ENG vs NZ: 300 ರನ್‌ಗಳ ಜೊತೆಯಾಟದೊಂದಿಗೆ 96 ವರ್ಷಗಳ ಹಳೆಯ ದಾಖಲೆ ಮುರಿದ ಲೇಥಮ್-ಕಾನ್ವೆ!
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 300 ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ನ್ಯೂಜಿಲೆಂಡ್ ತಂಡದ ಡೆವೋನ್ ಕಾನ್ವೆ ಹಾಗೂ ಟಾಮ್ ಲೇಥಮ್ ಜೋಡಿ 96 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಅಲ್ಲದೆ ಎರಡು ಬಾರಿ 300ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡಿದ ಜೋಡಿ ಎಂಬ ಖ್ಯಾತಿಗೆ ಇವರು ಭಾಜನರಾಗಿದ್ದಾರೆ.
ಡೆವೋನ್ ಕಾನ್ವೆ-ಟಾಮ್ ಲೇಥಮ್ ದಾಖಲೆಯ ಜೊತೆಯಾಟ. -
ನಾಟಿಂಗ್‌ಹ್ಯಾಮ್: ಇಲ್ಲಿನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ (ENG vs NZ) ಮೊದಲ ದಿನ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್‌ಗಳಾದ ಟಾಮ್ ಲೇಥಮ್ (Tom Latham) ಮತ್ತು ಡೆವೋನ್ ಕಾನ್ವೇ (Devon Conway) ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ 96 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಗುರುವಾರದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 361 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು.
ತೀವ್ರ ಬಿಸಿಲಿನ ನಡುವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್‌ಗೆ ನಾಯಕ ಟಾಮ್ ಲೇಥಮ್ (151) ಮತ್ತು ಎಡಗೈ ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೇ (157) ಭರ್ಜರಿ ಆರಂಭ ಒದಗಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 317 ರನ್‌ಗಳ ಅಮೋಘ ಜೊತೆಯಾಟವಾಡಿ ಶತಮಾನದಷ್ಟು ಹಳೆಯ ದಾಖಲೆಯನ್ನು ಹಿಂದಿಕ್ಕಿದರು.
ಆದರೆ ಅಂತಿಮ ಅವಧಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಮೊದಲ ಪಂದ್ಯದಲ್ಲೇ ತಂಡಕ್ಕೆ ಮಹತ್ವದ ಮುನ್ನಡೆ ಒದಗಿಸಿದರು. ಲೇಥಮ್ ಮತ್ತು ಕಾನ್ವೇ ಇಬ್ಬರ ವಿಕೆಟ್‌ಗಳು ಶೀಘ್ರವಾಗಿ ಉರುಳಿದ ಪರಿಣಾಮ, ನ್ಯೂಜಿಲೆಂಡ್ 317 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳದೇ ಇದ್ದ ಸ್ಥಿತಿಯಿಂದ ಸಣ್ಣ ಕುಸಿತ ಅನುಭವಿಸಿ ದಿನದಾಟದ ಅಂತ್ಯಕ್ಕೆ 361 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳಬೇಕಾಯಿತು.
ʻಸಿಂಹಗಳಂತೆ ಆಡೋಣʼ: ಮೊದಲನೇ ಟಿ20ಐಗೂ ಮುನ್ನ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಲಹೆ!
96 ವರ್ಷಗಳ ಹಳೆಯ ದಾಖಲೆ ಮುರಿದ ಕಾನ್ವೆ-ಲೇಥಮ್
34ರ ವಯಸ್ಸಿನ ಟಾಮ್ ಲೇಥಮ್ ಮತ್ತು ಡೆವೋನ್ ಕಾನ್ವೇ ಮೊದಲ ವಿಕೆಟ್‌ಗೆ ಕಟ್ಟಿದ 317 ರನ್‌ಗಳ ಜೊತೆಯಾಟ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ಯಾವುದೇ ವಿಕೆಟ್‌ಗೆ ದಾಖಲಾದ ಅತಿ ದೊಡ್ಡ ಜೊತೆಯಾಟವಾಯಿತು. ಈ ಜೊತೆಯಾಟ ಕಿವೀಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿತು. ಇದಕ್ಕೂ ಮೊದಲು 1930ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಸ್ಟೀವಿ ಡೆಂಪ್‌ಸ್ಟರ್ ಮತ್ತು ಜಾಕಿ ಮಿಲ್ಸ್ ಮೊದಲ ವಿಕೆಟ್‌ಗೆ 276 ರನ್‌ಗಳ ಜೊತೆಯಾಟವಾಡಿದ್ದರು. ಸುಮಾರು 96 ವರ್ಷಗಳ ಕಾಲ ಅಜೇಯವಾಗಿದ್ದ ಆ ದಾಖಲೆಯನ್ನು ಇದೀಗ ಕಾನ್ವೆ ಮತ್ತು ಲೇಥಮ್ ಜೋಡಿ ಮುರಿದಿದೆ.
ಈ ಇಬ್ಬರ ಬ್ಯಾಟಿಂಗ್ ಅಬ್ಬರದ ನಡುವೆ ಪಂದ್ಯದಲ್ಲಿ ಮತ್ತೊಮ್ಮೆ ಇಂಗ್ಲೆಂಡ್‌ಗೆ ಆಸರೆಯಾದವರು ನಾಯಕ ಬೆನ್ ಸ್ಟೋಕ್ಸ್. ಇವರು ತಮ್ಮ ಅನುಭವದ ಬೌಲಿಂಗ್ ಮೂಲಕ ಇಂಗ್ಲೆಂಡ್‌ಗೆ ಬಹುಮುಖ್ಯ ಯಶಸ್ಸು ತಂದುಕೊಟ್ಟರು. ಲೇಥಮ್ ಮತ್ತು ಕಾನ್ವೇ ಅವರ ವಿಕೆಟ್‌ಗಳು ಉರುಳಿದ ಬಳಿಕ ನ್ಯೂಜಿಲೆಂಡ್‌ನ ಬೃಹತ್ ಜೊತೆಯಾಟಕ್ಕೆ ಅಂತ್ಯ ಹಾಡಿ, ಪಂದ್ಯದ ಅಂತಿಮ ಅವಧಿಯಲ್ಲಿ ಇಂಗ್ಲೆಂಡ್‌ಗೆ ಮತ್ತೆ ಹೋರಾಟದ ಅವಕಾಶ ಕಲ್ಪಿಸಿದರು.
That's a wrap on day one here at Trent Bridge.
— BLACKCAPS (@BLACKCAPS) June 25, 2026
Centuries from Tom Latham (151) and Devon Conway (157) headline a strong opening day.
Watch day two LIVE in New Zealand on @skysportnz, or listen via the talkSPORT Cricket YouTube channel.
LIVE scoring at https://t.co/3YsfR1Y3Sm pic.twitter.com/F5XsTrFdsF
ವೇಗದ ಬೌಲಿಂಗ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಮ್ಮ ಅನುಭವ ಮತ್ತು ದೃಢ ಸಂಕಲ್ಪದಿಂದ ಇಂಗ್ಲೆಂಡ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು. ಸ್ಟೋಕ್ಸ್ ಎಸೆದ ಉತ್ತಮ ಲೆನ್ತ್ ಎಸೆತದಲ್ಲಿ ಟಾಮ್ ಲಾಥಮ್ ಎಡ್ಜ್ ಮಾಡಿಕೊಂಡು ವಿಕೆಟ್‌ಕೀಪರ್ ಜೇಮಿ ಸ್ಮಿತ್ ಅವರಿಗೆ ಸುಲಭ ಕ್ಯಾಚ್ ಕೊಟ್ಟರು.
ಪಿತೃತ್ವ ರಜೆಯಲ್ಲಿದ್ದ ಜೇಮಿ ಸ್ಮಿತ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಕಿವೀಸ್ 129 ರನ್ ಗಳಿಸಿದ್ದಾಗ ಲೇಥಮ್ ಅವರಿಗೆ ಜೀವದಾನವನ್ನು ನೀಡಿದ್ದರು. ಆದರೆ, ಬೆನ್ ಸ್ಟೋಕ್ಸ್ ಅವರ ಬೌಲಿಂಗ್‌ನಲ್ಲಿ ಸಿಕ್ಕಿದ್ದ ಕ್ಯಾಚ್ ಅನ್ನು ಪಡೆಯುವಲ್ಲಿ ಸಫಲರಾದರು. ಈ ವೇಳೆ ಅವರು ಯಾವುದೇ ತಪ್ಪು ಮಾಡಲಿಲ್ಲ.
Devon Conway brings up his 8th Test century and second against England 👊#ENGvNZ | 📸 @PhotosportNZ pic.twitter.com/GlAYdS3h3N
— BLACKCAPS (@BLACKCAPS) June 25, 2026
317/1ರಿಂದ 319/2ಕ್ಕೆ ನ್ಯೂಜಿಲೆಂಡ್ ಕುಸಿಯಿತು. ಮುಂದಿನ ಓವರ್‌ನಲ್ಲೇ ಡೆವೋನ್ ಕಾನ್ವೇ ಪಾರ್ಟ್ ಟೈಮ್ ಆಫ್‌ಸ್ಪಿನ್ನರ್ ಜೋ ರೂಟ್ ಬೌಲಿಂಗ್‌ನಲ್ಲಿ ಲಾಂಗ್-ಆನ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬದಲಿ ಫೀಲ್ಡರ್ ಮ್ಯಾಟ್ ಫಿಶರ್ ರನ್ನಿಂಗ್ ಕ್ಯಾಚ್ ಪಡೆದು ಕಾನ್ವೇ ಅವರ ಅಮೋಘ ಇನಿಂಗ್ಸ್‌ಗೆ ತೆರೆ ಎಳೆದರು.
ಇದಾದ ಬಳಿಕ ರಚಿನ್ ರವೀಂದ್ರ ಅಜಾಗರೂಕತೆಯಿಂದ ಗಸ್ ಅಟ್ಕಿನ್ಸನ್ ಬೌಲಿಂಗ್‌ನಲ್ಲಿ ಚೆಂಡನ್ನು ಗಾಳಿಗೆ ಎತ್ತಿ ಹೊಡೆದ ಪರಿಣಾಮ ಜೇಮಿ ಸ್ಮಿತ್ ಕೈಗೆ ಕ್ಯಾಚ್ ನೀಡಿ ಔಟಾದರು. ಮುಂದಿನ ಎಸೆತದಲ್ಲೇ ಓವಲ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಹೆನ್ರಿ ನಿಕೋಲ್ಸ್ 36 ರನ್ ಗಳಿಸಿ ವೇಗದ ಬೌಲರ್ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದು ದಿನದಾಟದ ಕೊನೆಯ ಎಸೆತವಾಗಿದ್ದು, ನ್ಯೂಜಿಲೆಂಡ್ ಅಂತಿಮ ಅವಧಿಯಲ್ಲಿ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿತು.