ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ಟೆಸ್ಟ್‌ ಸರಣಿ ಸ್ಥಿರ ಪ್ರದರ್ಶನ ತೋರಿದ ಆಟಗಾರನನ್ನು ಆರಿಸಿದ ಅಜಯ್ ಜಡೇಜಾ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಸರಣಿಯುದ್ದಕ್ಕೂ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿದ ಆಟಗಾರನನ್ನು ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ ಆರಿಸಿದ್ದಾರೆ.

IND vs ENG: ರವೀಂದ್ರ ಜಡೇಜಾರನ್ನು ಶ್ಲಾಘಿಸಿದ ಅಜಯ್‌ ಜಡೇಜಾ!

ರವೀಂದ್ರ ಜಡೇಜಾಗೆ ಶ್ಲಾಘಿಸಿದ ಅಜಯ್‌ ಜಡೇಜಾ.

Profile Ramesh Kote Aug 8, 2025 10:00 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಸರಣಿಯಲ್ಲಿ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅವರು 754 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆದರೂ ಈ ಟೆಸ್ಟ್‌ ಸರಣಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿದ ಆಟಗಾರನನ್ನು ಗಿಲ್‌ ಬದಲು ಬೇರೆ ಆಟಗಾರನನ್ನು ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ (AJay Jadeja) ಆರಿಸಿದ್ದಾರೆ.

ಇನ್ನು ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಆಡಿದ 5 ಪಂದ್ಯಗಳಿಂದ 86ರ ಸರಾಸರಿಯಲ್ಲಿ 516 ರನ್‌ಗಳನ್ನು ಕಲೆ ಹಾಕಿದ್ದರು. ಇವರು ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ಸೋನಿ ಸ್ಪೋರ್ಟ್ಸ್‌ ಜತೆ ಮಾತನಾಡಿದ ಅಜಯ್‌ ಜಡೇಜಾ, ಶುಭಮನ್‌ ಗಿಲ್‌ ಅವರಿಗಿಂತಲೂ ರವೀಂದ್ರ ಜಡೇಜಾ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿದ್ದಾರೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

"ಏನಾದರೂ ಹೇಳಬೇಕಾದ ಅಗತ್ಯವಿದೆಯಾ? ಆ ವ್ಯಕ್ತಿ ತಾನು ಏನು ಮಾಡಬಹುದು ಎಂಬುದನ್ನು ನಿಮಗೆ ತೋರಿಸಿದ್ದಾರೆ. ನಾನು ಇದನ್ನು ಅಸಾಧಾರಣ ಎಂದು ಭಾವಿಸುತ್ತೇನೆ. ಶುಭಮನ್ ಗಿಲ್ 754 ರನ್ ಗಳಿಸಿದ್ದಾರೆ ಮತ್ತು ನೀವು ಹೇಳುತ್ತಿರುವುದು ಅವರು ಅತ್ಯುತ್ತಮ ಪ್ರದರ್ಶನದ ಸಮೀಪ ತಲುಪಿದ್ದಾರೆ ಎಂದು. ಅವರು [ರವೀಂದ್ರ ಜಡೇಜಾ] ಸುಮಾರು 550 ರನ್ ಗಳಿಸಿದ್ದಾರೆ. ಅವರು ಶುಭಮನ್ ಗಿಲ್ ಅವರಿಗಿಂತ ಹೆಚ್ಚು ಸ್ಥಿರವಾಗಿದ್ದಾರೆ. ಅವರ ನಾಲ್ಕು ಇನಿಂಗ್ಸ್‌ಗಳು ಮುಗಿಯಲಿಲ್ಲ, ಏಕೆಂದರೆ ಬ್ಯಾಟಿಂಗ್ ಇನ್ನೊಂದು ತುದಿಯಿಂದ ಕೊನೆಗೊಂಡಿತು. ಇಡೀ ಸರಣಿಯಲ್ಲಿ ಅವರು ಬೇಗನೆ ಔಟಾದ ಎರಡು ಇನಿಂಗ್ಸ್‌ಗಳು ಮಾತ್ರ ಇದ್ದವು," ಎಂದು ಅಜಯ್ ಜಡೇಜಾ ಹೇಳಿದ್ದಾರೆ.

ಶುಭಮನ್‌ ಗಿಲ್‌ ಔಟ್‌! IND vs ENG ಸಂಯೋಜನೆಯ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌

"ಅಲ್ಲಿ ಒಂದು ಬದಲಾವಣೆ ಕಂಡುಬಂದಿತು. ಅಲ್ಲಿಂದ ಧೈರ್ಯ ಪ್ರಾರಂಭವಾಯಿತು. ನಂತರ ಅವರು (ರವೀಂದ್ರ ಜಡೇಜಾ) ಮುಂದಿನ ಪಂದ್ಯದಲ್ಲಿ ನಿಲ್ಲುತ್ತಲೇ ಇದ್ದರು ಮತ್ತು ಪಂದ್ಯವನ್ನು ಡ್ರಾ ಮಾಡಿಕೊಂಡರು. ನಂತರ ಅವರು ಈ ಪಂದ್ಯದಲ್ಲೂ (ಕೊನೆಯ ಟೆಸ್ಟ್) ರನ್ ಗಳಿಸಿದರು," ಎಂದು ಅವರು ತಿಳಿಸಿದ್ದಾರೆ.

ದೊಡ್ಡ ದಾಖಲೆ ಮುರಿದ ರವೀಂದ್ರ ಜಡೇಜಾ

2025ರಲ್ಲಿ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ರವೀಂದ್ರ ಜಡೇಜಾ ಆರು ಬಾರಿ 50ಕ್ಕೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದ್ದಾರೆ. ಇದು ಈಗ ಇಂಗ್ಲೆಂಡ್ ನೆಲದಲ್ಲಿ ಪ್ರವಾಸಿ ಆಟಗಾರನೊಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ. 1966 ರಲ್ಲಿ 5 ಬಾರಿ 50ಕ್ಕೂ ಹೆಚ್ಚಿನ ರನ್‌ಗಳನ್ನು ಗಳಿಸಿದ್ದ ವೆಸ್ಟ್ ಇಂಡೀಸ್‌ನ ದಂತಕಥೆ ಆಲ್‌ರೌಂಡರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ.

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ರವೀಂದ್ರ ಜಡೇಜಾ ಅವರ 516 ರನ್‌ಗಳು ಇಂಗ್ಲೆಂಡ್‌ನಲ್ಲಿ 6ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಪ್ರವಾಸಿ ಆಟಗಾರನೊಬ್ಬ ಗಳಿಸಿದ ಎರಡನೇ ಅತ್ಯಧಿಕ ರನ್‌ಗಳಾಗಿವೆ. 1966 ರಲ್ಲಿ ಸೋಬರ್ಸ್ 722 ರನ್‌ಗಳನ್ನು ಕಲೆ ಹಾಕಿದ್ದರು.