Sanju Samson or Shreyas Iyer? ಭಾರತ ಟಿ20 ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ ರವಿ ಶಾಸ್ತ್ರಿ!
ಸೂರ್ಯಕುಮಾರ್ ಯಾದವ್ ಅವರು ಸತತ ಬ್ಯಾಟಿಂಗ್ ವೈಫಲ್ಯದ ಹಿನ್ನೆಲೆಯಲ್ಲಿ ದೀರ್ಘಾವಧಿ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳುನಡೆಯುತ್ತಿವೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಳಿಕ ಭಾರತ ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕರಾಗಬಹದೆಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಶ್ರೇಯಸ್ ಅಯ್ಯರ್ ಆಗಬಹುದೆಂದು ಹೇಳುತ್ತಿದ್ದಾರೆ. ಈ ಚರ್ಚೆಗೆ ಇದೀಗ ಭಾರತ ತಂಡದ ಮಾಜಿ ಹೆಡ್ ಕಚ್ ರವಿ ಶಾಸ್ತ್ರಿ ಸೇರ್ಪಡೆಯಾಗಿದ್ದಾರೆ.
ಸಂಜು-ಅಯ್ಯರ್ ನಡುವೆ ಸೂಕ್ತ ಭಾರತ ಟಿ20 ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ ಶಾಸ್ತ್ರಿ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿನ ಫಾರ್ಮ್ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕತ್ವಕ್ಕೆ ಸಂಜು ಸ್ಯಾಮ್ಸನ್ (Sanju Samson) ಪ್ರಬಲ ಸ್ಪರ್ಧಿಯಾಗಿದ್ದಾರೆಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ ಐದು ಇನಿಂಗ್ಸ್‌ಗಳಿಂದ 321 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, "ಭಾರತ ತಂಡ 2028ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂದಿನಿಂದಲೇ ತಯಾರಿ ನಡೆಸಬಹುದು ಹಾಗೂ ನೂತನ ನಾಯಕನನ್ನು ಆರಿಸಬಹುದು, ಆದರೆ ಇದೆಲ್ಲವೂ ಮುಂದಿನ ಎರಡು ವರ್ಷಗಳಲ್ಲಿ ಸೂರ್ಯಕುಮಾರ್ ಯಾದವ್ ಹೇಗೆ ಪ್ರದರ್ಶನವನ್ನು ತೋರಲಿದ್ದಾರೆಂಬುದರ ಮೇಲೆ ಅವಲಂಬಿಸಿದೆ. ಆದರೆ, ಭಾರತ ಟಿ20 ತಂಡದ ನಾಯಕತ್ವದ ರೇಸ್‌ನಲ್ಲಿ ಸಂಜು ಸ್ಯಾಮ್ಸನ್ ಕೂಡ ಇದ್ದಾರೆ, ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದಾರೆ," ಎಂದು ಹೇಳಿದ್ದಾರೆ.
IPL 2026: ಪ್ರಿನ್ಸ್ ಯಾದವ್‌ಗೆ ಕ್ಲೀನ್ ಬೌಲ್ಡ್ ಆದ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಕಿಂಗ್ ವಿರಾಟ್ ಕೊಹ್ಲಿ!
ವಿದ್ವಂಸಕ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಸಂಜು ಸ್ಯಾಮ್ಸನ್ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸಂಜು ಸ್ಯಾಮ್ಸನ್ ಅವರನ್ನು ನಾನು ಗಮನಿಸುತ್ತಿದ್ದೇನೆ. ಇದು ಕೇವಲ ಆರಂಭ ಮಾತ್ರ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಸಂಜುವಿನಿಂದ ಇನ್ನೂ ಹೆಚ್ಚಿನ ಸಾಧನೆಗಳನ್ನು ನೀವು ನೋಡಲಿದ್ದೀರಿ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸಂಜು ಸ್ಯಾಮ್ಸನ್ ಐದು ಐಪಿಎಲ್ ಸೀಸನ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. 2022ರಲ್ಲಿ ಅವರು ತಂಡವನ್ನು ರನ್ನರ್-ಅಪ್ ಸ್ಥಾನಕ್ಕೆ ಕೊಂಡೊಯ್ದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಯಾಮ್ಸನ್ ತಮ್ಮ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, ಇದೀಗ ನಡೆಯುತ್ತಿರುವ ಐಪಿಎಲ್ ಸೀಸನ್‌ನಲ್ಲಿ ಅದೇ ಫಾರ್ಮ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ಮುಂದುವರೆಸಿದ್ದಾರೆ. ಅವರು 11 ಇನಿಂಗ್ಸ್‌ಗಳಲ್ಲಿ 430 ರನ್‌ಗಳನ್ನು 53.75ರ ಸರಾಸರಿ ಹಾಗೂ 169.29 ಸ್ಟ್ರೈಕ್ ರೇಟ್‌ನೊಂದಿಗೆ ದಾಖಲಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಶತಕಗಳು ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ.
2027ರ ಒಡಿಐ ವಿಶ್ವಕಪ್ ಆಡ್ತಿರಾ? ಎಂಬ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ವಿರಾಟ್ ಕೊಹ್ಲಿ!
ಸಂಜು ಸ್ಯಾಮ್ಸನ್ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆ 21 ಇನಿಂಗ್ಸ್‌ಗಳಲ್ಲಿ 797 ರನ್‌ಗಳನ್ನು 46.88 ಸರಾಸರಿ ಹಾಗೂ 177.50 ಸ್ಟ್ರೈಕ್ ರೇಟ್‌ನೊಂದಿಗೆ ಹೊಡೆದಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.
ಹಿಂದಿನ ದಿನಗಳಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಥಿರತೆಯ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಆದರೆ ಈ ವರ್ಷದ ಪ್ರದರ್ಶನವು ಅವರ ಆಟದಲ್ಲಿ ಹೆಚ್ಚುತ್ತಿರುವ ಪ್ರೌಢಿಮೆಯನ್ನು ತೋರಿಸುತ್ತಿರುವುದರಿಂದ, ಅದು ಈಗ ಸಮಸ್ಯೆಯೇ ಅಲ್ಲ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
“ಸಂಜು (ಸ್ಯಾಮ್ಸನ್) ಈಗ ಆ ಎಲ್ಲ ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಸಾಮರ್ಥ್ಯ ಯಾವಾಗಲೂ ಇತ್ತು. ಆದರೆ ಆ ಸಾಮರ್ಥ್ಯಕ್ಕೆ ತಕ್ಕ ನ್ಯಾಯ ಒದಗಿಸಲಿಲ್ಲ ಎಂಬ ಕಾರಣಕ್ಕೆ ಜನರು ನಿರಾಶರಾಗುತ್ತಿದ್ದರು,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
IPL 2026: ಮುಂಬೈ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಈ ಆಟಗಾರನೇ ಕಾರಣ ಎಂದ ಶ್ರೇಯಸ್ ಅಯ್ಯರ್!
“ಆದರೆ ಈ ಸೀಸನ್‌ನಲ್ಲಿ ಅವರು ತೋರಿಸಿರುವ ಆಟ ಅದ್ಭುತವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಅವರು ಒಬ್ಬರೇ ಭಾರತಕ್ಕೆ ಪ್ರಮುಖ ಪಂದ್ಯಗಳನ್ನು ಗೆಲ್ಲಿಸುವ ಮಟ್ಟಿಗೆ ಪ್ರದರ್ಶನ ನೀಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಅವರು ತೋರಿದ ಧೈರ್ಯ ಮತ್ತು ಜವಾಬ್ದಾರಿ ಗಮನಾರ್ಹ. ಈಗ ಐಪಿಎಲ್‌ನಲ್ಲಿ ಅವರು ತೋರಿಸುತ್ತಿರುವ ಪ್ರೌಢಿಮೆ ನೋಡಿದರೆ, ಭವಿಷ್ಯದಲ್ಲಿ ನಾಯಕತ್ವದ ಪಾತ್ರಕ್ಕೆ ಅವರು ಸ್ಪಷ್ಟವಾದ ಅಭ್ಯರ್ಥಿ ಎಂದು ನನಗೆ ಅನಿಸುತ್ತದೆ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.