ಹರಾಜಿನಲ್ಲಿ ಐದು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್
IPL 2026 auction: ಐಪಿಎಲ್ ಹರಾಜಿನಲ್ಲಿ 240 ಭಾರತೀಯರು ಸೇರಿದಂತೆ ಒಟ್ಟು 350 ಕ್ರಿಕೆಟಿಗರು ಹರಾಜಾಗಲಿದ್ದಾರೆ. ಅತ್ಯಧಿಕ ಮೀಸಲು ಬೆಲೆ 2 ಕೋಟಿ ರೂ. ಆಗಿದ್ದು, 40 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. 21.80 ಕೋಟಿ ರೂ. ಹಣದೊಂದಿಗೆ, ದೆಹಲಿ ತಂಡವು ಎಂಟು ಆಟಗಾರರನ್ನು ಖರೀದಿ ಮಾಡಬಹುದು.
Delhi Capitals IPL 2026 -
ನವದೆಹಲಿ, ಡಿ.11: ಐಪಿಎಲ್ ಮಿನಿ ಹರಾಜು(IPL 2026 auction) ಪ್ರಕ್ರಿಯೆಗೆ ಇನ್ನು ಕೇವಲ 5 ದಿನ ಮಾತ್ರ ಬಾಕಿ ಉಳಿದಿದೆ. ಡಿ.16 ರಂದು ದುಬೈನಲ್ಲಿ ಹರಾಜು ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಕೊನೆಯ ಹಂತದ ತಯಾರಿಯಲ್ಲಿ ಬ್ಯೂಸಿಯಾಗಿದೆ. ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡವೂ ಚೊಚ್ಚಲ ಟ್ರೋಫಿ ಗೆಲ್ಲುವ ನಿಟ್ಟಿನಲ್ಲಿ ಬಲಿಷ್ಠ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ, ವಿಶೇಷವಾಗಿ ಅಗ್ರ ಕ್ರಮಾಂಕದಲ್ಲಿ ಮತ್ತು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ. ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಫಾಫ್ ಡು ಪ್ಲೆಸಿಸ್ ಅವರ ನಿರ್ಗಮನದಿಂದ ಅವರ ಸ್ಥಾನಕ್ಕೇ ಸೂಕ್ತ ಆಟಗಾರ ಬೇಕಿದೆ. ಪ್ರಸ್ತುತ ತಂಡದಲ್ಲಿ ಕೇವಲ ಮೂವರು ವಿದೇಶಿ ಆಟಗಾರರು ಮಾತ್ರ ಇರುವುದರಿಂದ, ಫ್ರಾಂಚೈಸಿ ಒಂದೇ ಮಾರ್ಕ್ಯೂ ಸೇರ್ಪಡೆಯ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಾಗಿ ಪಾತ್ರಗಳಲ್ಲಿ ಬಹು ವಿದೇಶಿ ಆಟಗಾರರನ್ನು ಒಪ್ಪಂದ ಮಾಡಿಕೊಳ್ಳಲು ಆದ್ಯತೆ ನೀಡಬೇಕು.
ಐಪಿಎಲ್ ಹರಾಜಿನಲ್ಲಿ 240 ಭಾರತೀಯರು ಸೇರಿದಂತೆ ಒಟ್ಟು 350 ಕ್ರಿಕೆಟಿಗರು ಹರಾಜಾಗಲಿದ್ದಾರೆ. ಅತ್ಯಧಿಕ ಮೀಸಲು ಬೆಲೆ 2 ಕೋಟಿ ರೂ. ಆಗಿದ್ದು, 40 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. 21.80 ಕೋಟಿ ರೂ. ಹಣದೊಂದಿಗೆ, ದೆಹಲಿ ತಂಡವು ಎಂಟು ಆಟಗಾರರನ್ನು ಖರೀದಿ ಮಾಡಬಹುದು. ಅವರಲ್ಲಿ ಐದು ಮಂದಿ ವಿದೇಶಿಯರು.
ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಬೆನ್ ಡಕೆಟ್, ಡೇವಿಡ್ ಮಿಲ್ಲರ್, ಜಾಕೋಬ್ ಡಫಿ,ಮ್ಯಾಥ್ಯೂ ಫೋರ್ಡ್ ಮತ್ತು ಮಥೀಷಾ ಪತಿರಾಣ ಮೇಲೆ ಕಣ್ಣಿಟ್ಟಿದೆ. ಎಡಗೈ ಆಕ್ರಮಣಾರಿ ಬ್ಯಾಟರ್ ಆಗಿರುವ ಡಕೆಟ್ ಪವರ್‌ಪ್ಲೇ ಅನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ ಮತ್ತು ಮೊದಲ ಆರು ಓವರ್‌ಗಳಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಬಹುದು. ಡೇವಿಡ್ ಮಿಲ್ಲರ್ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಜತೆಗೆ ಚುರುಕಿನ ಫೀಲ್ಡಿಂಗ್ ಮಾಡಬಲ್ಲರು.
ಇದನ್ನೂ ಓದಿ ಐಪಿಎಲ್ 2026 ಹರಾಜಿನಿಂದ ಹ್ಯಾರಿ ಬ್ರೂಕ್‌ಗೆ ನಿಷೇಧ; ಕಾರಣವೇನು?
ಡೆಲ್ಲಿ ತಂಡದ ಆಟಗಾರರು
ನಿತೀಶ್ ರಾಣಾ (ಆರ್‌ಆರ್‌ನಿಂದ ಟ್ರೇಡ್), ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆ.ಎಲ್. ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಜ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ವಿಪ್‌ರಾಜ್ ಕುಮಾರ್ ನಿಗಮ್ಸ್.
ಬಿಡುಗಡೆಯಾದ ಆಟಗಾರರು: ಡೊನೊವನ್ ಫೆರೇರಾ, ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗ್ರುಕ್, ಸೆಡಿಕುಲ್ಲಾ ಅಟಲ್ , ಮನ್ವಂತ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ.