RCB vs KKR: ಕೆಕೆಆರ್ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಆಡದೆ ಇರಲು ಕಾರಣ ಇಲ್ಲಿದೆ!
Why Bhuvneshwar Kumar missed for RCB vs KKR clash?: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಶನಿವಾರ ಆರಂಭವಾಯಿತು. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲನೇ ಪಂದ್ಯದಲ್ಲಿ ಕಾದಾಟ ನಡೆಸಿದವು. ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಭುವನೇಶ್ವರ್ ಕುಮಾರ್ ಆಡಲಿಲ್ಲ. ಇದಕ್ಕೆ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

ಕೆಕೆಆರ್ ಪಂದ್ಯದಲ್ಲಿ ಬೆಂಚ್ ಕಾದ ಭುವನೇಶ್ವರ್ ಕುಮಾರ್.

ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಆಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪಂದ್ಯದ ಟಾಸ್ ವೇಳೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಭುವನೇಶ್ವರ್ ಕುಮಾರ್ ಹೆಸರು ಇರಲಿಲ್ಲ. ಆದರೆ, ಯುವ ವೇಗಿ ರಸಿಖ್ ದಾರ್ ಸಲಾಮ್‌ಗೆ ಸ್ಥಾನವನ್ನು ನೀಡಲಾಗಿತ್ತು. ಇದೀಗ ಭುವನೇಶ್ವರ್ ಕುಮಾರ್‌ಗೆ ಬೆಂಗಳೂರು ತಂಡದ ಆಡುವ ಬಳಗದಲ್ಲಿ ಏಕೆ ಅವಕಾಶ ಸಿಗಲಿಲ್ಲ ಎಂಬುದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2025ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಈ ವೇಳೆ ಆರ್‌ಸಿಬಿ ಪ್ಲೇಯಿಂಗ್ XI ಪ್ರಕಟವಾಯಿತು. ನಾಯಕ ರಜತ್ ಪಾಟಿದಾರ್ ಕೂಡ ಆಡುವ ಬಳಗದ ಬಗ್ಗೆ ಮಾಹಿತಿ ನೀಡಿದರು. ಆದರೆ, ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರ ಹೆಸರು ಆಡುವ ಬಳಗದಲ್ಲಿ ಕಾಣಿಸಲಿಲ್ಲ. ಈ ವೇಳೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
RCB vs KKR: ಸ್ಪೋಟಕ ಅರ್ಧಶತಕ ಸಿಡಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ ಅಜಿಂಕ್ಯ ರಹಾನೆ!
ಭುವನೇಶ್ವರ್ ಕುಮಾರ್ ಏಕೆ ಆಡುತ್ತಿಲ್ಲ?
ಆರ್‌ಸಿಬಿ ತಂಡದ ಪ್ಲೇಯಿಂಗ್ XI ಅನ್ನು ಬೆಂಗಳೂರು ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದ ಬೆನ್ನಲ್ಲೆ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಏಕೆ ಕೈ ಬಿಡಲಾಯಿತು ಎಂಬ ಮಾಹಿತಿಯನ್ನು ನೀಡಿದೆ.
"ನಾವು ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗದ ಬೌಲರ್‌ಗಳನ್ನು ಆಡಿಸುತ್ತಿದ್ದೇವೆ. ವಿದೇಶಿ ಆಟಗಾರರ ಸ್ಥಾನಗಳಲ್ಲಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಹಾಗೂ ಜಾಶ್ ಹೇಝಲ್‌ವುಡ್ ಆಡುತ್ತಿದ್ದಾರೆ. ಸಣ್ಣ ಗಾಯದ ಕಾರಣ ಭುವನೇಶ್ವರ್ ಕುಮಾರ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರು ತಂಡಕ್ಕೆ ಅತಿ ಶೀಘ್ರದಲ್ಲಿಯೇ ಮರಳಲಿದ್ದಾರೆ," ಎಂದು ಬೆಂಗಳೂರು ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
Captaincy debut - RaPa has already kicked things off on a winning note! 🪙
— Royal Challengers Bengaluru (@RCBTweets) March 22, 2025
We'll be chasing first in the season opener! 🤩
Team News - we go with 2 spinners and 3 pacers. Salt, Liam, Tim and Hazlewood fill the overseas quota! 📰
Unfortunately Bhuvi misses out due to a minor… pic.twitter.com/9QMCK5ezY3
ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ರಸಿಕ್ ದಾರ್ ಸಲಾಮ್
ಭುವನೇಶ್ವರ್ ಕುಮಾರ್ ಅವರು ಪ್ಲೇಯಿಂಗ್ XIಗೆ ಅಲಭ್ಯರಾದ ಕಾರಣ, ಯುವ ವೇಗಿ ರಸಿಖ್ ದಾರ್ ಸಲಾಮ್‌ಗೆ ಆಡಲು ಅವಕಾಶ ಸಿಕ್ಕಿತು. ಆದರೆ, ಮೂರು ಓವರ್‌ಗಳನ್ನು ಬೌಲ್ ಮಾಡಿದ ರಸಿಖ್ ದಾರ್ ಸಲಾಮ್ 35 ರನ್ ನೀಡಿದರೂ ಅಪಾಯಕಾರಿ ಸುನೀಲ್ ನರೇನ್ (44 ರನ್) ಅವರನ್ನು ಔಟ್ ಮಾಡಿದ್ದರು.
IPL 2025: ʻಈ ಬಾರಿಯೂ ಕಪ್ ಗೆಲ್ಲಲ್ಲ, ಆರ್‌ಸಿಬಿಗೆ ಕೊನೆಯ ಸ್ಥಾನʼ-ಆಡಂ ಗಿಲ್‌ಕ್ರಿಸ್ಟ್ ಭವಿಷ್ಯ!
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರಸಿಕ್ ದಾರ್ ಸಲಾಮ್, ಸಯಾಶ್ ಶರ್ಮಾ, ಜಾಶ್ ಹೇಝಲ್‌ವುಡ್, ಯಶ್ ದಯಾಳ್
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್
ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗಕೃಷ್ ರಘುವಂಶಿ, ಸುನೀಲ್ ನರೇನ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ