ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಕೆಕೆಆರ್‌ ಎದುರು ಶತಕ ಬಾರಿಸಿದ ವಿರಾಟ್‌ ಕೊಹ್ಲಿ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಅಜೇಯ ಶತಕ ಸಿಡಿಸಿದ ವಿರಾಟ್‌ ಕೊಹ್ಲಿಯನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅನುಭವಿಗಳಾದ ಹಿರಿಯ ಆಟಗಾರರು ಇನ್ನೂ ಸಾಕಷ್ಟು ಕೊಡುಗೆ ನೀಡಬಲ್ಲರು ಎಂಬುದಕ್ಕೆ ಈ ಇನಿಂಗ್ಸ್‌ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಕೆಕೆಆರ್‌ ಎದುರು ಶತಕ ಸಿಡಿಸಿದ ಕೊಹ್ಲಿ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

ವಿರಾಟ್‌ ಕೊಹ್ಲಿಯನ್ನು ಗುಣಗಾಣ ಮಾಡಿದ ಸುನೀಲ್‌ ಗವಾಸ್ಕರ್‌. -

Profile
Ramesh Kote May 14, 2026 5:09 PM

ರಾಯ್ಪುರ: ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಅಜೇಯ ಶತಕ ಸಿಡಿಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಗೆಲ್ಲಿಸಿದ ವಿರಾಟ್‌ ಕೊಹ್ಲಿಯನ್ನು (Virat Kohli) ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಗುಣಗಾನ ಮಾಡಿದ್ದಾರೆ. ಹಳೆಯ ತಲೆಮಾರಿನ ಆಟಗಾರರು ಈಗಲೂ ತಂಡಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಬಲ್ಲರು ಎಂಬುದಕ್ಕೆ ವಿರಾಟ್‌ ಕೊಹ್ಲಿಯ ಇನಿಂಗ್ಸ್‌ ಸಾಕ್ಷಿ ಎಂದು ಹೇಳಿದ್ದಾರೆ. ಕೊಹ್ಲಿಯ 9ನೇ ಶತಕದ ಬಲದಿಂದ ಆರ್‌ಸಿಬಿ ತಂಡ, 6 ವಿಕೆಟ್‌ಗಳಿಂದ ಕೆಕೆಆರ್‌ ತಂಡವನ್ನು ಮಣಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಪುನಃ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಸತತ ಎರಡು ಡಕ್‌ಔಟ್‌ಗಳ ಬಳಿಕ ಕೆಕೆಆರ್‌ ವಿರುದ್ಧ ಚೇಸಿಂಗ್‌ನಲ್ಲಿ ಕಣಕ್ಕೆ ಇಳಿದ ಕೊಹ್ಲಿ 60 ಎಸೆತಗಳಲ್ಲಿ ಅಜೇಯ 105 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಆರ್‌ಸಿಬಿ 194 ರನ್‌ ಗಳಿಸಿ ಗೆದ್ದು ಬೀಗಿತು. ಈ ಗೆಲುವಿನ ಮೂಲಕ ಆರ್‌ಸಿಬಿ ತಂಡದ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಈ ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸುನೀಲ್‌ ಗವಾಸ್ಕರ್‌, ವಿರಾಟ್‌ ಕೊಹ್ಲಿ ಆಟವನ್ನು ಮೆಚ್ಚುಕೊಂಡರು.

"ಕೆಕೆಆರ್‌ ಎದುರು ವಿರಾಟ್‌ ಕೊಹ್ಲಿಯ ಪ್ರದರ್ಶನ ಅಸಾಧಾರಣವಾಗಿದೆ. ಗುರಿ ಬೆನ್ನಟ್ಟುವ ಇನಿಂಗ್ಸ್‌ ಅನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಬಹುತೇಕ ಆಟಗಾರರಿಗಿಂತ ಚೆನ್ನಾಗಿ ಅವರಿಗೆ ಗೊತ್ತಿದೆ. ಈ ಆವೃತ್ತಿಯನ್ನು ಎಲ್ಲರೂ ಹೊಸ ತಲೆಮಾರಿನ ಆಟಗಾರರ ಟೂರ್ನಿ ಎಂದು ಮಾತನಾಡುತ್ತಿದ್ದ ವೇಳೆ, ವಿರಾಟ್‌ ಕೊಹ್ಲಿ ಅವರು ತಾವು ಇನ್ನೂ ಇಲ್ಲಿ ಇದ್ದೇವೆ ಎಂಬುದನ್ನು ತೋರಿಸಿದರು. ಶತಕದ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ ಅವರು, ಆರೆಂಜ್ ಕ್ಯಾಪ್ ಪೈಪೋಟಿಯಲ್ಲಿ ಮೂರನೇ ಸ್ಥಾನಕ್ಕೂ ಏರಿದರು. ಹಳೆಯ ತಲೆಮಾರಿನ ಆಟಗಾರರು ಇನ್ನೂ ಶ್ರೇಷ್ಠರು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

RCB vs KKR: ವಿರಾಟ್‌ ಕೊಹ್ಲಿ ಶತಕದ ಬಲದಿಂದ ಗೆದ್ದು ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!

ಸುನೀಲ್‌ ಗವಾಸ್ಕರ್‌ ಅವರು ಕೊಹ್ಲಿಯ ಸಾಧನೆಗಳ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ದಾಖಲೆಗಳು ಮುರಿಯಲು ಮಾಡಲ್ಪಟ್ಟಿದ್ದರೂ, ಕೆಲವು ದಾಖಲೆಗಳನ್ನು ಮುರಿಯಲು ಇನೂ ಹಲವು ವರ್ಷಗಳು ಬೇಕಾಗಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

“ಟಿ20 ಶತಕಗಳ ವಿಷಯಕ್ಕೆ ಬಂದರೆ, ವಿರಾಟ್‌ ಕೊಹ್ಲಿ ಅವರು 10 ಶತಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಮುಂದೆ ಕ್ರಿಸ್‌ ಗೇಲ್‌ ಮತ್ತು ಬಾಬರ್‌ ಆಝಮ್‌ ಮಾತ್ರ ಇದ್ದಾರೆ. ಆದರೆ 14,000 ಟಿ20 ರನ್‌ಗಳನ್ನು ಅತಿ ವೇಗವಾಗಿ ಪೂರೈಸಿದ ಆಟಗಾರ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಇದರ ಜೊತೆಗೆ, ಐಪಿಎಲ್‌ನಲ್ಲಿ ಅವರ ಹೆಸರಿನಲ್ಲಿ ಒಂಬತ್ತು ಶತಕಗಳಿವೆ,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

RCB vs KKR ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಎಂಎಸ್‌ ಧೋನಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

“ದಾಖಲೆಗಳು ಮುರಿಯಲು ಮಾಡಲ್ಪಟ್ಟಿದ್ದರೂ, ಕೊಹ್ಲಿ ಪಂದ್ಯದಿಂದ ಪಂದ್ಯಕ್ಕೆ, ಸೀಸನ್‌ನಿಂದ ಸೀಸನ್‌ಗೆ ನೀಡುತ್ತಿರುವ ನಿರಂತರ ಪ್ರದರ್ಶನವನ್ನು ಯಾರಾದರೂ ಸರಿಗಟ್ಟಲು ತುಂಬಾ ಸಮಯ ಬೇಕಾಗಬಹುದು. ವಿರಾಟ್ ಕೊಹ್ಲಿಯ ಈ ಶತಕವು ಅವರ ಮಹತ್ವವನ್ನು ಮತ್ತೆ ನೆನಪಿಸಿದ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ,” ಎಂದು ಭಾರತ ತಂಡದ ಮಾಜಿ ನಾಯಕ ಗುಣಗಾನ ಮಾಡಿದ್ದಾರೆ.

ಕೊಹ್ಲಿ ಕ್ಯಾಚ್‌ ಡ್ರಾಪ್‌ ಬಗ್ಗೆ ಗವಾಸ್ಕರ್‌ ಪ್ರತಿಕ್ರಿಯೆ

“ಆರ್‌ಸಿಬಿ-ಕೆಕೆಆರ್ ಪಂದ್ಯಕ್ಕೂ ಮೊದಲು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಕ್ಯಾಚ್ ಪಡೆಯುವ ಸಾಮರ್ಥ್ಯ ಈ ಸೀಸನ್‌ನ ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮವಾಗಿತ್ತು. ಆದರೆ ಈ ಒಂದು ತಪ್ಪು ಅವರಿಗೆ ಭಾರೀ ಹೊಡೆತ ನೀಡಿತು,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

“ರೊವ್ಮನ್‌ ಪೊವೆಲ್‌ ಅವರಿಗೆ ಆರಂಭದಲ್ಲೇ ವಿರಾಟ್‌ ಕೊಹ್ಲಿ ಅವರನ್ನು ಔಟ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ಎತ್ತರಕ್ಕೆ ಜಿಗಿದು, ಸಮಯಕ್ಕೂ ಸರಿಯಾಗಿ ಕ್ಯಾಚ್ ಪಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಕೈಯಿಂದ ಜಾರಿ ಬಿತ್ತು. ಕೊಹ್ಲಿಯನ್ನು ಅವರ ಇನಿಂಗ್ಸ್‌ ಆರಂಭದಲ್ಲೇ ಬಿಡಬಾರದು. ನೀವು ಹಾಗೆ ಮಾಡಿದರೆ, ಅವರು ಪ್ರತೀ ಬಾರಿ ಅದರ ಬೆಲೆ ಕಟ್ಟಿಸುತ್ತಾರೆ,” ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.