ಟಿ20 ವಿಶ್ವಕಪ್ ಗೆಲುವನ್ನು ಆ ಮೂವರು ದಿಗ್ಗಜರಿಗೆ ಅರ್ಪಿಸಿದ ಗೌತಮ್ ಗಂಭೀರ್
T20 World Cup 2026: "ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಸಾಕಷ್ಟು ಟೀಕೆ ಹಾಗೂ ವಿಮರ್ಶೆಯನ್ನು ಎದುರಿಸಿದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಜಯ್ ಶಾ ಅವರಿಗೂ ಧನ್ಯವಾದ ಹೇಳಬೇಕು. ನನ್ನ ಅತ್ಯಂತ ಕಷ್ಟದ ಸಮಯದಲ್ಲಿ (2024-25ರಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸೋಲುಗಳ ಬಳಿಕ) ಅವರು ನನಗೆ ಬೆಂಬಲ ನೀಡಿ ಧೈರ್ಯ ನೀಡಿದರು" ಎಂದು ಗೌತಮ್ ಗಂಭೀರ್ ಹೇಳಿದರು.
Sanju Samson and Gautam Gambhir -
ಅಹಮದಾಬಾದ್, ಮಾ.9: ಭಾರತ ತಂಡವು ಟಿ20 ವಿಶ್ವಕಪ್ 2026(T20 World Cup 2026)ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಭಾರೀ ಟೀಕಿಗೆ ಒಳಗಾಗಿದ್ದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್(Gautam Gambhir) ಇದೀಗ ಫೈನಲ್ ಪಂದ್ಯದ ಗೆಲುವಿನ ಕುರಿತು ಮಾತನಾಡಿದ್ದು, ಈ ವಿಜಯವನ್ನು ತಮ್ಮ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ಎನ್ಸಿಎ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರಿಗೆ ಅರ್ಪಿಸಿದ್ದಾರೆ.
ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ನಾನು ಈ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಮತ್ತು ವಿ.ವಿ.ಎಸ್ ಲಕ್ಷ್ಮಣ್ ಅವರಿಗೆ ಅರ್ಪಿಸುತ್ತೇನೆ. ರಾಹುಲ್ ಭಾಯ್ ಅವರು ಭಾರತ ತಂಡವನ್ನು ಈ ಸ್ಥಿತಿಗೆ ತಂದಿದ್ದಾರೆ. ಲಕ್ಷ್ಮಣ್ ಅವರು COEನಲ್ಲಿ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮರಳಲು ಉತ್ತಮ ದಾರಿ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಭಾರತದ ಮಾಜಿ ಆರಂಭಿಕ ಆಟಗಾರ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಪ್ರಸ್ತುತ ಐಸಿಸಿ ಅಧ್ಯಕ್ಷ ಮತ್ತು ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.
ಈ T20 World Cup ಗೆಲುವನ್ನು Rahul Dravid ಮತ್ತು VVS Laxman ಗೆ ಅರ್ಪಿಸಿದ Gautam Gambhir.😍#T20WorldCup2026Final #T20WorldCup #INDvNZ #TeamIndia #IndianCricketTeam pic.twitter.com/LwtPGmytfN
— Star Sports Kannada (@StarSportsKan) March 9, 2026
"ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಸಾಕಷ್ಟು ಟೀಕೆ ಹಾಗೂ ವಿಮರ್ಶೆಯನ್ನು ಎದುರಿಸಿದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಜಯ್ ಶಾ ಅವರಿಗೂ ಧನ್ಯವಾದ ಹೇಳಬೇಕು. ನನ್ನ ಅತ್ಯಂತ ಕಷ್ಟದ ಸಮಯದಲ್ಲಿ (2024-25ರಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸೋಲುಗಳ ಬಳಿಕ) ಅವರು ನನಗೆ ಬೆಂಬಲ ನೀಡಿ ಧೈರ್ಯ ನೀಡಿದರು" ಎಂದು ಗೌತಮ್ ಗಂಭೀರ್ ಹೇಳಿದರು.
ಭಾರತದ ಮುಂದಿನ ಗುರಿ ಲಾಸ್ ಏಂಜಲೀಸ್ ಒಲಿಂಪಿಕ್ಸ್: ಸೂರ್ಯಕುಮಾರ್ ಯಾದವ್
ನಾಯಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವವನ್ನು ಶ್ಲಾಘಿಸಿದ ಗಂಭೀರ್, 'ಸೂರ್ಯ ನನ್ನ ಕೆಲಸವನ್ನು ಸುಲಭಗೊಳಿಸಿದರು. ಅವರು ಉತ್ತಮ ನಾಯಕರಾಗಿದ್ದಾರೆ. ಮೈಲಿಗಲ್ಲುಗಳಲ್ಲ, ಟ್ರೋಫಿಗಳ ಗೆಲುವು ಸಂಭ್ರಮಿಸುವುದು ದೊಡ್ಡ ಉದ್ದೇಶವಾಗಬೇಕು. ಹಲವು ವರ್ಷಗಳಿಂದ ನಾವು ಮೈಲಿಗಲ್ಲುಗಳನ್ನು ಆಚರಿಸುತ್ತಿದ್ದೇವೆ. ವೈಯಕ್ತಿಕ ಮೈಲಿಗಲ್ಲುಗಳನ್ನು ಆಚರಿಸುವುದನ್ನು ನಿಲ್ಲಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ತಂಡದ ಆಟಗಾರರಿಗೆ ಕಿವಿಮಾತು ಹೇಳಿದರು.
ಟೀಕೆಗೆ ಚಾಟಿ
ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಅನ್ನಿಸಿದ್ದೆಲ್ಲವನ್ನು ಬರೆಯುವವರಿಗೆ ನಾನು ಜವಾಬ್ದಾರನಲ್ಲ. ನನ್ನ ಜವಾಬ್ದಾರಿ ಡ್ರೆಸ್ಸಿಂಗ್ ರೂಮ್‌ನ 30 ಜನರಿಗೆ ಮಾತ್ರ ಎಂದು ಟೀಕಿಸುವವರಿಗೆ ಗಂಭೀರ್ ಚಾಟಿ ಬೀಸಿದರು.