ಭಾವುಕರಾದ ಇಶಾನ್ ಕಿಶನ್; ಟಿ20 ವಿಶ್ವಕಪ್ ಗೆಲುವನ್ನು ದಿವಂಗತ ಸಹೋದರಿಗೆ ಅರ್ಪಣೆ
T20 World Cup final: ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು. ದಂಪತಿಯ ಆರು ತಿಂಗಳ ಮತ್ತು ಮೂರು ವರ್ಷದ ಇಬ್ಬರು ಮಕ್ಕಳು ಬದುಕುಳಿದಿದ್ದರು.
Ishan Kishan -
ಅಹಮದಾಬಾದ್, ಮಾ.9: ಭಾನುವಾರ ನೆದಿದ್ದ ನ್ಯೂಜಿಲೆಂಡ್(T20 World Cup final IND v NZ) ವಿರುದ್ಧದ ಟಿ20 ವಿಶ್ವಕಪ್ ಫೈನಲ್(T20 World Cup final) ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ತೋರಿದ್ದ ಇಶಾನ್ ಇಶನ್(Ishan Kishan) ತಮ್ಮ ಈ ಗೆಲುವಿನ ಪ್ರದರ್ಶನವನ್ನು ಕಾರು ಅಪಘಾತದಲ್ಲಿ ಅಗಲಿದ ಸಹೋದರಿಗೆ ಅರ್ಪಿಸಿದರು.
ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು. ದಂಪತಿಯ ಆರು ತಿಂಗಳ ಮತ್ತು ಮೂರು ವರ್ಷದ ಇಬ್ಬರು ಮಕ್ಕಳು ಬದುಕುಳಿದಿದ್ದರು.
ಪಂದ್ಯದ ಬಳಿಕ ಮಾತನಾಡಿದ ಇಶಾನ್ ಕಿಶನ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಂದ್ಯಕ್ಕೂ ಮುನ್ನ, ನನ್ನ ಸೋದರಸಂಬಂಧಿ ಸಹೋದರಿಯನ್ನು ಕಾರು ಅಪಘಾತದಲ್ಲಿ ಕಳೆದುಕೊಂಡೆ. ನಾನು ಅವಳಿಗಾಗಿ ಚೆನ್ನಾಗಿ ಆಡಿದೆ. ನಾನು ಹಾರ್ದಿಕ್ ಭಾಯ್ ಜೊತೆ ಮಾತನಾಡಿದೆ, ಅವರು ತಂಡವನ್ನು ಮುನ್ನಡೆಸಲು ಹೇಳಿದರು. ನಾನು ಈ ಗೆಲುವನ್ನು ಅವಳಿಗೆ ಅರ್ಪಿಸುತ್ತೇನೆ, ಮತ್ತು ಮಹಿಳಾ ದಿನದಂದೇ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ" ಎಂದು ಕಿಶನ್ ಹೇಳಿದರು.
ಈ ಘಟನೆಯಿಂದಾಗಿ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಫೈನಲ್ ಪಂದ್ಯದ ವೇಳೆ ಅಹಮದಾಬಾದ್‌ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಕಿಶನ್ ಕೂಡ ತಮ್ಮ ಕುಟುಂಬವನ್ನು ಸೇರಲು ಬಯಸಿದ್ದರು, ಆದರೆ ವಿಶ್ವಕಪ್ ಫೈನಲ್‌ನಿಂದಾಗಿ ಅವರು ಅಹಮದಾಬಾದ್‌ನಲ್ಲಿಯೇ ಇರಬೇಕಾಯಿತು.
ಟಿ20 ವಿಶ್ವಕಪ್ ಗೆಲುವನ್ನು ಆ ಮೂವರು ದಿಗ್ಗಜರಿಗೆ ಅರ್ಪಿಸಿದ ಗೌತಮ್ ಗಂಭೀರ್
ಅಪಘಾತದ ಕುರಿತು ಮಾತನಾಡಿದ ಇಶಾನ್ ತಂದೆ ಪ್ರಣವ್ ಪಾಂಡೆ 'ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಇಶಾನ್ ನಮ್ಮನ್ನು ಭೇಟಿ ಮಾಡಲು ಬಯಸಿದ್ದರು. ಆದರೆ, ಫೈನಲ್ ಪಂದ್ಯದ ಕಾರಣ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಅವರು ಸಂಪೂರ್ಣವಾಗಿ ಬೇಸರಗೊಂಡಿದ್ದಾರೆ ಎಂದು ಹೇಳಿದರು.
ಫೈನಲ್‌ನಲ್ಲಿ ಕಿಶನ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಅಭಿಷೇಕ್ ಶರ್ಮಾ ಔಟ್ ಆದ ಬಳಿಕ 3ನೇ ಕ್ರಮಾಂಕದಲ್ಲಿ ಬಂದ ಎಡಗೈ ಬ್ಯಾಟರ್, ಕೇವಲ 25 ಎಸೆತಗಳಲ್ಲಿ 54 ರನ್ ಗಳಿಸಿದರು. ಇದು ಟೂರ್ನಮೆಂಟ್‌ನಲ್ಲಿ ಕಿಶನ್ ಅವರ ಮೂರನೇ ಅರ್ಧಶತಕವಾಗಿದೆ. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡರು. ನಮೀಬಿಯಾ ವಿರುದ್ಧ 61, ಪಾಕ್ ವಿರುದ್ಧ 77 ರನ್ ಗಳಿಸಿದ್ದ ಅವರು, ಜಿಂಬಾಬ್ವೆ ವಿರುದ್ಧ ಬಾರಿಸಿದ 24 ಎಸೆತಕ್ಕೆ 38, ಇಂಗ್ಲೆಂಡ್ ವಿರುದ್ಧ 18 ಎಸೆತಕ್ಕೆ 39 ರನ್ ಕೂಡಾ ತಂಡಕ್ಕೆ ವರದಾನವಾಯಿತು.