ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್ 2026 ಹರಾಜಿನಿಂದ ಹ್ಯಾರಿ ಬ್ರೂಕ್‌ಗೆ ನಿಷೇಧ; ಕಾರಣವೇನು?

Harry Brook: ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈಗ 20 ಆಟಗಾರರನ್ನು ಹೊಂದಿದ್ದು, ಕಡಿಮೆ ಹಣದೊಂದಿಗೆ (INR 2.75 ಕೋಟಿ) ಹರಾಜಿಗೆ ಪ್ರವೇಶಿಸಲಿದೆ.

ಐಪಿಎಲ್ 2026 ಹರಾಜಿನಿಂದ ಹ್ಯಾರಿ ಬ್ರೂಕ್‌ಗೆ ನಿಷೇಧ; ಕಾರಣವೇನು?

Harry Brook -

Abhilash BC
Abhilash BC Dec 11, 2025 2:35 PM

ಮುಂಬಯಿ, ಡಿ.11: ಬಹುನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಿನಿ ಹರಾಜು(IPL 2026 auction) ಡಿಸೆಂಬರ್‌ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಬಿಸಿಸಿಐ ಹರಾಜಿನಲ್ಲಿ ಭಾಗವಹಿಸುವ 359 ಆಟಗಾರರ ಪಟ್ಟಿಯನ್ನು ಫೈನಲ್‌ ಮಾಡಿದೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್‌(Harry Brook) ಅವರು ಸ್ಥಾನ ಪಡೆಯದಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಅವರು ತಮ್ಮ ಹೆಸರನ್ನು ಐಪಿಎಲ್‌ ಹಾರಾಜಿನಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡಿದ್ದರು. ಆದರೆ, ಬಿಸಿಸಿಐ ಅವರ ಹೆಸರನ್ನು ಅಂತಿಮ ಪಟ್ಟಿಗೆ ಪರಿಗಣಿಸಿಲ್ಲ.

ಇದಕ್ಕೆ ಪ್ರಮುಖ ಕಾರಣ ಹ್ಯಾರಿ ಬ್ರೂಕ್‌ ಅವರ ಮೇಲೆ ಐಪಿಎಲ್ ಗರ್ವನರ್ ಕೌನ್ಸಿಲ್ 2 ವರ್ಷಗಳ ಕಾಲ ನಿಷೇದ ಹೇರಿದ್ದು, ಅವರು ಪ್ರಸ್ತುತ ಬ್ಯಾನ್‌ನಲ್ಲಿದ್ದಾರೆ. ಹ್ಯಾರಿ ಬ್ರೂಕ್‌ ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ 6.25 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಿಕೊಂಡಿದ್ದರು. ಆದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಿದ್ಧತೆಯ ಕಾರಣದಿಂದಾಗಿ ಹಿಂದೆ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇರುವಾಗ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಬ್ರೂಕ್‌ ಅವರ ಈ ನಿರ್ಧಾರವೇ ಬಿಸಿಸಿಐ ಅವರ ಹೆಸರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲು ಮುಖ್ಯ ಕಾರಣವಾಗಿದೆ. ಏಕೆಂದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹೊಸ ನಿಯಮದನ್ವಯ ಐಪಿಎಲ್‌ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರನ್ನು ಟೂರ್ನಿಯಿಂದ ಎರಡು ವರ್ಷ ಬ್ಯಾನ್‌ ಮಾಡಲಾಗುತ್ತದೆ.

ಇದನ್ನೂ ಓದಿ IPL 2026: ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಕಣ್ಣಿಟ್ಟಿರುವ ಐವರು ಆಟಗಾರರು!

ಈ ಹಿಂದೆ ಕೆಲ ಆಟಗಾರರು ಐಪಿಎಲ್‌ ಹರಾಜಿನ ಮೂಲಕ ತಂಡಕ್ಕೆ ಆಯ್ಕೆಯಾದರೂ, ಟೂರ್ನಿ ಆರಂಭದಲ್ಲಿ ಬೇರೆ ಬೇರೆ ಕಾರಣಗಳಿಂದ ಹಿಂದೆ ಸರಿಯುತ್ತಿದ್ದರು. ವಿದೇಶಿ ಆಟಗಾರರ ಈ ನಡೆ ಫ್ರಾಂಚೈಸಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆಯ್ಕೆಯಾಗಿ ಬ್ರೂಕ್‌ ಅವರು ಹಿಂದೆ ಸರದಿದ್ದರು. ಈ ಕಾರಣದಿಂದಾಗಿ ಅವರನ್ನು ಎರಡು ವರ್ಷಗಳ ಅವಧಿಗೆ ಬ್ಯಾನ್‌ ಮಾಡಲಾಗಿದೆ. ಇದರಿಂದಾಗಿ ಅವರು 2026 ಮತ್ತು 2027ರ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.

ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇದರಲ್ಲಿ 246 ಜನ ಭಾರತೀಯ ಆಟಗಾರರು, 113 ವಿದೇಶಿ ಆಟಗಾರರಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈಗ 20 ಆಟಗಾರರನ್ನು ಹೊಂದಿದ್ದು, ಕಡಿಮೆ ಹಣದೊಂದಿಗೆ (INR 2.75 ಕೋಟಿ) ಹರಾಜಿಗೆ ಪ್ರವೇಶಿಸಲಿದೆ. ಹರಾಜಿನಲ್ಲಿ ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡಬಹುದು, ಅದರಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರು ಸೇರಿದ್ದಾರೆ. ಒಂದೇ ದಿನದಲ್ಲಿ ಮಿನಿ ಹರಾಜು ನಡೆಯಲಿದೆ.