ವೈಭವ್‌ಗೆ ಇಷ್ಟು ಬೇಗ ಚಾನ್ಸ್ ಏಕೆ? ಸೂರ್ಯಕುಮಾರ್‌ಗೆ ಕೊಕ್ ನೀಡಿದ್ದೇಕೆ? ಬಿಸಿಸಿಐಗೆ ಅಶ್ವಿನ್ ಪ್ರಶ್ನೆ!
ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕ ಹುಡುಗನಾಗಿದ್ದು, ಅವರು ಭಾರತ ತಂಡಕ್ಕೆ ಆಡಲು ಇನ್ನಷ್ಟು ದಿನಗಳ ಕಾಲ ಕಾಯಬಹುದಿತ್ತು ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾಗಿತ್ತು ಎಂದು ಸ್ಪಿನ್ ದಿಗ್ಗಜ ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ.
ಸೂರ್ಯಕುಮಾರ್ ಪರ ಆರ್ ಅಶ್ವಿನ್ ಬ್ಯಾಟಿಂಗ್. -
ನವದೆಹಲಿ: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೂನ್ 6 ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ಕಳೆದ ಮೂರು ತಿಂಗಳುಗಳ ಹಿಂದೆ ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ತಂಡದಿಂದ ಕೈಬಿಟ್ಟು, 15ನೇ ವಯಸ್ಸಿನ ವೈಭವ್ ಸೂರ್ಯವಂಶಿಗೆ ಚೊಚ್ಚಲ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಟಿ20ಐ ತಂಡದ ನಾಯಕತ್ವಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆರಿಸಲಾಗಿದೆ. ಈ ಬಗ್ಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, ವೈಭವ್ ಸೂಯವಂಶಿ ತಮ್ಮ ಸ್ಥಾನಕ್ಕಾಗಿ ಇನ್ನಷ್ಟು ದಿನಗಳ ಕಾಲ ಕಾಯಲಿ ಹಾಗೂ ಅವರಿಗೆ ಖಂಡಿತಾ ಅವಕಾಶವಿದೆ. ಆದರೆ, ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್‌ಗೆ ಇನ್ನಷ್ಟು ಅವಕಾಶಗಳನ್ನು ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ!
ವೈಭವ್ ಸೂರ್ಯವಂಶಿ ತಮ್ಮ ಅವಕಾಶಕ್ಕಾಗಿ ಕಾಯಲಿ: ಅಶ್ವಿನ್
"ಅವರಿಗೆ (ವೈಭವ್‌ಗೆ) ಅವಕಾಶ ನೀಡಬಹುದು. ಭಾರತ ಎರಡು ತಂಡಗಳನ್ನು ರಚಿಸುವುದಾದರೆ, ವೈಭವ್ ಖಂಡಿತವಾಗಿಯೂ ಎರಡನೇ ತಂಡದಲ್ಲಿ ಸ್ಥಾನ ಪಡೆಯಬೇಕು. ಆದರೆ ನಿಮಗೆ ಮತ್ತು ನಮ್ಮ ಕಾರ್ಯಕ್ರಮ ವೀಕ್ಷಿಸುತ್ತಿರುವ ಪ್ರೇಕ್ಷಕರಿಗೆ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ತಂಡದಲ್ಲಿ ಖಾಲಿ ಸ್ಥಾನವೇ ಇಲ್ಲದಿದ್ದರೆ, ಅವರಿಗೆ ಹೇಗೆ ಅವಕಾಶ ಕಲ್ಪಿಸುತ್ತೀರಿ?" ಎಂದು ದಿಗ್ಗಜ ಸ್ಪಿನ್ನರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ಪ್ರಶ್ನೆ ಮಾಡಿದ್ದಾರೆ.
"ನಾನು ಆಯ್ಕೆದಾರನಾಗಿದ್ದರೆ, ವೈಭವ್‌ಗೆ ನೇರವಾಗಿ ಹೇಳುತ್ತಿದ್ದೆ — ನಿನ್ನಂತಹ ಆಟಗಾರನನ್ನು ನಾನು ಹಿಂದೆಂದೂ ನೋಡಿಲ್ಲ. ನೀನು ವಿಶೇಷ ಪ್ರತಿಭೆ. ನಿನ್ನ ಪ್ರತಿಭೆಯ ಅಭಿಮಾನಿ ನಾನು," ಎಂದು ಅವರು ಶ್ಲಾಘಿಸಿದ್ದಾರೆ.
ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಲು ಕಾರಣವೇನು?
"ನಾನು ನಿಮ್ಮ ಅಭಿಮಾನಿ. ಆದರೆ ನಮ್ಮ ಕ್ಲಾಸ್‌ನಲ್ಲಿ, ನಮ್ಮ ಶಾಲೆಯಲ್ಲಿ ಈಗ ಯಾವುದೇ ಸೀಟುಗಳಿಲ್ಲ. ಈಗ ನಿಮಗೆ ನಮ್ಮ ಶಾಲೆಯಲ್ಲಿ ಪ್ರವೇಶವೂ ಇಲ್ಲ. ದಯವಿಟ್ಟು ಬೇರೆ ಯಾವುದೇ ಶಾಲೆಗೆ ಹೋಗಬೇಡ; ಸ್ವಲ್ಪ ಹೊರಗೇ ಕಾಯುತ್ತಿರಿ. ಒಂದು ಅವಕಾಶ ಬಂದರೆ, ಅಂದರೆ ಸ್ಥಾನ ಖಾಲಿದರೆ, ನಾನು ನಿಮಗೆ ಸೀಟು ಕೊಡುತ್ತೇನೆ. ಇದನ್ನು ನೆನಪಿಟ್ಟುಕೊಳ್ಳಿ — ನೀವು ಎಷ್ಟು ದೊಡ್ಡ ಆಟಗಾರನಾದರೂ ತಂಡವೇ ಮೊದಲಿಗೆ ಬರುತ್ತಿದೆ. ತಂಡ ಆಟಗಾರರಿಗಾಗಿ; ಆಟಗಾರರು ತಂಡಕ್ಕಾಗಿ ಅಲ್ಲ," ಎಂದು ಅವರು ಹೇಳಿದ್ದಾರೆ.
ನಾಯಕತ್ವದಿಂದ ತೆಗೆದರೂ ಸೂರ್ಯಗೆ ಆಟಗಾರನಾಗಿ ಅವಕಾಶ ನೀಡಬೇಕಿತ್ತು: ಅಶ್ವಿನ್
“ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದಿರುವ ಭಾರತೀಯ ತಂಡಕ್ಕೆ ಸ್ವಲ್ಪ ಹೆಚ್ಚುವರಿ ಸಮಯ ನೀಡಬೇಕು. ಆಡಿದ ಎಲ್ಲ ಆಟಗಾರರೂ ಅದಕ್ಕೆ ಅರ್ಹರು. ನನ್ನ ಅಭಿಪ್ರಾಯದಲ್ಲಿ, ಸೂರ್ಯಕುಮಾರ್ ಪ್ರಕರಣದಲ್ಲಿ ಅವರಿಗೆ ನಾಯಕತ್ವ ನೀಡಬಾರದು. ಆದರೆ ಒಂದು ಅಥವಾ ಎರಡು ಸರಣಿಗಳಿಗೆ ಅವಕಾಶ ನೀಡಬೇಕು. ಅವರು ಪ್ರದರ್ಶನ ನೀಡದಿದ್ದರೆ ನಂತರ ತಂಡದಿಂದ ಕೈಬಿಡಬೇಕು. ಜೊತೆಗೆ ಸಂವಹನ ಸ್ಪಷ್ಟವಾಗಿಯೂ ಪಾರದರ್ಶಕವಾಗಿಯೂ ಇರಬೇಕು,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.