IPL 2026: ರಿಟೆನ್ಷನ್ ಬಳಿಕ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ನಲ್ಲಿರುವ ಬಾಕಿ ಮೊತ್ತದ ವಿವರ!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಎಲ್ಲಾ 10 ತಂಡಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಎಲ್ಲಾ ಪ್ರಕ್ರಿಯೆಗಳ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಪರ್ಸ್‌ನಲ್ಲಿ 64.30 ಕೋಟಿ ರು. ಉಳಿದಿದೆ. ಅಂದ ಹಾಗೆ ಎಲ್ಲಾ ಫ್ರಾಂಚೈಸಿಗಳ ಬಳಿ ಉಳಿದಿರುವ ಹಣದ ವಿವರವನ್ನು ಇಲ್ಲಿ ವಿವರಿಸಲಾಗಿದೆ.
ರಿಟೆನ್ಷನ್ ಬಳಿಕ ಎಲ್ಲಾ ಫ್ರಾಂಚೈಸಿಗಳ ಖಾತೆಯಲ್ಲಿರುವ ಹಣದ ವಿವರ. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ತಂಡಗಳು ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿವೆ. ಇದಕ್ಕೂ ಮುನ್ನ ಹಲವು ಆಟಗಾರರನ್ನು ಸಹ ವಿನಿಮಯ ಮಾಡಿಕೊಳ್ಳಲಾಗಿದೆ. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿನಿಮಯ ಮಾಡಿಕೊಂಡರೆ, ರಾಜಸ್ಥಾನ ರವೀಂದ್ರ ಜಡೇಜಾ (Ravindra Jadeja) ಅವರನ್ನು ಖರೀದಿಸಿತು. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ಆಟಗಾರರ ಹರಾಜು ನಡೆಯಬಹುದು ಎಂದು ವರದಿಗಳು ಹೇಳುತ್ತಿವೆ.
ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರ ವೇತನವನ್ನು ಹರಾಜಿನಲ್ಲಿ ಬಳಸಬಹುದು. ಕಳೆದ ಋತುವಿನಲ್ಲಿ ಪ್ರತಿ ಫ್ರಾಂಚೈಸಿ 120 ಕೋಟಿ ರು ಮೊತ್ತದ ಪರ್ಸ್ ಹೊಂದಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ನಂತರ ತನ್ನ ಖಾತೆಯಲ್ಲಿ ಅತ್ಯಧಿಕ ಮೊತ್ತವನ್ನು ಹೊಂದಿದೆ. ಶಾರುಖ್ ಖಾನ್ ಮಾಲೀಕತ್ವದ ಕಕೆಆರ್ 64.30 ಕೋಟಿ ರು ಅತ್ಯಧಿಕ ಮೊತ್ತವನ್ನು ತನ್ನ ಪರ್ಸ್‌ನಲ್ಲಿ ಹೊಂದಿದೆ. ಮುಂಬೈ ಇಂಡಿಯನ್ಸ್ 2.75 ಕೋಟಿ ರು. ಮೊತ್ತವನ್ನು ಹೊಂದಿದೆ. ಇದು ಇನ್ನುಳಿದ 9 ತಂಡಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಮೊತ್ತವಾಗಿದೆ.
IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ತನ್ನ ತಂಡದ ಅತ್ಯಂತ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಅವರನ್ನು ಬಿಡುಗಡೆ ಮಾಡಿದೆ. ಅವರ ಮೌಲ್ಯ 23.75 ಕೋಟಿ ರೂ. ಆಗಿತ್ತು. ಎರಡು ಬಾರಿ ಐಪಿಎಲ್ ವಿಜೇತ ಆಂಡ್ರೆ ರಸೆಲ್ ಅವರನ್ನು ಸಹ ಬಿಡುಗಡೆ ಮಾಡಿದೆ. ಅವರನ್ನು ಈ ಹಿಂದೆ 12 ಕೋಟಿ ರು. ಗೆ ಉಳಿಸಿಕೊಂಡಿತ್ತು. ಅದಕ್ಕಾಗಿಯೇ ಫ್ರಾಂಚೈಸಿ ಅತಿ ಹೆಚ್ಚು ಮೊತ್ತವನ್ನು ತನ್ನ ಪರ್ಸ್‌ನಲ್ಲಿ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ರವಿಚಂದ್ರನ್ ಅಶ್ವಿನ್ ಐಪಿಎಲ್ ವೃತ್ತಿ ಜೀವನಕ್ಕೂ ವಿದಾಯ ಹೇಳಿದ್ದಾರೆ. ಅವರನ್ನು ಚೆನ್ನೈ ಫ್ರಾಂಚೈಸಿ 9.75 ಕೋಟಿ ರು. ಗೆ ಖರೀದಿಸಿತು. ತಂಡವು ಮತೀಶ ಪತಿರಣ ಅವರನ್ನು ಬಿಡುಗಡೆ ಮಾಡಿದೆ. ಇವರ ಮೌಲ್ಯ 13 ಕೋಟಿ ರೂ.ಗೆ ಆಗಿದೆ. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಬಳಿ ಇದೀಗ 43.4 ಕೋಟಿ ರೂ. ಉಳಿದಿದೆ.
IPL 2026: ಮಯಾಂಕ್ ಅಗರ್ವಾಲ್ ಔಟ್! ಆರ್‌ಸಿಬಿ ರಿಲೀಸ್, ರಿಟೈನ್ ಆಟಗಾರರ ಪಟ್ಟಿ ಇಲ್ಲಿದೆ!
ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ
ಕೋಲ್ಕತ್ತಾ ನೈಟ್ ರೈಡರ್ಸ್: 64.3 ಕೋಟಿ ರು
ಚೆನ್ನೈ ಸೂಪರ್ ಕಿಂಗ್ಸ್: 43.4 ಕೋಟಿ ರು
ಸನ್‌ರೈಸರ್ಸ್ ಹೈದರಾಬಾದ್: 25.5 ಕೋಟಿ ರು
ಲಖನೌ ಸೂಪರ್ ಜಯಂಟ್ಸ್: 22.95 ಕೋಟಿ ರು
ಡಲ್ಲಿ ಕ್ಯಾಪಿಟಲ್ಸ್: 21.8 ಕೋಟಿ ರು
ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.4 ಕೋಟಿ ರು
ರಾಜಸ್ಥಾನ್ ರಾಯಲ್ಸ್: 16.05 ಕೋಟಿ ರು
ಗುಜರಾತ್ ಟೈಟನ್ಸ್: 12.9 ಕೋಟಿ ರು
ಪಂಜಾಬ್ ಕಿಂಗ್ಸ್: 11.5 ಕೋಟಿ ರು
ಮುಂಬೈ ಇಂಡಿಯನ್ಸ್: 2.75 ಕೋಟಿ ರು