ಕಾರ್ತಿಕ್‌!

ಭಾರತ ತಂಡದ ನಿರ್ಧಾರಗಳನ್ನು ಟೀಕಿಸಿದ ಮುರಳಿ ಕಾರ್ತಿಕ್‌. -

Profile
Ramesh Kote Nov 15, 2026 6:42 PM

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ನವೆಂಬರ್ 15ರಂದು ಮೌಂಟ್ ಮಾಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿತು.

ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಮತ್ತೊಮ್ಮೆ ವಿಫಲರಾದರು. ನ್ಯೂಜಿಲೆಂಡ್ ಬೌಲರ್‌ಗಳ ಸಂಘಟಿತ ದಾಳಿಯನ್ನು ಎದುರಿಸಲು ಭಾರತೀಯ ಬ್ಯಾಟರ್‌ಗಳು ಪರದಾಡಿದರು. ಮಧ್ಯಮ ಕ್ರಮಾಂಕದ ಆಟಗಾರರ ಹೋರಾಟದಿಂದಾಗಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 209 ರನ್ ಗಳಿಸಲು ಸಾಧ್ಯವಾಯಿತು.

IND vs NZ: 5 ರನ್‌ಗೆ ಔಟ್‌ ಆಗಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ವಿರಾಟ್‌ ಕೊಹ್ಲಿ!

ಇಶಾನ್‌ ಕಿಶನ್‌ ಬ್ಯಾಟಿಂಗ್‌ ಕ್ರಮಾಂಕವನ್ನು ಪ್ರಶ್ನಿಸಿದ ಕಾರ್ತಿಕ್‌

ಭಾರತ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್, ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಇಶಾನ್ ಕಿಶನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿರುವುದನ್ನು ಪ್ರಶ್ನಿಸಿದ್ದಾರೆ.

"ಇಶಾನ್ ಕಿಶನ್ ಅವರನ್ನು ದಿಢೀರನೆ ಕೆಳ ಕ್ರಮಾಂಕಕ್ಕೆ ಕಳುಹಿಸಿದ್ದೇಕೆ? ಅವರಿಂದ ತಂಡ ಯಾವ ರೀತಿಯ ಬಹುಮುಖ ಪ್ರತಿಭೆಯನ್ನು ನಿರೀಕ್ಷಿಸುತ್ತಿದೆ? ಅವರು ಅಗ್ರ ಮೂರು ಕ್ರಮಾಂಕಗಳಲ್ಲಿ ಆಡದಿದ್ದರೂ, ಆರನೇ ಕ್ರಮಾಂಕಕ್ಕೆ ಇಳಿಸುವ ಹಿಂದಿನ ಉದ್ದೇಶವೇನು? ಹೊಸ ಚೆಂಡನ್ನು ಎದುರಿಸುವುದರಿಂದ ಕಿಶನ್ ಅವರನ್ನು ರಕ್ಷಿಸಲು ಅಕ್ಷರ್ ಪಟೇಲ್ ಅವರನ್ನು ಮೊದಲು ಕಳುಹಿಸಿದ್ದರೆ, ಅದು ಹಗಲಿನ ಪಂದ್ಯದಲ್ಲಿ ನೈಟ್ ವಾಚ್‌ಮನ್‌ನಂತೆ ಕಾಣುತ್ತದೆ," ಎಂದು ಮುರಳಿ ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.

AUS vs ENG: 50 ರನ್‌ ಬಾರಿಸಿ ಒಡಿಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಜೋ ರೂಟ್‌!

"ನಾನು ಇಶಾನ್ ಕಿಶನ್ ಅವರನ್ನು ಫಿನಿಶರ್ ಎಂದು ಪರಿಗಣಿಸುವುದಿಲ್ಲ. ಬದಲಾಗಿ, ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲಕ್ಕೆ ಕಳುಹಿಸಬೇಕು ಎಂದು ಬಯಸುತ್ತೇನೆ. ಏಕೆಂದರೆ ಅವರು ಆರಂಭಿಕ ಆಟಗಾರರಾಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಅಗ್ರ ಮೂರು ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಿರುವಾಗ ಅವರನ್ನು ಫಿನಿಶರ್ ಆಗಿ ಬಳಸುವ ಅಗತ್ಯವೇನಿದೆ? ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರ ಆಟಗಾರರಿದ್ದಾರೆ. ನನ್ನ ಪ್ರಕಾರ ಕಿಶನ್ ಫಿನಿಶರ್ ಅಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಷರ್‌-ಕಿಶನ್‌ ಬ್ಯಾಟಿಂಗ್‌ಗೆ ಮೆಚ್ಚುಗೆ

ಇನ್ನೊಂದೆಡೆ, ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಭಾರತದ ಬ್ಯಾಟಿಂಗ್ ಪ್ರದರ್ಶನದಲ್ಲಿನ ಸಕಾರಾತ್ಮಕ ಅಂಶಗಳನ್ನು ಗುರುತಿಸಿದ್ದಾರೆ. ವಿಶೇಷವಾಗಿ ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ಅವರ ಹೋರಾಟವನ್ನು ಮೆಚ್ಚಿಕೊಂಡಿದ್ದಾರೆ.

ಕಿವೀಸ್‌ ವಿರುದ್ಧ ರೋಚಕ ಗೆಲುವಿನೊಂದಿಗೆ ಏಕದಿನ ಸರಣಿ ಗೆದ್ದ ಭಾರತ

"ಅಕ್ಷರ್ ಪಟೇಲ್ ಉದ್ದೇಶಪೂರ್ವಕವಾಗಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ್ದು ಸಕಾರಾತ್ಮಕ ಅಂಶವಾಗಿತ್ತು. ವೇಗದ ಬೌಲರ್‌ಗಳ ವಿರುದ್ಧ ಈ ಹಿಂದೆ ಅವರು ಕೆಲವು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಈ ಪಂದ್ಯದಲ್ಲಿ ಅದನ್ನು ಉತ್ತಮವಾಗಿ ನಿಭಾಯಿಸಿದರು. ಇಶಾನ್ ಕಿಶನ್ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತಂಡಕ್ಕೆ ಮರಳಿದ ನಂತರ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ," ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

"ಅವರು ಹೆಚ್ಚಾಗಿ ಆಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿದರೂ, ಉತ್ತಮವಾಗಿ ಪರಿಸ್ಥಿತಿಗೆ ಹೊಂದಿಕೊಂಡು ಸೂಕ್ತ ಹೊಡೆತಗಳನ್ನು ಆಡಿದರು. ಆದರೆ, ಅವರ ಜೊತೆಗಾರರು ಒಬ್ಬೊಬ್ಬರಾಗಿ ಔಟಾಗುತ್ತಿದ್ದ ಕಾರಣ, ಸ್ಟ್ರೈಕ್ ತಮ್ಮ ಬಳಿಯೇ ಉಳಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿತ್ತು. ಹೀಗಾಗಿ ವೇಗದ ಬೌಲರ್‌ಗಳ ವಿರುದ್ಧ ಪದೇ-ಪದೆ ಆಕ್ರಮಣಕ್ಕೆ ಮುಂದಾಗಬೇಕಾಯಿತು. ಇದರಿಂದಾಗಿ ಅವರು ವಿಕೆಟ್ ಕಳೆದುಕೊಂಡರು," ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.