ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

AUS vs SA ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಡೇವಿಡ್‌ ಮಿಲ್ಲರ್‌, ಕ್ವಿಂಟನ್‌ ಡಿ ಕಾಕ್‌ಗೆ ಸ್ಥಾನ!

South Africa ODI Squad: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾಗಿದೆ. ಹಿರಿಯ ಆಟಗಾರರಾದ ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಸೆಪ್ಟಂಬರ್‌ 24 ರಂದು ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ.

AUS vs SA: ಆಸ್ಟ್ರೇಲಿಯಾ ಒಡಿಐ ಸರಣಿಗೆ ದಕ್ಷಿಣ ಆಫ್ರಿಕಾ ತಂಡ!

ಆಸ್ಟ್ರೇಲಿಯಾ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ. -

Profile
Ramesh Kote Sep 7, 2026 11:09 PM

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (AUS vs SA) ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯೊಂದಿಗೆ ದಕ್ಷಿಣ ಆಫ್ರಿಕಾದ ತವರಿನ ಕ್ರಿಕೆಟ್ ಋತು ಆರಂಭವಾಗಲಿದೆ. ನಿಯಮಿತ ನಾಯಕ ತೆಂಬಾ ಬವುಮಾ (Temba Bavuma) ತಂಡಕ್ಕೆ ಮರಳಿದ್ದು, ಹಿರಿಯ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೆಪ್ಟೆಂಬರ್ 24ರಂದು ಡರ್ಬನ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಈ ಏಕದಿನ ಸರಣಿ ಆರಂಭವಾಗಲಿದೆ. ಹೀಗಾಗಿ 2027ರ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನ ಮಿಲ್ಲರ್ ಮತ್ತು ಡಿ ಕಾಕ್ ಇಬ್ಬರೂ ದಕ್ಷಿಣ ಆಫ್ರಿಕಾ ತಂಡದ ಯೋಜನೆಗಳಲ್ಲಿ ಪ್ರಮುಖ ಭಾಗವಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಆಟಗಾರರ ಲಭ್ಯತೆಯನ್ನು ಪರಿಗಣಿಸಿದರೆ ಸಾಧ್ಯವಾದಷ್ಟು ಬಲಿಷ್ಠವಾಗಿರುವ 16 ಸದಸ್ಯರ ತಂಡವನ್ನು ದಕ್ಷಿಣ ಆಫ್ರಿಕಾ ಆಯ್ಕೆ ಮಾಡಿದೆ. ಮಿಲ್ಲರ್ ಮತ್ತು ಡಿ ಕಾಕ್ ಸದ್ಯ ಕೇಂದ್ರ ಗುತ್ತಿಗೆ ಹೊಂದಿಲ್ಲ. ಆದರೂ ಈ ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಬ್ಬರೂ ದಕ್ಷಿಣ ಆಫ್ರಿಕಾ ಪರ ಆಡಿದ್ದರು.

ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ವಿಶೇಷ ಮೆಂಟರ್‌ ಆಗಿ ಕೆವಿನ್‌ ಪೀಟರ್ಸನ್‌ ನೇಮಕ!

ಮೂರು ವರ್ಷಗಳ ಬಳಿಕ ಜೆರಾಲ್ಡ್ ಕೊಯೆಟ್ಜಿ ವಾಪಸ್

ತಂಡದಲ್ಲಿ ಜೆರಾಲ್ಡ್ ಕೊಯೆಟ್ಜಿ ಕೂಡ ಮರಳಿದ್ದಾರೆ. ಅವರು ಕೊನೆಯ ಬಾರಿ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು. ಕಗಿಸೊ ರಬಾಡ ಗಾಯದ ಕಾರಣ ಏಕದಿನ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಕೊಯೆಟ್ಜಿ ಅವರ ಮರಳುವಿಕೆ ದಕ್ಷಿಣ ಆಫ್ರಿಕಾಗೆ ದೊಡ್ಡ ಬಲ ನೀಡಿದೆ. ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಬಳಲುತ್ತಿರುವ ರಬಾಡ ಟೆಸ್ಟ್ ಸರಣಿಗೆ ಸಂಪೂರ್ಣ ಫಿಟ್ ಆಗಲು ಸಮಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಯದ ಸಮಸ್ಯೆಗಳಿಂದ ಕೊಯೆಟ್ಜಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದೀಗ ಅವರ ಮರಳುವಿಕೆಯಿಂದ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.‌ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಮಾತನಾಡಿ, “ಜೆರಾಲ್ಡ್ ಮತ್ತೆ ತಂಡದ ಭಾಗವಾಗಿರುವುದು ಸಂತೋಷದ ವಿಚಾರ. ಲಭ್ಯವಿರುವ ಮಾಹಿತಿಯ ಪ್ರಕಾರ ಅವರು ಉತ್ತಮ ವೇಗದಲ್ಲಿ ಬೌಲ್ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

Women's Asia Cup: ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ದಂಡ ವಿಧಿಸಿದ ಐಸಿಸಿ!

ರಬಾಡಾ ಚೇತರಿಕೆ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ

ರಬಾಡ ಅವರ ಚೇತರಿಕೆಯ ಮೇಲೆ ದಕ್ಷಿಣ ಆಫ್ರಿಕಾ ತಂಡ ನಿರಂತರವಾಗಿ ನಿಗಾ ಇಡುತ್ತಿದೆ. ಇದೇ ವೇಳೆ ಎನ್ರಿಕ್‌ ನೊರ್ಕಿಯಾ ಅವರನ್ನು ಈ ಸರಣಿಗೆ ಪರಿಗಣಿಸಲಾಗಿಲ್ಲ ಎಂದು ಕಾನ್ರಾಡ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾನ್ರಾಡ್, “ಕೆಜಿ (ಕಗಿಸೊ ರಬಾಡಾ) ಏಕದಿನ ಪಂದ್ಯಗಳಿಂದ ಹೊರಗಿದ್ದಾರೆ. ಅವರ ಪುನಶ್ಚೇತನ ಪ್ರಕ್ರಿಯೆಯನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೇವೆ. ಟೆಸ್ಟ್ ತಂಡವನ್ನು ಆಯ್ಕೆ ಮಾಡುವಾಗ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಫಿಸಿಯೊಗಳ ವರದಿಗಳ ಪ್ರಕಾರ ಅವರ ಚೇತರಿಕೆ ಉತ್ತಮವಾಗಿ ಸಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಎನ್ರಿಕ್‌ ನೊರ್ಕಿಯಾ ಅವರನ್ನು ಏಕದಿನ ಪಂದ್ಯಗಳಿಗೆ ಪರಿಗಣಿಸಲಾಗಿಲ್ಲ. ಸದ್ಯಕ್ಕೆ ಅವರು ಸಾಕಷ್ಟು ಪ್ರದರ್ಶನ ನೀಡಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರು ಆಡಿದರೆ ಅಚ್ಚರಿಪಡಬೇಕಿಲ್ಲ” ಎಂದು ದಕ್ಷಿಣ ಆಫ್ರಿಕಾ ಕೋಚ್ ಹೇಳಿದ್ದಾರೆ.



ಡೆವಾಲ್ಡ್ ಬ್ರೆವಿಸ್‌ಗೆ ತಂಡದಲ್ಲಿ ಸ್ಥಾನವಿಲ್ಲ

ಇದರ ನಡುವೆ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ತಂಡದಲ್ಲಿ ಸೇರಿಸಲಾಗಿಲ್ಲ. ಅವರು ಟೆಸ್ಟ್ ಋತುವಿಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.

“ತಂಡದಲ್ಲಿ ಇಲ್ಲದ ಅಥವಾ ‘ಎ’ ತಂಡದಲ್ಲೂ ಇಲ್ಲದ ಪ್ರತಿಯೊಬ್ಬರೂ ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಸುತ್ತಿನಲ್ಲಿ ಆಡಲಿದ್ದಾರೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರು ಎರಡನೇ ಸುತ್ತಿನಲ್ಲಿ ಆಡಲಿದ್ದಾರೆ. ಇದರಲ್ಲಿ ಡೆವಾಲ್ಡ್ ಕೂಡ ಸೇರಿದ್ದಾರೆ. ಬಾಂಗ್ಲಾದೇಶ ಸರಣಿಯಲ್ಲಿ ಡೆವಾಲ್ಡ್‌ಗೆ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ಖಚಿತ,” ಎಂದು ಕಾನ್ರಾಡ್ ತಿಳಿಸಿದ್ದಾರೆ.



ಆಸ್ಟ್ರೇಲಿಯಾ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವೂಮಾ (ನಾಯಕ), ಒಟ್ಟಿನೀಲ್‌ ಬಾರ್ಟ್‌ಮನ್‌, ಕಾರ್ಬಿನ್‌ ಬಾಷ್‌, ಮ್ಯಾಥ್ಯೂ ಬ್ರೀಟ್ಜ್ಕೆ, ಗೆರಾಲ್ಡ್‌ ಕೋಯೆಡ್ಜೀ, ಕ್ವಿಂಟನ್‌ ಡಿ ಕಾಕ್‌, ಟೋನಿ ಡಿ ಝಾರ್ಝಿ,ಬಿಜೋರ್ನ್‌ ಫಾರ್ಚುನ್‌, ಮಾರ್ಕೊ ಯೆನ್ಸನ್‌, ಕೇಶವ್‌ ಮಹಾರಾಜ್‌, ಕ್ವೀನಾ ಎಂಫಾಕ, ಏಡೆನ್‌ ಮಾರ್ಕ್ರಮ್‌, ಡೇವಿಡ್‌ ಮಿಲ್ಲರ್‌, ಲುಂಗಿ ಎನ್ಗಿಡಿ, ರಯಾನ್‌ ರಿಕೆಲ್ಟನ್‌, ಟ್ರಿಸ್ಟನ್‌ ಸ್ಟಬ್ಸ್‌