RCB vs PBKS: ಆರ್‌ಸಿಬಿಯನ್ನು ಗೆಲ್ಲಿಸಿ ಶ್ರೇಯಸ್ ಅಯ್ಯರ್‌ಗೆ ಕೌಂಟರ್ ಕೊಟ್ಟ ವಿರಾಟ್ ಕೊಹ್ಲಿ!
ಕೃಣಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ಅವರ ಅದ್ಭುತ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಸುಲಭವಾಗಿ ಗೆದ್ದಿತು. ಪಂದ್ಯದ ಗೆಲುವಿನ ಬಳಿಕ ಶ್ರೇಯಸ್ ಅಯ್ಯರ್‌ಗೆ ಕೊಹ್ಲಿ ತಿರುಗೇಟು ನೀಡಿದ್ದಾರೆ.

ಶ್ರೇಯಸ್ ಅಯ್ಯರ್‌ಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ.

ಚಂಡೀಗಢ: ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರ ಅದ್ಭುತ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2025) ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು. ಪಂಜಾಬ್ ನೀಡಿದ 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿ (73 ನಾಟೌಟ್, 54 ಎಸೆತ, ಏಳು ಬೌಂಡರಿ, ಒಂದು ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (61 ರನ್, 35 ಎಸೆತ, ನಾಲ್ಕು ಸಿಕ್ಸರ್, ಐದು ಬೌಂಡರಿ) ಅವರ ಎರಡನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟದ ನೆರವಿನಿಂದ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್‌ಗಳಿಗೆ 159 ರನ್ ಗಳಿಸುವ ಮೂಲಕ ಸುಲಭ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಗೆಲುವು ಪಡೆದ ಬಳಿಕ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತುಂಬಾ ಕೀಟಲೆ ಮಾಡಿದರು.
ಆರ್‌ಸಿಬಿ ತಂಡದ ಇನಿಂಗ್ಸ್‌ನ 19ನೇ ಓವರ್ ಅನ್ನು ಪಂಜಾಬ್ ಕಿಂಗ್ಸ್ ತಂಡದ ನೆಹಾಲ್ ವಧೇರಾ ಎಸೆದರು. ತಮ್ಮ ಓವರ್‌ನ ಐದನೇ ಎಸೆತದಲ್ಲಿ ಜಿತೇಶ್ ಶರ್ಮಾ ಅದ್ಭುತವಾದ ಸಿಕ್ಸ್ ಬಾರಿಸಿ ತಮ್ಮ ತಂಡವನ್ನು ಪಂದ್ಯ ಗೆಲ್ಲುವಂತೆ ಮಾಡಿದರು. ಜಿತೇಶ್ ಸಿಕ್ಸ್ ಹೊಡೆದ ತಕ್ಷಣ, ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅವರನ್ನು ನೋಡಿ ಸಂಭ್ರಮಿಸಿದರು ಮತ್ತು ಅವರನ್ನು ಕೀಟಲೆ ಮಾಡಿದರು. ಆ ಮೂಲಕ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ ಗೆದ್ದ ಬಳಿಕ ಫ್ಯಾನ್ಸ್ ಕಡೆ ನೋಡಿ ಕೈ ಸನ್ನೆ ಮಾಡಿದ್ದ ಶ್ರೇಯಸ್ ಅಯ್ಯರ್‌ಗೆ ಕೊಹ್ಲಿ ನಗು ಮುಖದಿಂದಲೇ ತಿರುಗೇಟು ನೀಡಿದರು.
RCB vs PBKS: ಕೊಹ್ಲಿ-ಪಡಿಕ್ಕಲ್ ಮಿಂಚು, ಪಂಜಾಬ್ ಕಿಂಗ್ಸ್ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!
ಆದರೆ, ಶ್ರೇಯಸ್ ಅಯ್ಯರ್ ಅವರಿಗೆ ಕೊಹ್ಲಿಯ ಈ ಶೈಲಿ ಇಷ್ಟವಾಗಲಿಲ್ಲ. ಅವರಿಗೆ ಸ್ವಲ್ಪ ನಿರಾಶೆಯಾಯಿತು. ಅಯ್ಯರ್, ಕೊಹ್ಲಿ ಜೊತೆ ಕೈಕುಲುಕಲು ಬಂದಾಗ ಸ್ವಲ್ಪ ನಿರಾಶೆಗೊಂಡಂತೆ ಕಾಣುತ್ತಿದ್ದರು. ಆದರೆ ಅದರ ನಂತರ ಅವನು ನಗಲು ಪ್ರಾರಂಭಿಸಿದರು. ಇದು ಈ ಋತುವಿನಲ್ಲಿ ಆರ್‌ಸಿಬಿಗೆ ಸಿಕ್ಕ ಐದನೇ ಗೆಲುವು. ಅವರು ಈಗ 10 ಅಂಕಗಳನ್ನು ಹೊಂದಿದ್ದಾರೆ. ಅವರು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಈ ಗೆಲುವಿನೊಂದಿಗೆ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಸೇರಿದಂತೆ ಐದು ತಂಡಗಳು ಒಟ್ಟು 10 ಅಂಕಗಳನ್ನು ಗಳಿಸಿರುವ ಸಾಲಿಗೆ ಸೇರ್ಪಡೆಯಾಯಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. ಎಡಗೈ ಸ್ಪಿನ್ನರ್ ಕೃಣಾಲ್ (2/25) ಮತ್ತು ಲೆಗ್ ಸ್ಪಿನ್ನರ್ ಸುಯಶ್ (2/26) ಅವರ ಸ್ಪಿನ್‌ಗೆ, ಪಂಜಾಬ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು ಅವರ ಯಾವುದೇ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಆರ್‌ಸಿಬಿ ಫ್ಯಾನ್ಸ್‌ಗೆ ಕೈ ಸನ್ನೆ ಮಾಡಿದ್ದ ಅಯ್ಯರ್
ಏಪ್ರಿಲ್ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಆರ್‌ಸಿಬಿ ಫ್ಯಾನ್ಸ್, ಆರ್‌ಸಿಬಿ.... ಆರ್‌ಸಿಬಿ ಎಂದು ಕೋಗುತ್ತಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ತಮ್ಮ ಕಿವಿಯನ್ನು ತೋರಿಸಿ, ನನಗೆ ಕೇಳಿಸುತ್ತಿಲ್ಲ ಎಂದು ಕೈ ಸನ್ನೆ ಮಾಡುವ ಮೂಲಕ ಬೆಂಗಳೂರು ಅಭಿಮಾನಿಗಳ ಕಾಲೆಳೆದಿದ್ದರು.