CSK vs RR: 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕವನ್ನು ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ವೈಭವ್ ಸೂರ್ಯವಂಶಿ. -
ಗುವಾಹಟಿ: ರಾಜಸ್ಥಾನ್ ರಾಯಲ್ಸ್ (RR) ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2026ರ ಸಾಲಿನ ಆರಂಭಿಕ ಪಂದ್ಯದಲ್ಲಿ(RR vs CSK) ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿದ ಆರ್‌ಆರ್, ಎಂಟು ವಿಕೆಟ್‌ಗಳ ಅಂತರದಲ್ಲಿ ಹಾಗೂ ಇನ್ನೂ 47 ಬಾಲ್‌ಗಳು ಬಾಕಿ ಇರುವಾಗಲೇ ಪಂದ್ಯವನ್ನು ಮುಕ್ತಾಯಗೊಳಿಸಿತು. ಈ ಪಂದ್ಯದಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಎಲ್ಲರ ಗಮನ ಸೆಳೆದರು. ಎಡಗೈ ಓಪನರ್ ಆಗಿರುವ ಅವರು, ಕೇವಲ 17 ಬಾಲ್‌ಗಳಲ್ಲಿ 52 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.
ಸೂರ್ಯವಂಶಿ ಅವರು ಕೇವಲ 15 ಬಾಲ್‌ಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಆರ್‌ಆರ್ ಪರ ಎರಡನೇ ಅತಿ ವೇಗದ ಫಿಫ್ಟಿ ದಾಖಲೆಯಾಗಿದೆ. ಇದಕ್ಕೂ ಮೊದಲು ಅವರು ಐಪಿಎಲ್ 2025ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 17 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ಸಾಧನೆಯೊಂದಿಗೆ 18 ಬಾಲ್‌ಗಳೊಳಗೆ ಫ್ರಾಂಚೈಸಿಗಾಗಿ ಹಲವು ಅರ್ಧಶತಕಗಳನ್ನು ಬಾರಿಸಿದ ಮೊದಲ ಆಟಗಾರನಾಗಿಯೂ ಅವರು ಇತಿಹಾಸ ನಿರ್ಮಿಸಿದ್ದಾರೆ.
IPL 2026: ಎಎಸ್ ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆಗೆ ಆಘಾತ, ರಾಜಸ್ಥಾನ್ ರಾಯಲ್ಸ್ ಶುಭಾರಂಭ!
ಐಪಿಎಲ್ ಇತಿಹಾಸದಲ್ಲಿ ಆರ್‌ಆರ್ ಪರ ದಾಖಲಾದ ಅತಿ ವೇಗದ ಅರ್ಧಶತಕಗಳು
13 ಬಾಲ್‌ಗಳು – ಯಶಸ್ವಿ ಜೈಸ್ವಾಲ್ vs ಕೋಲ್ಕತಾ ನೈಟ್ ರೈಡರ್‌ಸ್, ಕೊಲ್ಕತ್ತಾ, 2023
15 ಬಾಲ್‌ಗಳು – ವೈಭವ್ ಸೂರ್ಯವಂಶಿ vs ಚೆನ್ನೈ ಸೂಪರ್ ಕಿಂಗ್ಸ್, ಗುವಾಹಟಿ, 2026*
17 ಬಾಲ್‌ಗಳು – ವೈಭವ್ ಸೂರ್ಯವಂಶಿ vs ಗುಜರಾತ್ ಜಯಂಟ್ಸ್, ಜೈಪುರ್, 2025
18 ಬಾಲ್‌ಗಳು – ಜೋಸ್ ಬಟ್ಲರ್ vs ಡೆಲ್ಲಿ ಡೇರ್‌ಡೆವಿಲ್ಸ್, ದೆಹಲಿ, 2018
1⃣5⃣-ball FIFTY🔥
— IndianPremierLeague (@IPL) March 30, 2026
That's the 3⃣rd joint-fastest half-century in #TATAIPL 👏👏
Vaibhav Sooryavanshi goes back for an entertaining 52(17) 👌
Updates ▶️ https://t.co/UzbuFk5G26#KhelBindaas | #RRvCSK pic.twitter.com/NOgpUvNiwL
ಮೂರನೇ ವೇಗದ ಅರ್ಧಶತಕ
ವೈಭವ್ ಸೂರ್ಯವಂಶಿ ಅವರು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ವೇಗದ ಅರ್ಧಶತಕವನ್ನು ಬಾರಿಸಿ ಹೊಸ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅವರು ಯೂಸಫ್ ಪಠಾಣ್ (ಕೋಲ್ಕತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ, 24 ಮೇ 2014), ಸುನೀಲ್ ನರೇನ್ (ಕೆಕೆಆರ್ vs ಆರ್‌ಸಿಬಿ, 07 ಮೇ 2017), ನಿಕೋಲಸ್ ಪೂರನ್ (ಲಖನೌ ಸೂಪರ್ ಜಯಂಟ್‌ಸ್ vs ಆರ್‌ಸಿಬಿ, ಬೆಂಗಳೂರು, 10 ಏಪ್ರಿಲ್ 2023) ಮತ್ತು ಜೇಕ್ ಮೆಗರ್ಕ್ (ಎರಡು ಬಾರಿ – ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್, ದೆಹಲಿ, 20 ಏಪ್ರಿಲ್ 2024 ಹಾಗೂ ಡಿಸಿ vs ಎಂಐ, ದೆಹಲಿ, 27 ಏಪ್ರಿಲ್ 2024) ಅವರೊಂದಿಗೆ ಸೇರಿದ್ದಾರೆ.
IPL 2026: ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!
ಇದೇ ವೇಳೆ, ಸೂರ್ಯವಂಶಿ ಅವರು ಯಶಸ್ವಿ ಜೈಸ್ವಾಲ್ ಅವರ ಜೊತೆ 75 ರನ್‌ಗಳ ಆರಂಭಿಕ ಜೊತೆಯಾಟ ಕಟ್ಟಿದರು. ಪವರ್‌ಪ್ಲೇ ಅವಧಿಯಲ್ಲೇ ರಾಜಸ್ಥಾನ್ ರಾಯಕ್ಸ್ ತಂಡ 74 ರನ್‌ಗಳನ್ನು ಕಲೆಹಾಕಿತು.ಇದಕ್ಕೂ ಮುನ್ನ 2025ರ ಐಪಿಎಲ್ ಟೂರ್ನಿಯಲ್ಲಿ ಅವರು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದರು. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಆಟಗಾರ ಎಂಬ ಗೌರವವನ್ನೂ ತಮ್ಮದಾಗಿಸಿಕೊಂಡಿದ್ದಾರೆ.