ಸುನೀಲ್ ಗವಸ್ಕಾರ್-ರಾಹುಲ್ ದ್ರಾವಿಡ್‌ರ 1980ರ ಫೋಟೋ ವೈರಲ್!
ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸುನೀಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ 1980ರ ವರ್ಷದ ವೈಟ್ ಅಂಡ್ ಬ್ಲ್ಯಾಕ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಸುನೀಲ್ ಗವಾಸ್ಕರ್ ಅವರ ಬಲಬದಿ ಚಿಕ್ಕ ವಯಸ್ಸಿನ ರಾಹುಲ್ ದ್ರಾವಿಡ್ ಇದ್ದರೆ, ಎಡಗಡೆ ಮತ್ತೊಬ್ಬ ವ್ಯಕ್ತಿ ನಿಂತಿದ್ದಾರೆ. ಈ ಇಬ್ಬರೂ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.
ಸುನೀಲ್ ಗವಾಸ್ಕರ್-ರಾಹುಲ್ ದ್ರಾವಿಡ್‌ರ ಹಳೆಯ ಫೋಟೋ. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸನೀಲ್ ಗವಾಸ್ಕರ್ (Sunil Gavaskar) ಹಾಗೂ ರಾಹುಲ್ ದ್ರಾವಿಡ್ (Rahul Dravid) ಅವರ 1980ರ ಹಳೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ʻಭಾರತ ತಂಡದ ಗೋಡೆʼ ಎಂದೇ ಖ್ಯಾತಿ ಗಳಿಸಿರುವ ದ್ರಾವಿಡ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋ ಕ್ಲಿಕ್ ಮಾಡಿದ್ದ ಸಮಯದಲ್ಲಿ ಗವಾಸ್ಕರ್ ಭಾರತದ ಪರ (Indian Cricket Team) ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಗಲೇ ದೊಡ್ಡ ಹೆಸರು ಮಾಡಿದ್ದರು. ಆದರೆ, ಕರ್ನಾಟಕದ ದ್ರಾವಿಡ್, ಅಂದಿನ ಸಮಯದಲ್ಲಿ ಶಾಲೆ, ಕ್ಲಬ್ ಹಾಗೂ ಕರ್ನಾಟಕದ ವಯೋಮಿತಿ ತಂಡಗಳಲ್ಲಿ ಆಡುತ್ತಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬಹುದು. ಆದರೆ, ಈಗ ಈ ಇಬ್ಬರೂ ವಿಶ್ವ ಕ್ರಿಕೆಟ್‌ನ ದಿಗ್ಗಜರಾಗಿದ್ದಾರೆ.
1949ರ ಜುಲೈ 10ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸುನೀಲ್ ಗವಾಸ್ಕರ್, 1971ರ ಮಾರ್ಚ್ 6 ರಂದು ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿರುವ ಬ್ಯಾಟಿಂಗ್ ದಿಗ್ಗಜ, 1974ರ ಜುಲೈ 13 ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಂದು ದಶಕಕ್ಕೂ ಅಧಿಕ ಅವಧಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸನ್ನಿ, ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು.
ಭಾರತ ಟೆಸ್ಟ್ ತಂಡದ ಏಳನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ರಾಬಿನ್ ಉತ್ತಪ್ಪ!
ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 125 ಪಂದ್ಯಗಳನ್ನು ಆಡಿರುವ ಸುನೀಲ್ ಗವಾಸ್ಕರ್, 34 ಶತಕಗಳು ಹಾಗೂ 45 ಅರ್ಧಶತಕಗಳ ಮೂಲಕ 10122 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 108 ಪಂದ್ಯಗಳಿಂದ 3093 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 27 ಅರ್ಧಶತಕಗಳನ್ನು ಬಾರಿಸಿದ್ದಾರೆ. ತಮ್ಮ ಅಂತಾರಾಷ್ಟೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮುಗಿದ ಬಳಿಕ ಸುನೀಲ್ ಗವಾಸ್ಕರ್, ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್‌ರ ಅಂಕಿಅಂಶಗಳು
ಸುನೀಲ್ ಗವಾಸ್ಕರ್ ಅವರ ಬಳಿ 1980ರಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ತಾವು ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್ ಆಗುತ್ತೇನೆಂದು ರಾಹುಲ್ ದ್ರಾವಿಡ್‌ಗೂ ಸ್ವತಃ ಗೊತ್ತಿರಲಿಲ್ಲ. ಆದರೆ, ಅವರು ತಮ್ಮ ರಕ್ಷಣಾತ್ಮಕ ಬ್ಯಾಟಿಂಗ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದರು. ಭಾರತ ತಂಡ ಪರ 1996ರ ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ಇದೇ ವರ್ಷ ಏಪ್ರಿಲ್ 3 ರಂದು ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಪ್ರಕಟ, ಜೋಫ್ರಾ ಆರ್ಚರ್‌ಗೆ ಸ್ಥಾನ!
2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಹೊತ್ತಿಗೆ 164 ಟೆಸ್ಟ್ ಪಂದ್ಯಗಳಿಂದ 52.3ರ ಸರಾಸರಿಯಲ್ಲಿ 13288 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 36 ಶತಕಗಳು ಹಾಗೂ 63 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 39.2ರ ಸರಾಸರಿಯಲ್ಲಿ 10889 ರನ್‌ಗಳನ್ನು ಕಲೆ ಹಾಕಿದ್ದಾರೆ. 12 ಶತಕಗಳು ಹಾಗೂ 83 ಅರ್ಧಶತಕಗಳನ್ನು ಗಳಿಸಿದ್ದಾರೆ. ತಮ್ಮ ವೃತ್ತಿ ಜೀವನ ಮುಗಿಸಿದ ಬಳಿಕ ಇವರು, ಕೋಚಿಂಗ್ ವೃತ್ತಿ ಜೀವನದ ಮೂಲಕ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಭಾರತ ಅಂಡರ್-19 ತಂಡ ಹಾಗೂ ಭಾರತ ಹಿರಿಯರ ತಂಡಕ್ಕೆ ಹೆಡ್ ಕೋಚ್ ಆಗಿಯೂ ಯಶಸ್ವಿಯಾಗಿದ್ದಾರೆ.