ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೆನೆಜುವೆಲಾದಲ್ಲಿ ಭಾರೀ ಭೂಕಂಪ: ಅವಶೇಷಗಳಡಿಯಲ್ಲಿ ಸಿಲುಕಿದ್ದ ನವಜಾತ ಶಿಶುವಿನ ರಕ್ಷಣೆ, ವಿಡಿಯೋ ನೋಡಿ

Viral Video: ವೆನೆಜುವೆಲಾದಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಇದುವರೆಗೆ ಕನಿಷ್ಠ 235 ಜನರು ಸಾವನ್ನಪ್ಪಿದ್ದು, 4,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೂಡ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದರ ನಡುವೆ ಅವಶೇಷಗಳ ರಾಶಿಯ ಮಧ್ಯೆ ಬಿದ್ದಿದ್ದ ನವಜಾತ ಶಿಶುವೊಂದನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಮಾಡಿದ್ದಾರೆ..

ಅವಶೇಷಗಳ ಮಧ್ಯೆ  ನವಜಾತ ಶಿಶು ರಕ್ಷಣೆ ಮಾಡಿದ ಸಿಬ್ಬಂದಿ: ಭಾವನಾತ್ಮಕ ವಿಡಿಯೊ

ವೆನೆಜುವೆಲಾ ಭೂಕಂಪದಲ್ಲಿ ನವಜಾತ ಶಿಶು ರಕ್ಷಣೆ ಮಾಡಿದ ಸಿಬ್ಬಂದಿ -

Profile
Pushpa Kumari Jun 26, 2026 5:45 PM

ಕಾರಕಾಸ್,ಜೂ.26: ವೆನೆಜುವೆಲಾದಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಇದುವರೆಗೆ ಕನಿಷ್ಠ 235 ಜನರು ಸಾವನ್ನಪ್ಪಿದ್ದು, 4,300ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೂಡ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಸ್ವಯಂಸೇವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದಾರೆ. ಇದರ ನಡುವೆ ಅವಶೇಷಗಳ ರಾಶಿಯ ಮಧ್ಯೆ ಬಿದ್ದಿದ್ದ ನವಜಾತ ಶಿಶುವೊಂದನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಕೇವಲ ಒಂದು ನಿಮಿಷದ ಅಂತರದಲ್ಲಿ ಉಂಟಾದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ವೆನೆಜುವೆಲಾದಲ್ಲಿ ಭಾರೀ ಅವಾಂತರ ಸೃಷ್ಟಿ ಮಾಡಿದೆ. ನೂರಾರು ಕಟ್ಟಡಗಳು ನೆಲಸಮವಾಗಿದ್ದು ಬಹಳಷ್ಟು ಜನರು ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಈ ಮಹಾದುರಂತದ ನಡುವೆ ಹಲವಾರು ಕಣ್ಣೀರು ತರಿಸುವ ದೃಶ್ಯಗಳು ಕಂಡು ಬಂದಿವೆ‌. ಕುಸಿದು ಬಿದ್ದಿದ್ದ ಕಟ್ಟಡದ ಅವಶೇಷಗಳ ಅಡಿಯಲ್ಲಿ ನವಜಾತ ಶಿಶುವೊಂದು ಸಿಲುಕಿಕೊಂಡಿತ್ತು.

Viral Video: ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ

ವಿಡಿಯೋ ನೋಡಿ:



ತಕ್ಷಣ ಸಮಯ ಪ್ರಜ್ಞೆ ಮೆರೆದ ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗುವಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.ಈ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಲಾ ಗುವೈರಾ"ದಲ್ಲಿ ಹಲವಾರು ಗಂಟೆಗಳ ಶ್ರಮದಾಯಕ ಕೆಲಸದ ನಂತರ ರಕ್ಷಣಾ ಕಾರ್ಯಕರ್ತರು 12 ವರ್ಷದ ಬಾಲಕನನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ, ಅವಶೇಷದ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೂಕಪ್ರಾಣಿ ಶ್ವಾನವನ್ನು ಕೂಡ ಸುರಕ್ಷಿತವಾಗಿ ಹೊರತೆಗಿಯಲಾದ ದೃಶ್ಯ ಕಂಡು ಬಂದಿದೆ. ಇದುವರೆಗೂ ಈ ದುರಂತದಲ್ಲಿ 235 ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.