IPL 2026: ಪ್ಯಾಟ್ ಕಮಿನ್ಸ್‌ಗೆ 113 ಕೋಟಿ ರು ಆಫರ್ ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ! ಏಕೆ ಗೊತ್ತೆ?
ವಿಶ್ವದ ಫ್ರಾಂಚೈಸಿ ಲೀಗ್‌ಗಳ ಬದಲು ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಮೂರು ವರ್ಷಗಳಿಗೆ ಬರೋಬ್ಬರಿ 113 ಕೋಟಿ ರು. ಗಳ ಆಫರ್ ನೀಡಿದೆ. ಕಮಿನ್ಸ್ ಜತೆಗೆ ಟ್ರಾವಿಸ್ ಹೆಡ್ ಹಾಗೂ ಜಾಶ್ ಹೇಝಲ್‌ವುಡ್‌ಗೂ ಈ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.
ಪ್ಯಾಟ್ ಕಮಿನ್ಸ್‌ಗೆ 113 ಕೋಟಿ ರು ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜು. -
Ramesh Kote
May 7, 2026 6:34 PM
ನವದೆಹಲಿ: ವಿಶ್ವದ ಫ್ರಾಂಚೈಸಿ ಟಿ20 ಲೀಗ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಆಸ್ಟ್ರೇಲಿಯಾ ಸ್ಟಾರ್ ಆಟಗಾರರನ್ನು ರಾಷ್ಟ್ರೀಯ ತಂಡದ ಸೇವೆಯ ಲಭ್ಯತೆಗಳಿಗೆ ಖಾತ್ರಿಪಡಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಮುಂದಾಗಿದೆ ಹಾಗೂ ಇದಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ. ಆಸ್ಟ್ರೇಲಿಯಾ ತಂಡಕ್ಕೆ ಸದಾ ಲಭ್ಯರಿರಬೇಕೆಂಬ ಉದ್ದೇಶದಿಂದ ಮುಂದಿನ ಮೂರು ವರ್ಷಗಳಿಗೆ ಪ್ಯಾಟ್ ಕಿಮಿನ್ಸ್ (Pat Cummins) ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ 113 ಕೋಟಿ ರು. ಗಳ ಆಫರ್ ನೀಡಿದೆ ಎಂದು ವರದಿಯಾಗಿದೆ. ಕೇವಲ ಕಮಿನ್ಸ್ ಮಾತ್ರವಲ್ಲ ಮೂರೂ ಸ್ವರೂಪದ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಜಾಶ ಹೇಝಲ್‌ವುಡ್‌ಗೂ (Josh Hazlewood) ಕ್ರಿಕೆಟ್ ಆಸ್ಟ್ರೇಲಿಯಾ ದೊಡ್ಡ ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.