ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಅವಳು ನನ್ನ ಪರಿಪೂರ್ಣ ಇನಿಂಗ್ಸ್‌ʼ: ಆಕೃತಿ ಅಗರ್ವಾಲ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪೃಥ್ವಿ ಶಾ!

Prithvi Shaw engagement: ಭಾರತೀಯ ಕ್ರಿಕೆಟ್‌ನ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು ತಮ್ಮ ಗೆಳತಿ ಆಕೃತಿ ಅಗರ್ವಾಲ್‌ ಅವರೊಂದಿಗೆ ಮಾರ್ಚ್‌ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಆಕೃತಿ ಅಗರ್ವಾಲ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪೃಥ್ವಿ ಶಾ!

ಆಕೃತಿ ಅಗರ್ವಾಲ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪೃಥ್ವಿ ಶಾ. -

Profile
Ramesh Kote Mar 8, 2026 7:19 PM

ನವದೆಹಲಿ: ಕ್ರಿಕೆಟ್‌ ಅಂಗಣದಲ್ಲಿ ತಮ್ಮ ಬ್ಯಾಟ್‌ನಿಂದ ಸದ್ದು ಮಾಡುವುದನ್ನು ಕಡಿಮೆ ಮಾಡಿರುವ ಭಾರತೀಯ ಕ್ರಿಕೆಟ್‌ನ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಪೃಥ್ವಿ ಶಾ(Prithvi Shaw), ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಕ್ರಿಕೆಟ್‌ ದೇವರು ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ವಿವಾಹವಾದ ಬೆನ್ನಲ್ಲೆ ಇವರ ಶಾಲಾ ಹಾಗೂ ಬಾಲ್ಯದ ಗೆಳೆಯ ಪೃಥ್ವಿ ಶಾ ಕೂಡ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ದೊಡ್ಡ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಇವರು ತಮ್ಮ ಗೆಳತಿ ಆಕೃತಿ ಅಗರ್ವಾಲ್‌ (Akriti Agarwal) ಅವರ ಜೊತೆಗೆ ಮಾರ್ಚ್‌ 8 ರಂದು ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ ತಮ್ಮ ಗೆಳತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಒಂದು ಫೋಟೋದಲ್ಲಿ ಅವರು ಮೊಣಕಾಲಿನ ಸಹಾಯದಿಂದ ಆಕೃತಿ ಕೈ ಬೆರಳಿಗೆ ಉಂಗುರವನ್ನು ತೊಡಸುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಜೋಡಿ ತಾವು ಹಾಕಿಕೊಂಡಿರುವ ಉಂಗುರುಗಳನ್ನು ಕ್ಯಾಮೆರಾಗೆ ಪ್ರದರ್ಶಿಸುತ್ತಿದೆ. ಒಟ್ಟು ಮೂರು ಫೋಟೋಗಳನ್ನು ಪೃಥ್ವಿ ಶಾ ಹಂಚಿಕೊಂಡಿದ್ದಾರೆ.

IND vs NZ T20 World Cup Final: ನ್ಯೂಜಿಲೆಂಡ್‌ ಎದುರು ಟಾಸ್‌ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌!

ತಾವು ಹಂಚಿಕೊಂಡಿರುವ ಪೋಟೋಗಳಿಗೆ ಪೃಥ್ವಿ ಶಾ ಅವರು ಭಾವನಾತ್ಮಕ ಕ್ಯಾಪ್ಷನ್‌ ನೀಡಿದ್ದಾರೆ. “ಮೈದಾನದಲ್ಲಿ ಸಿಕ್ಸ್‌ಗಳು ಹೊಡೆಯುವುದರಿಂದ ಆರಂಭಿಸಿ, ಅದರ ಹೊರಗೂ ಜೀವನಪೂರ್ತಿ ಹಿಟ್‌ಗಳನ್ನು ಸಾಧಿಸುವವರೆಗೆ. ಅವಳು ನನ್ನ ಪರಿಪೂರ್ಣ ಇನಿಂಗ್ಸ್‌! ” ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ ಬರೆದುಕೊಂಡಿದ್ದಾರೆ. ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್‌ ಜೋಡಿಗೆ ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ. ಟೀಮ್‌ ಇಂಡಿಯಾ ಕ್ರಿಕೆಟಿಗರು, ಅಭಿಮನಿಗಳು ಸೇರಿದಂತೆ ಸಾವಿರಾರು ಮಂದಿ ಕಾಮೆಂಟ್‌ ಮಾಡಿ ಶುಭಕೋರಿದ್ದಾರೆ.

ಆಕೃತಿ ಅಗರ್ವಾಲ್‌ ಯಾರು?

ಲಖನೌ ಮೂಲದ ಆಕೃತಿ ಅಗರ್ವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿರುವ ಇನ್‌ಫ್ಲುಯೆನ್ಸರ್ ಹಾಗೂ ನಟಿ. ಅವರು ಮುಂಬೈಗೆ ತೆರಳಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ 3 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದುವಷ್ಟು ದೊಡ್ಡ ಆನ್‌ಲೈನ್ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ನಂತರ ನಟನೆಯತ್ತ ಕಾಲಿಟ್ಟ ಅವರು 'ತ್ರಿಮುಖ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು.

ಅರ್ಜುನ್‌ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ-ಆಕೃತಿ

ಇತ್ತೀಚೆಗೆ ಪೃಥ್ವಿ ಶಾ ಮತ್ತು ಅವರ ಗೆಳತಿ ಆಕೃತಿ ಅಗರ್ವಾಲ್ ಮುಂಬೈನಲ್ಲಿ ನಡೆದಿದ್ದ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಭ್ರಮದಲ್ಲಿ ಕ್ರೀಡಾ ಹಾಗೂ ಬಾಲಿವುಡ್ ಕ್ಷೇತ್ರದ ಅನೇಕ ಗಣ್ಯರು ಭಾಗವಹಿಸಿದ್ದರು.

Prithvi Shaw: ಪೃಥ್ವಿ ಶಾ ಬಿಡ್ ಮಾಡಲು ಕಾರಣ ತಿಳಿಸಿದ ಡೆಲ್ಲಿ ತಂಡದ ಸಹ-ಮಾಲೀಕ

ಮದುವೆ ಸಮಾರಂಭದಲ್ಲಿ ಪೃಥ್ವಿ ಶಾ ಮಿಡ್‌ನೈಟ್‌ ನೀಲಿ ಬಣ್ಣದ ಪರಂಪರೆಯ ಶೇರ್ವಾನಿ ಧರಿಸಿಕೊಂಡು ಕಾಣಿಸಿಕೊಂಡರು. ಅವರ ಜೊತೆಗೆ ಆಕೃತಿ ಅಗರ್ವಾಲ್ ಹೊಂದಿಕೊಂಡ ಡಿಸೈನರ್ ಲೆಹೆಂಗಾ ಧರಿಸಿ ಮಿಂಚಿದರು. ಇತರ ಗಣ್ಯ ಅತಿಥಿಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಈ ಜೋಡಿಯ ಚಿತ್ರಗಳನ್ನು ಫೋಟೋಗ್ರಾಫರ್‌ಗಳು ಸೆರೆಹಿಡಿದಿದ್ದರು.