ಬಲಿಷ್ಠ ಸ್ಪೇನ್‌ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!
FIFA World Cup 2026: ಬಲಿಷ್ಠ ತಂಡವಾದ ಸ್ಪೇನ್ ಎದುರು ಗೋಲು ಪೆಟ್ಟಿಗೆಯ ಮುಂದೆ ಬಂಡೆಯಂತೆ ನಿಂತು ಅವರು ತೋರಿದ ಅಸಾಧಾರಣ ಪ್ರದರ್ಶನ್ ಕಂಡು ಫುಟ್ಭಾಲ್ ಅಭಿಮಾನಿಗಳು ಅಚ್ಚರಿಗೊಳಗಾದರು. ತಂಡದ ಡಿಫೆಂಡಿಂಗ್ ಕೂಡ ಅತ್ಯಂತ ಗುಣಮಟ್ಟದಿಂದ ಕೂಡಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್ ವರ್ಡೆ ತಂಡದಿಂದ ಈ ರೀತಿ ಪ್ರದರ್ಶನ ಬಹುತೇಕರು ಊಹಿಸಿರಲಿಲ್ಲ.
Cape Verde's goalkeeper -
ಅಟ್ಲಾಂಟ(ಅಮೆರಿಕ), ಜೂ.16: ಅಟ್ಲಾಂಟಾದಲ್ಲಿ ನಡೆದ ಗ್ರೂಪ್ Hನ ಆರಂಭಿಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ವಿರುದ್ಧ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್(FIFA World Cup 2026)ನಲ್ಲಿ ಆಡಲಿಳಿದ ಕೇಪ್ ವರ್ಡೆ ತಂಡ ಅಸಾಧಾರಣ ಪ್ರದರ್ಶನ ನೀಡುವ ಮೂಲಕ 0-0 ಅಂತರದಿಂದ ಡ್ರಾ ಸಾಧಿಸಿತು. ವಿಶ್ವ ನಂ.3 ಸ್ಪೇನ್ ತಂಡಕ್ಕೆ ಭಾರೀ ನಿರಾಸೆಯಾಯಿತು. ತಂಡದ ಗೋಲ್‌ಕೀಪರ್, 40 ವರ್ಷದ ವೊಜಿನ್ಹಾ ಅವರು 7 ಗೋಲು ಅವಕಾಶ ಸೇರಿದಂತೆ ಒಟ್ಟು 23 ಶಾಟ್‌ಗಳನ್ನು ರಕ್ಷಿಸಿ, ಕೇಪ್ ವರ್ಡೆಯನ್ನು ಸೋಲಿನಿಂದ ಕಾಪಾಡಿದರು.
ಈ ಬಾರಿಯ ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಪೋರ್ಚುಗೀಸ್ ತಂಡದ ಗೋಲ್ ಕೀಪರ್ ಡಿಯೋಗೋ ಕೋಸ್ಟಾ ಅವರನ್ನು ಕೂಟದ ಬಲಿಷ್ಠ ಗೋಲ್‌ಕೀಪರ್ ಎಂದು ಬಿಂಬಿಸಲಾಗಿತ್ತು. ಸೋಮವಾರದವರೆಗೂ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಇದೀಗ 40 ವರ್ಷದ ವೊಜಿನ್ಹಾ ಹೆಸರು ಎಲ್ಲಡೆ ಗಮನಸೆಳೆದಿದ್ದಾರೆ.
Unbelievable save from Vozinha 🇨🇻 pic.twitter.com/A0yAMlIcjg
— Gooner Chris (@ArsenalN7) June 15, 2026
ಬಲಿಷ್ಠ ತಂಡವಾದ ಸ್ಪೇನ್ ಎದುರು ಗೋಲು ಪೆಟ್ಟಿಗೆಯ ಮುಂದೆ ಬಂಡೆಯಂತೆ ನಿಂತು ಅವರು ತೋರಿದ ಅಸಾಧಾರಣ ಪ್ರದರ್ಶನ್ ಕಂಡು ಫುಟ್ಭಾಲ್ ಅಭಿಮಾನಿಗಳು ಅಚ್ಚರಿಗೊಳಗಾದರು. ತಂಡದ ಡಿಫೆಂಡಿಂಗ್ ಕೂಡ ಅತ್ಯಂತ ಗುಣಮಟ್ಟದಿಂದ ಕೂಡಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್ ವರ್ಡೆ ತಂಡದಿಂದ ಈ ರೀತಿ ಪ್ರದರ್ಶನ ಬಹುತೇಕರು ಊಹಿಸಿರಲಿಲ್ಲ.
ಅಧಿಕೃತ ಸ್ಪರ್ಧೆಯಲ್ಲಿ 31 ಪಂದ್ಯಗಳ ಅಜೇಯ ಸರಣಿಯನ್ನು (ಪೆನಾಲ್ಟಿ ಕಿಕ್‌ಗಳನ್ನು ಹೊರತುಪಡಿಸಿ) ತಂದ ಸ್ಪೇನ್ ತಂಡದ ವಿರುದ್ಧ ಕೇಪ್ ವರ್ಡೆ ಈ ವರ್ಷದ ಈವೆಂಟ್‌ನ ಮೊದಲ ಗೋಲುರಹಿತ ಡ್ರಾ ಸಾಧಿಸಿತು.
ಫಿಫಾ ವಿಶ್ವಕಪ್‌ನಲ್ಲಿ ಕ್ರಿಕೆಟ್ ತಂತ್ರಜ್ಞಾನ; ಸ್ನೀಕೊ ಮೀಟರ್ ಬಳಸಿ ಗೋಲು ನಿರ್ಣಯ
ಸ್ಪೇನ್‌ಗೆ ಮೊದಲ ಗೋಲು ಬಾರಿಸುವ ಪ್ರೀಮಿಯರ್ ಅವಕಾಶ 39ನೇ ನಿಮಿಷದಲ್ಲಿ ಬಂದಿತು. ಮಾರ್ಕ್ ಕುಕುರೆಲ್ಲಾ ಚೆಂಡನ್ನು ಹೆಡ್ ಮಾಡಿದ ಫೆರಾನ್ ಟೊರೆಸ್‌ಗೆ ಪಾಸ್ ನೀಡಿದರು. ಆದರೆ ಅವರ ಹೆಡರ್ ಅನ್ನು ವೊಜಿನ್ಹಾ ಉಳಿಸಿಕೊಂಡರು. 90 ನೇ ನಿಮಿಷದಲ್ಲಿ ಕೇಪ್ ವರ್ಡೆ ತಂಡವು ತನ್ನ ಮೊದಲ ಕಾರ್ನರ್ ಕಿಕ್ ಅನ್ನು ಗಳಿಸಿತು. ಕೆವಿನ್ ಪಿನಾ ದೂರದಿಂದ ಹೊಡೆದ ಹೊಡೆತವನ್ನು ಸ್ಪೇನ್ ಡಿಫೆಂಡರ್ ತಡೆಯುವಲ್ಲಿ ಯಶಸ್ವಿಯಾದರು.