ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಎಂಎಸ್‌ ಧೋನಿ ಕ್ರಿಕೆಟ್‌ನ ʻಬಾಹುಬಲಿʼ ಎಂದ ಹರ್ಭಜನ್‌ ಸಿಂಗ್‌!

Harbhajan Singh Praised on MS Dhoni: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಎಂಎಸ್‌ ಧೋನಿ ಕ್ರಿಕೆಟ್‌ನ ಬಾಹುಬಲಿ ಎಂದು ಭಜ್ಜಿ ಬಣ್ಣಿಸಿದ್ದಾರೆ.

ಎಂಎಸ್‌ ಧೋನಿ ಕ್ರಿಕೆಟ್‌ನ ಬಾಹುಬಲಿ ಎಂದ ಹರ್ಭಜನ್‌ ಸಿಂಗ್‌!

ಎಂಎಸ್‌ ಧೋನಿಯನ್ನು ಶ್ಲಾಘಿಸಿದ ಹರ್ಭಜನ್‌ ಸಿಂಗ್‌.

Profile Ramesh Kote Apr 16, 2025 9:18 PM

ನವದೆಹಲಿ: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 26 ರನ್‌ ಸಿಡಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಗೆಲ್ಲಿಸಿದ್ದ ಎಂಎಸ್‌ ಧೋನಿಯನ್ನು ಭಾರತದ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ (Harbhajan Singh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಎಂಎಸ್‌ ಧೋನಿಯನ್ನು ಕ್ರಿಕೆಟ್‌ನ ಬಾಹುಬಲಿ ಎಂದು ಭಜ್ಜಿ ಬಣ್ಣಿಸಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವು ಪಡೆದಿತ್ತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಸಿಎಸ್‌ಕೆ ಎರಡನೇ ಗೆಲುವು ಪಡೆದಿತ್ತು.

ಏಪ್ರಿಲ್‌ 14 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ನೀಡಿದ್ದ 168 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಕೊನೆಯ 5 ಓವರ್‌ಗಳಲ್ಲಿ 57 ರನ್‌ಗಳ ಅಗತ್ಯವಿತ್ತು. ಈ ವೇಳೆ 20 ಎಸೆತಗಳಲ್ಲಿ 17 ರನ್‌ ಗಳಿಸಿದ್ದ ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ತಿಣುಕಾಡುತ್ತಿದ್ದರು. ಆದರೆ, ಈ ವೇಳೆ ಕ್ರೀಸ್‌ಗೆ ಬಂದಿದ್ದ ಎಂಎಸ್‌ ಧೋನಿ, ಪಂದ್ಯದ ದಿಕ್ಕನ್ನು ಬದಲಿಸಿದ್ದರು. ಅವರು ಕೇವಲ 11 ಎಸೆತಗಳಲ್ಲಿ 26 ರನ್‌ ಸಿಡಿಸಿದ್ದರು ಹಾಗೂ ಶಿವಂ ದುಬೆಗೆ ವಿಶ್ವಾಸವನ್ನು ಮೂಡಿಸಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಚೆನ್ನೈ 5 ವಿಕೆಟ್‌ಗಳಿಂದ ಗೆದ್ದಿತ್ತು ಹಾಗೂ ಎಂಎಸ್‌ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IPL 2025: ವಿಕೆಟ್‌ ಕೀಪರ್‌ ಆಗಿ ನೂತನ ಮೈಲುಗಲ್ಲು ತಲುಪಿದ ಎಂಎಸ್‌ ಧೋನಿ!

ಎಂಎಸ್‌ ಧೋನಿ ಕ್ರಿಕೆಟ್‌ನ ಬಾಹುಬಲಿ: ಹರ್ಭಜನ್‌ ಸಿಂಗ್‌

ಈ ಪಂದ್ಯದ ಬಳಿಕ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದ ಹರ್ಭಜನ್‌ ಸಿಂಗ್‌, ಸಿಎಸ್‌ಕೆ ನಾಯಕ ಎಂಎಸ್‌ ಧೋನಿಯನ್ನು ಕ್ರಿಕೆಟ್‌ನ ಬಾಹುಬಲಿ ಎಂದು ಬಣ್ಣಿಸಿದ್ದರು. ಬ್ಯಾಟಿಂಗ್‌ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಎಂಎಸ್‌ ಧೋನಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು.

"ಎಂಎಸ್‌ ಧೋನಿ ಬಾಹುಬಲಿ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೆ ತಾನು ಏನು ಮಾಡಬಹುದೆಂಬುದನ್ನು ಎಂಎಸ್‌ ಧೋನಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಬ್ಯಾಟಿಂಗ್‌ 9ನೇ ಕ್ರಮಾಂಕ ಇವರಿಗೆ ಸೂಕ್ತವಾಗುವುದಿಲ್ಲ. ಅವರು ಅತ್ಯುತ್ತಮವಾಗಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು ಹಾಗೂ ಶಿವಂ ದುಬೆಗೂ ಕೂಡ ನೆರವಾಗಿದ್ದರು. ಎಂಎಸ್‌ ಧೋನಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ," ಎಂದು ಹರ್ಭಜನ್‌ ಸಿಂಗ್‌ ತಿಳಿಸಿದ್ದಾರೆ.

IPL 2025: ಎಂಎಸ್‌ ಧೋನಿ ಈಗಲೂ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂದ ಮೈಕಲ್‌ ಕ್ಲಾರ್ಕ್‌!

ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ್ದ ಎಂಎಸ್‌ ಧೋನಿ

ಋತುರಾಜ್‌ ಗಾಯಕ್ವಾಡ್‌ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದರಿಂದ 2025ರ ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವಕ್ಕೆ ಮರಳಿದ್ದಾರೆ. ಈ ಆವೃತ್ತಿಯಲ್ಲಿ ಮೊದಲನೇ ಪಂದ್ಯವನ್ನು ಗೆದ್ದ ನಂತರ ಸಿಎಸ್‌ಕೆ ಸತತವಾಗಿ 6 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಎಂಎಸ್‌ ಧೋನಿ ನಾಯಕತ್ವವನ್ನು ಪಡೆದ ತಮ್ಮ ಮೊದಲನೇ ಪಂದ್ಯದಲ್ಲಿ ಸೋತರೂ ಲಖನೌ ಎದುರು ಗೆದ್ದರು.

"ಎಂಎಸ್‌ ಧೋನಿ ನಾಯಕನಾದ ಬಳಿಕ ಎಲ್ಲವೂ ಬದಲಾಗುತ್ತದೆ. ಅವರು ವಿಭಿನ್ನವಾಗಿ ಬ್ಯಾಟ್‌ ಮಾಡಿದರು. ಅವರ ನಾಯಕತ್ವದ ಅಡಿಯಲ್ಲಿ ತಂಡ ವಿಭಿನ್ನವಾಗಿ ಆಡಿದೆ. ಬೌಲಿಂಗ್‌ ಬದಲಾವಣೆ ಬುದ್ದಿವಂತಿಕೆಯಿಂದ ಕೂಡಿತ್ತು. ಧೋನಿ ಸರಿಯಾದ ಸಮಯದಲ್ಲಿ ತಂಡದ ನಾಯಕತ್ವಕ್ಕೆ ಬಂದು, ಸಂಗತಿಗಳನ್ನು ಬದಲಿಸಿದ್ದಾರೆ,"ಎಂದು ಹರ್ಭಜನ್‌ ಸಿಂಗ್‌ ತಿಳಿಸಿದ್ದಾರೆ.