ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಪಂಜಾಬ್‌ ಕಿಂಗ್ಸ್‌ಗೆ ಆಘಾತ, ಐಪಿಎಲ್‌ ಟೂರ್ನಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌!

ನ್ಯೂಜಿಲೆಂಡ್‌ ತಂಡದ ಹಿರಿಯ ವೇಗೆ ಲಾಕಿ ಫರ್ಗ್ಯೂಸನ್‌ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲ ಅವಧಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಮೊದಲ ಏಳು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದು ಪಂಜಾಬ್ ಕಿಂಗ್ಸ್‌ ತಂಡದ ಬೌಲಿಂಗ್ ವಿಭಾಗದ ಮೇಲೆ ಪರಿಣಾಮ ಬೀರಲಿದೆ.

2026ರ ಐಪಿಎಲ್‌ ಟೂರ್ನಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌!

2026ರ ಐಪಿಎಲ್‌ನಿಂದ ಲಾಕಿ ಫರ್ಗ್ಯೂಸನ್‌ ಔಟ್‌. -

Profile
Ramesh Kote Mar 20, 2026 3:56 PM

ನವದೆಹಲಿ: ಹತ್ತೊಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯು ಮಾರ್ಚ್ 28 ರಂದು ಆರಂಭವಾಗಲಿದ್ದು, ಟೂರ್ನಿಗೂ ಮುನ್ನ ಹಲವು ಫ್ರಾಂಚೈಸಿಗಳು ತಮ್ಮ ಪ್ರಮುಖ ಸ್ಟಾರ್‌ ಆಟಗಾರರನ್ನು ಕಳೆದುಕೊಂಡಿದೆ. ಇದೀಗ ಈ ಪಟ್ಟಿಗೆ ಪಂಜಾಬ್‌ ಕಿಂಗ್ಸ್‌ ಸೇರ್ಪಡೆಯಾಗಿದೆ. ನ್ಯೂಜಿಲೆಂಡ್‌ ತಂಡದ ಹಿರಿಯ ವೇಗದ ಬೌಲರ್ ಲಾಕಿ ಫರ್ಗ್ಯೂಸನ್‌ (LockieFergusan ಅವರು ಈ ಟೂರ್ನಿಗೆ ಅಲಭ್ಯರಾಗುತ್ತಿದ್ದಾರೆ. ಫರ್ಗ್ಯೂಸನ್‌ ಅವರು ವೈಯಕ್ತಿಕ ಕಾರಣಗಳಿಂದ ಐಪಿಎಲ್ ಆರಂಭದ ಮೊದಲ ಏಳು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಮೊದಲ ಏಳು ಪಂದ್ಯಗಳಿಗೆ ಅವರು (ಲಾಕಿ ಫರ್ಗ್ಯೂಸನ್‌) ಲಭ್ಯರಾಗುವುದಿಲ್ಲ,” ಎಂದು ಮೂಲಗಳು ತಿಳಿಸಿವೆ. ಫರ್ಗ್ಯೂಸನ್‌ ಸ್ವತಃ ಈ ವಿಷಯವನ್ನು ದೃಢಪಡಿಸಿದ್ದು, ಇತ್ತೀಚೆಗೆ ತಮ್ಮ ಕುಟುಂಬದಲ್ಲಿ ಮಗು ಜನಿಸಿದ ಕಾರಣ ಕೆಲ ಕಾಲ ಕ್ರಿಕೆಟ್‌ನಿಂದ ವಿರಾಮ ಪಡೆಯುವುದಾಗಿ ತಿಳಿಸಿದ್ದಾರೆ.

IPL 2026: ಮತೀಶ ಪತಿರಣ ಸಂಪೂರ್ಣ ಫಿಟ್‌, ಕೋಲ್ಕತಾ ನೈಟ್‌ ರೈಡರ್ಸ್‌ಗೆ ಆನೆ ಬಲ!

“ಇತ್ತೀಚೆಗೆ ನನಗೆ ಮಗ ಹುಟ್ಟಿದ್ದಾನೆ. ಮನೆಯಲ್ಲೇ ಹೆಚ್ಚು ಸಮಯ ಕಳೆಯಲು ಮತ್ತು ಹೆಂಡತಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೆಲವು ವಾರಗಳ ವಿರಾಮದ ನಂತರ ಐಪಿಎಲ್‌ನ ಎರಡನೇ ಹಂತದಲ್ಲಿ ಭಾರತಕ್ಕೆ ಪ್ರಯಾಣಿಸುತ್ತೇನೆ,” ಎಂದು ಲಾಕಿ ಫರ್ಗ್ಯೂಸನ್‌ ಹೇಳಿದ್ದಾರೆ.



ಲಾಕಿ ಫರ್ಗ್ಯೂಸನ್‌ ಶಿಕ್ಷಗೆ ಗುರಿಯಾಗುತ್ತಾರಾ?

ಐಪಿಎಲ್ ನಿಯಮದ ಪ್ರಕಾರ ವಿದೇಶಿ ಆಟಗಾರರು ಆಕ್ಶನ್‌ಗೆ ನೋಂದಾಯಿಸಿದ ಬಳಿಕ ಟೂರ್ನಿಯಿಂದ ಆಡದೆ ಹೊರ ನಡೆದರೆ, ಆ ಆಟಗಾರರಿಗೆ ಎರಡು ವರ್ಷಗಳ ಕಾಲ ನಿಯಮಿತ ನಿಷೇಧ ವಿಧಿಸಲಾಗುತ್ತದೆ. ಈ ನಿಯಮ ಹಿಂದಿನ ಸಾಲಿನಲ್ಲಿ ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್‌ ಮೇಲೆ ಹೇರಲಾಗಿತ್ತು. ಆದರೆ, ಲಾಕಿ ಫರ್ಗ್ಯೂಸನ್‌ ಮೇಲೆ ಈ ನಿಯಮ ಅನ್ವಯಿಸುವ ಸಾಧ್ಯತೆ ಕಡಿಮೆ. ಏಕೆಂದರೆ ಅವರು ಈ ಸೀಸನ್‌ನಲ್ಲಿ 14 ಪಂದ್ಯಗಳಲ್ಲಿ ಕೇವಲ ಏಳು ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಳ್ಳುತ್ತಿದ್ದಾರೆ.

IPL 2026: ಈ ಸಲವೂ ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!

ಪಂಜಾಬ್‌ ಕಿಂಗ್ಸ್‌ ತಂಡ

ಉಳಿಸಿಕೊಂಡಿದ್ದ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್‌, ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷ್‌ದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪಣ್ಣು, ಸೂರ್ಯಾಂಶು ಶೆಡ್ಗೆ, ಮಿಚೆಲ್‌ ಓವೆನ್‌, ಕ್ಸಿವಿಯರ್‌ ಬಾರ್ಲೆಟ್‌, ಲಾಕಿ ಫರ್ಗ್ಯೂಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್‌ ಕನೋಲಿ, ಬೆನ್‌ ದ್ವಾರ್ಶುಯಿಸ್‌, ಪ್ರವೀಣ್‌ ದುಬೆ, ವಿಶಾಲ್‌ ನಿಶಾದ್‌