KAR vs UTK: ಕೆಎಲ್ ರಾಹುಲ್-ದೇವದತ್ ಪಡಿಕ್ಕಲ್ ಶತಕ, ಕರ್ನಾಟಕಕ್ಕೆ ಭರ್ಜರಿ ಆರಂಭ!
KAR vs UTK, Ranji Trophy 2025-16 Semifinal Day 1 Stumps: ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಅವರ ಶತಕಗಳ ಬಲದಿಂದ ಕರ್ನಾಟಕ ತಂಡ, ಉತ್ತರಾಖಂಡ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊದಲನೇ ದಿನ ಭರ್ಜರಿ ಆರಂಭ ಪಡೆದಿದೆ.
ಉತ್ತರಾಖಂಡ ಎದುರು ಶತಕಗಳನ್ನು ಬಾರಿಸಿದ ರಾಹುಲ್, ಪಡಿಕ್ಕಲ್. -
ಲಖನೌ: ಕೆಎಲ್ ರಾಹುಲ್ KL Rahul) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಅವರ ಶತಕಗಳ ಬಲದಿಂದ ಕರ್ನಾಟಕ ತಂಡ, ಉತ್ತರಾಖಂಡ ಎದುರು 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊದಲನೇ ದಿನ ಭರ್ಜರಿ ಆರಂಭ ಪಡೆದಿದೆ. ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಬೇಗ ವಿಕೆಟ್ ಒಪ್ಪಿಸಿದರೂ ರಾಹುಲ್ ಹಾಗೂ ಪಡಿಕ್ಕಲ್ ಅವರ ದಾಖಲೆಯ ಜೊತೆಯಾಟದಿಂದ ಕರ್ನಾಟಕ ತಂಡ, ಆರಂಭಿಕ ದಿನವೇ ದೊಡ್ಡ ಮೊತ್ತವನ್ನು ಕಲೆ ಹಾಕುವ ಮೂಲಕ ಎದುರಾಳಿ ತಂಡದ ವಿರುದ್ಧ ಪ್ರಾಬಲ್ಯವನ್ನು ಸಾಧಿಸಿದೆ.
ಭಾನುವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಆರಂಭವಾದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಕರ್ನಾಟಕ ತಂಡ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಶತಕಗಳ ಬಲದಿಂದ ಮೊದಲನೇ ದಿನ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ, 90 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 355 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ದೊಡ್ಡ ಮೊತ್ತವನ್ನು ಸೇರಿಸುವ ಮುನ್ಸೂಚನೆಯನ್ನು ನೀಡಿದೆ.
Ranji Trophy 2025-26: ಕೆಎಲ್ ರಾಹುಲ್ ಸತತ ಎರಡನೇ ಶತಕ, ಪಡಿಕ್ಕಲ್ ಜತೆ 200 ರನ್ ಜೊತೆಯಾಟ!
ರಾಹುಲ್-ಪಡಿಕ್ಕಲ್ ದಾಖಲೆಯ ಜೊತೆಯಾಟ
ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ 32 ಎಸೆತಗಳಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಕರ್ನಾಟಕ ತಂಡ ಕೇವಲ 18 ರನ್ ಇರುವಾಗ ಮೊದಲನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್, ಉತ್ತರಾಖಂಡ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ದೀರ್ಘಾವಧಿ ಕ್ರೀಸ್‌ನಲ್ಲಿ ಸಮಯ ಕಳೆಯುವ ಮೂಲಕ ಎದುರಾಳಿ ಬೌಲಿಂಗ್ ವಿಭಾಗದ ಆತ್ಮಸ್ಥೈರ್ಯವನ್ನು ಕುಗ್ಗಿಸಿತು. ರಾಹುಲ್ ಮತ್ತು ಪಡಿಕ್ಕಲ್ ಎರಡನೇ ವಿಕೆಟ್‌ಗೆ 278 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ವಿಕೆಟ್‌ಗೆ ದಾಖಲಿಸಿದ ಎರಡನೇ ದೊಡ್ಡ ಜೊತಯಾಟ ಇದಾಯಿತು. ಇದಕ್ಕೂ ಮುನ್ನ ನಾಗಾಲ್ಯಾಂಡ್ ವಿರುದ್ಧ ವಿಮಲ್ ಕುಮಾರ್ ಹಾಗೂ ಪ್ರದೋಷ್ ರಂಜನ್ ಪಾಲ್ ಎರಡನೇ ವಿಕೆಟ್‌ಗೆ 307 ರನ್ ಕಲೆ ಹಾಕಿದ್ದರು.
A KL Rahul special 🤌💯
— BCCI Domestic (@BCCIdomestic) February 15, 2026
🎥 Watch the Karnataka batter's classical 141 (211) 💪
Updates ▶️ https://t.co/SztwjvwUiI#RanjiTrophy | @IDFCFIRSTBank | @klrahul pic.twitter.com/Jo90earZNe
ಕೆಎಲ್ ರಾಹುಲ್ ಎರಡನೇ ಶತಕ
ಇನ್ನು ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈ ಟೂರ್ನಿಯಲ್ಲಿ ಸತತ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಮಯಾಂಕ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಕೆಎಲ್ ರಾಹುಲ್, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಅವರು ಆಡಿದ 211 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಕಲೆ ಹಾಕಿದರು. ಆದರೆ, 150ರ ಸನಿಹದಲ್ಲಿ ಆದಿತ್ಯ ರಾವತ್‌ಗೆ ಅವರು ಔಟ್ ಆದರು.
Stumps Day 1: Karnataka - 355/2 in 89.6 overs (Karun Nair 37 off 65, Devdutt Padikkal 148 off 236) #CAUvKAR #RanjiTrophy #Elite #SF1
— BCCI Domestic (@BCCIdomestic) February 15, 2026
ದೇವದತ್ ಪಡಿಕ್ಕಲ್ ಭರ್ಜರಿ ಶತಕ
ಕೆಎಲ್ ರಾಹುಲ್ ಜೊತೆಗೆ ಮತ್ತೊಂದು ತುದಿಯಲ್ಲಿ ದೊಡ್ಡ ಜೊತೆಯಾಟವನ್ನು ಆಡಿದ ದೇವದತ್ ಪಡಿಕ್ಕಲ್ ಕೂಡ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದರು. ಎಡಗೈ ಬ್ಯಾಟ್ಸ್‌ಮನ್ ಮೊದಲನೇ ದಿನದಾಟದ ಅಂತ್ಯಕ್ಕೆ 236 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 148 ರನ್‌ಗಳನ್ನು ಗಳಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಕರುಣ ನಾಯರ್ ಅಜೇಯ 37 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.