ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs MI: ಡಬಲ್‌ ಹೆಡರ್‌ ಪಂದ್ಯದಲ್ಲಿ ಮುಂಬೈ ಸವಾಲಿಗೆ ಡೆಲ್ಲಿ ಸಜ್ಜು

Delhi Capitals vs Mumbai Indians: ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರಿನಲ್ಲಿ ತಮ್ಮ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಜೋಶ್‌ನಲ್ಲಿದೆ. ಐದು ಬಾರಿಯ ಚಾಂಪಿಯನ್ ತಂಡವು 2012 ರ ನಂತರ ಐಪಿಎಲ್ ಋತುವಿನ ಆರಂಭಿಕ ಪಂದ್ಯವನ್ನು ಗೆದ್ದಿತ್ತು. ಇದೇ ಲಯವನ್ನು ಡೆಲ್ಲಿ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದೆ.

ಡೆಲ್ಲಿ-ಮುಂಬೈ ಪಂದ್ಯದ ಪಿಚ್‌ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ

axar patel and hardik pandya -

Abhilash BC
Abhilash BC Apr 3, 2026 12:50 PM

ನವದೆಹಲಿ, ಎ.3: ಹಾಲಿ ಆವೃತ್ತಿಯ ಐಪಿಎಲ್‌(IPL 2026)ನ ಮೊದಲ ಡಬಲ್‌ ಹೆಡರ್‌ ಪಂದ್ಯ ಶನಿವಾರ ನಡೆಯಲಿದೆ. ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂ(Arun Jaitley Stadium)ನಲ್ಲಿ ಹಗಲು ನಡೆಯುವ ಈ ಪಂದ್ಯದಲ್ಲಿ ಅಜೇಯ ತಂಡಗಳಾದ ಮುಂಬೈ ಇಂಡಿಯನ್ಸ್‌(DC vs MI) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖೀಯಾಗಲಿವೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ತಮ್ಮ ಅಭಿಯಾನದ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡವು ಈ ಋತುವಿನ ತಮ್ಮ ಮೊದಲ ತವರು ಪಂದ್ಯವನ್ನು ಆಡಲಿದೆ. ಕಳೆದ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿ ನಿರಾಸೆ ಮೂಡಿಸಿದ್ದ ಕೆ.ಎಲ್‌ ರಾಹುಲ್‌ ಈ ಪಂದ್ಯದಲ್ಲಿ ಅವರ ಅಭಿಮಾನಿಗಳನ್ನು ಖುಷಿ ಪಡಿಸಲಿದ್ದಾರಾ ಎಂದು ಕಾದು ನೋಡಬೇಕಿದೆ. ಯುವ ಆಟಗಾರರಾದ ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚಿನ ನಂಬಿಕೆ ಇಟ್ಟಿದೆ.

ಏತನ್ಮಧ್ಯೆ, ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರಿನಲ್ಲಿ ತಮ್ಮ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಜೋಶ್‌ನಲ್ಲಿದೆ. ಐದು ಬಾರಿಯ ಚಾಂಪಿಯನ್ ತಂಡವು 2012 ರ ನಂತರ ಐಪಿಎಲ್ ಋತುವಿನ ಆರಂಭಿಕ ಪಂದ್ಯವನ್ನು ಗೆದ್ದಿತ್ತು. ಇದೇ ಲಯವನ್ನು ಡೆಲ್ಲಿ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದೆ.

ಮುಖಾಮುಖಿ

ಡೆಲ್ಲಿ ಮತ್ತು ಮುಂಬೈ ತಂಡದ ಮುಖಾಮುಖಿ ದಾಖಲೆ ನೋಡುವಾಗ ಮುಂಬೈ ತಂಡ ಮುಂದಿದೆ. ಇತ್ತಂಡಗಳು ಈವರೆಗೆ 37 ಬಾರಿ ಪರಸ್ಪರ ಸೆಣಸಾಟ ನಡೆಸಿದ್ದು ಮುಂಬೈ 21 ಪಂದ್ಯ ಗೆದ್ದಿದ್ದರೆ, ಡೆಲ್ಲಿ 16 ಪಂದ್ಯ ಜಯಿಸಿದೆ.

ಪಿಚ್‌ ರಿಪೋರ್ಟ್‌

ಅರುಣ್ ಜೇಟ್ಲಿ ಕ್ರೀಡಾಂಗಣವು ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಅಲ್ಲದೆ, ಇಲ್ಲಿನ ಬೌಂಡರಿಗಳು ಚಿಕ್ಕದಾಗಿರುವುದರಿಂದ, ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು. ಬೌಲರ್‌ಗಳು ಶಕ್ತಿಗಿಂತ ಯುಕ್ತಿಯನ್ನು ಬಳಸಿದರಷ್ಟೇ ರನ್‌ಗೆ ಕಡಿವಾಣ ಹಾಕಬಹುದು. ಮೊದಲು ಬ್ಯಾಟ್ ಮಾಡುವ ತಂಡವು ಕನಿಷ್ಠ 250 ಕ್ಕೂ ಬಾರಿಸಿದರಷ್ಟೇ ಪಂದ್ಯವನ್ನು ಗೆಲ್ಲುವ ಸಾಧ್ಯತೆಯಿದೆ. ಐಪಿಎಲ್‌ ಇತಿಹಾಸದಲ್ಲಿ ಈ ಸ್ಥಳದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 278/3 ಗಳಿಸಿದ್ದು ಅತ್ಯಧಿಕ ಮೊದಲ ಇನ್ನಿಂಗ್ಸ್ ಸ್ಕೋರ್ ಆಗಿದೆ.

KKR vs SRH: ಸೋತರೂ ನಾಯಕತ್ವ ಸಮರ್ಥಿಸಿಕೊಂಡ ಅಜಿಂಕ್ಯ ರಹಾನೆ

ಸಂಭಾವ್ಯ ಆಡುವ ಬಳಗ

ದೆಹಲಿ ಕ್ಯಾಪಿಟಲ್ಸ್: ಕೆ.ಎಲ್ ರಾಹುಲ್ (ವಿ.ಕೀ.), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ವಿಪ್ರಜ್ ನಿಗಮ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್‌ ಆಟಗಾರ: ಸಮೀರ್ ರಿಜ್ವಿ

ಮುಂಬೈ ಇಂಡಿಯನ್ಸ್: ರಿಯಾನ್ ರಿಕಲ್ಟನ್ (ವಿ.ಕೀ.), ರೋಹಿತ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶೆರ್ಫಾನೆ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಾಂಡೆ, ಎಎಮ್ ಗಜನ್‌ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಇಂಪ್ಯಾಕ್ಟ್‌ ಆಟಗಾರ: ಸೂರ್ಯಕುಮಾರ್ ಯಾದವ್

ಪಂದ್ಯ ಆರಂಭ; ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.