ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸತತ ಎರಡು ಐಪಿಎಲ್‌ ಗೆದ್ದರೂ ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

India's T20I Squad: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್‌ ಮಾಡಿದ ಹೊರತಾಗಿಯೂ ರಜತ್‌ ಪಾಟಿದಾರ್‌ ಅವರಿಗೆ ಭಾರತ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇದಕ್ಕೆ ಕಾರಣವೇನೆಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ವಿವರಿಸಿದ್ದಾರೆ.

ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

2026ರ ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದ್ದ ರಜತ್‌ ಪಾಟಿದಾರ್‌. -

Profile
Ramesh Kote Jun 6, 2026 7:34 PM

ನವದೆಹಲಿ: ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳಿಗೆ ಭಾರತ ತಂಡವನ್ನು(India's T20I Squad) ಬಿಸಿಸಿಐ ಜೂನ್‌ 6 ರಂದು ಪ್ರಕಟಿಸಿದೆ. ಆದರೆ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್‌ಷಿಪ್‌ಗೇರಿಸಿದ್ದ ರಜತ್‌ ಪಾಟಿದಾರ್‌ (Rajat Patidar) ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇವರ ಜತೆಗೆ ಕಳೆದ ಮೂರು ತಿಂಗಳ ಹಿಂದೆ ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ 2026ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದುಕೊಟ್ಟಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೂಡ ಕೈಬಿಡಲಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಉತ್ತರ ನೀಡಿದ್ದಾರೆ.

ರಜತ್‌ ಪಾಟಿದಾರ್‌ ನಾಯಕತ್ವದ ಜತೆಗೆ 2026ರ ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು 500ಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದರು. ಆದರೂ ಬಿಸಿಸಿಐ ಆಯ್ಕೆ ಸಮಿತಿಯು ಆರ್‌ಸಿಬಿ ನಾಯಕನನ್ನು ಆಯ್ಕೆ ಮಾಡಲು ಆಸಕ್ತಿ ತೋರಲಿಲ್ಲ. ಆದರೆ, 15ನೇ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರನ್ನು ಇದೇ ಮೊದಲ ಬಾರಿ ಭಾರತ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

ಭಾರತ ತಂಡ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಹಾಗೂ 2028ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಯೋಜನೆಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಂಡದ ಉಪನಾಯಕ ಸ್ಥಾನಕ್ಕೆ ತಿಲಕ್‌ ವರ್ಮಾ ಅವರನ್ನು ನೇಮಕ ಮಾಡಲಾಗಿದ್ದು, ಅವರು ಅಕ್ಷರ್‌ ಪಟೇಲ್‌ ಅವರ ಸ್ಥಾನವನ್ನು ಭರಿಸಲಿದ್ದಾರೆ. ಇದೇ ವೇಳೆ ನಿತೀಶ್‌ಕುಮಾರ್‌ ರೆಡ್ಡಿ, ರವಿ ಬಿಷ್ಣೋಯ್‌ ಹಾಗೂ ಪ್ರಿನ್ಸ್‌ ಯಾದವ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

IND vs AFG: ತಮ್ಮ 12ನೇ ಟೆಸ್ಟ್‌ ಶತಕ ಸಿಡಿಸಿ ಸಂಭ್ರಮಿಸಿದ ಕನ್ನಡಿಗ ಕೆಎಲ್‌ ರಾಹುಲ್‌!

ಇನ್ನೊಂದೆಡೆ, ರಿಂಕು ಸಿಂಗ್‌ ಮತ್ತು ಕುಲ್ದೀಪ್‌ ಯಾದವ್‌ ಅವರಿಗೆ ಈ ಬಾರಿ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಹಿರಿಯ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಮುಂದಿನ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರೂಪಿಸುವ ದಿಸೆಯಲ್ಲಿ ಭಾರತೀಯ ಆಯ್ಕೆ ಸಮಿತಿ ಈ ಮಹತ್ವದ ಹೆಜ್ಜೆ ಇಟ್ಟಿದೆ.

ರಜತ್‌ ಪಾಟಿದಾರ್‌ ಸೇರಿದಂತೆ ಹಲವು ಆಟಗಾರರಿಗೆ ಸ್ಥಾನ ನೀಡದ ಬಗ್ಗೆ ಅಜಿತ್‌ ಅಗರ್ಕರ್‌ ಪ್ರತಿಕ್ರಿಯೆ ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಲಭ್ಯರಿರುವ ಹಲವು ಪ್ರತಿಭಾವಂತ ಆಟಗಾರರಿಗೆ ಟಿ20ಐ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಟಿ20 ತಂಡದಿಂದ ಸೂರ್ಯಕುಮಾರ್‌ ಯಾದವ್‌ಗೆ ಕೊಕ್‌ ನೀಡಲು ಕಾರಣವೇನು?

"ನಾವು ತಂಡದ ಆಯ್ಕೆ ವೇಳೆ ಅನೇಕ ಆಟಗಾರರ ಬಗ್ಗೆ ಚರ್ಚೆ ನಡೆಸುತ್ತೇವೆ. ಸುಮ್ಮನೆ ಕುಳಿತು 15 ಹೆಸರುಗಳನ್ನು ಬರೆಯುವುದಿಲ್ಲ. ಭಾರತದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ನೀವು ಐಪಿಎಲ್ ಅಥವಾ ದೇಶಿ ಕ್ರಿಕೆಟ್‌ ಅನ್ನು ಗಮನಿಸಿದ್ದರೆ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಾಗಿರುವ ಅನೇಕ ಆಟಗಾರರನ್ನು ಕಾಣಬಹುದು. ಆದರೆ ಈಗಾಗಲೇ ತಂಡದಲ್ಲಿರುವ ಆಟಗಾರರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾವು ಬಹಳ ಹಿಂದೆಯೇ ಅಲ್ಲ, ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದಿದ್ದೇವೆ. ನಾವು ಅತ್ಯಂತ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಕೆಲ ಆಟಗಾರರು ಅವಕಾಶದಿಂದ ವಂಚಿತರಾಗುವುದು ಸಹಜ. ಆದರೆ ನಿಯಮದ ಪ್ರಕಾರ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಈ ತಂಡದ ಬಗ್ಗೆ ನಾವು ತುಂಬಾ ಸಂತೋಷವಾಗಿದ್ದೇವೆ," ಎಂದು ಭಾರತದ ಮುಖ್ಯ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹೇಳಿದ್ದಾರೆ.

ಐರ್ಲೆಂಡ್ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್

ಇಂಗ್ಲೆಂಡ್ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ವೈಭವ್ ಸೂರ್ಯವಂಶಿ.