ಭಾರತ ವಿರುದ್ಧ ಹೀನಾಯ ಸೋಲು; ಬ್ಯಾಟ್‌ನಿಂದ ಟಿ.ವಿ ಒಡೆದು ಹಾಕಿದ ಪಾಕ್ ಅಭಿಮಾನಿ
Pakistan fan smashes TV:ಕೇವಲ 27 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಇಶಾನ್ 40 ಎಸೆತಕ್ಕೆ 77 ರನ್ ಗಳಿಸಿದರು. ಆ ಬಳಿಕ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಜವಾಬ್ದಾರಿಯುವ ಆಟದ ಮೂಲಕ ತಂಡವನ್ನು ಕಾಪಾಡಿದರು. ತಿಲಕ್ 24 ಎಸೆತಕ್ಕೆ 25, ಸೂರ್ಯಕುಮಾರ್ 29 ಎಸೆತಕ್ಕೆ 32 ರನ್ ಗಳಿಸಿದರು. ಶಿವಂ ದುಬೆ 17 ಎಸೆತಕ್ಕೆ 27 ರನ್ ಕೊಡುಗೆ ನೀಡಿದರು.
Pakistan fan smashes TV -
ಕರಾಚಿ, ಫೆ.16: ಭಾನುವಾರ ನೆಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ತಂಡ ಸೋತಿದ್ದನ್ನು ಸಹಿಸಲಾಗದೆ, ಪಾಕಿಸ್ತಾನದ ಅಭಿಮಾನಿಯೊಬ್ಬರು ಟಿ.ವಿ.ಯನ್ನು ಒಡೆದು ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಾಕಿಸ್ತಾನ ತಂಡದ ಜೆರ್ಸಿ ತೊಟ್ಟ ಅಭಿಮಾನಿ ತಂಡ ಸೋಲುತ್ತಿದ್ದಂತೆ ಆಕ್ರೋಶಗೊಂಡು ಟಿವಿಯನ್ನು ಎಸೆದು ಆ ನಂತರ ಬ್ಯಾಟ್‌ನಿಂದ ಟಿವಿಯನ್ನು ಪುಡಿ-ಪುಡಿ ಮಾಡಿದ್ದಾನೆ. ಇದೊಂದು ಪಂದ್ಯ, ಸೋಲು–ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆಯೂ ಭಾರತ ವಿರುದ್ಧ ಪಾಕ್ ಸೋತಾಗ ಅಲ್ಲಿನ ಹಲವಾರು ಅಭಿಮಾನಿಗಳು ಟಿವಿ ಒಡೆದು ಹಾಕಿದ ಹಲವಾರು ಘಟನೆಗಳು ನಡೆದಿವೆ.
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತ. ಈ ವೇಳೆ ಭಾರತದ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಆದರೆ ಇಶಾನ್ ಕಿಶನ್ ಅಬ್ಬರ, ಇತರ ಬ್ಯಾಟರ್‌ಗಳ ಸಮಯೋಚಿತ ಆಟದ ನೆರವಿನಿಂದ ಭಾರತ 7 ವಿಕೆಟ್‌ಗೆ 175 ರನ್ ಕಲೆಹಾಕಿತು.
Pakistan fans losing i, breaking TVs after India’s win. pic.twitter.com/8yylYOzZa6
— CRIC WEEK (@cricweek) February 16, 2026
ಜವಾಬಿತ್ತ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗೆ ಆಲೌಟ್ ಆಯಿತು. ಭಾರತ 61 ರನ್‌ಗಳ ಗೆಲುವು ಸಾಧಿಸಿತು. ಪಾಕ್ ಸೋಲಿನೊಂದಿಗೆ ಈ ಬಾರಿ ಕೊಲಂಬೊದಲ್ಲಿ ಆಡಿದ ಎಲ್ಲ ಪಂದ್ಯಗಳು ಚೇಸಿಂಗ್ ನಡೆಸಿದ ತಂಡ ಸೋತಂತಾಯಿತು.
ಕೇವಲ 27 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಇಶಾನ್ 40 ಎಸೆತಕ್ಕೆ 77 ರನ್ ಗಳಿಸಿದರು. ಆ ಬಳಿಕ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಜವಾಬ್ದಾರಿಯುವ ಆಟದ ಮೂಲಕ ತಂಡವನ್ನು ಕಾಪಾಡಿದರು. ತಿಲಕ್ 24 ಎಸೆತಕ್ಕೆ 25, ಸೂರ್ಯಕುಮಾರ್ 29 ಎಸೆತಕ್ಕೆ 32 ರನ್ ಗಳಿಸಿದರು. ಶಿವಂ ದುಬೆ 17 ಎಸೆತಕ್ಕೆ 27 ರನ್ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್‌ಗಳಲ್ಲಿ 175/7 (ಇಶಾನ್ 77, ಸೂರ್ಯ 32, ಶಿವಂ ದುಬೆ 27, ತಿಲಕ್ 25, ಸೈಮ್ ಅಯೂಬ್ -25), ಪಾಕಿಸ್ತಾನ: 18 ಓವರ್‌ಗಳಲ್ಲಿ 114/10 (ಉಸ್ಮಾನ್ 44, ಶಾಹೀನ್ 23, ಹಾರ್ದಿಕ್ 2-16, ಬೂಮ್ರಾ 2-17, ವರುಣ್ 2-17, ಅಕ್ಷರ್ 2-29)
ಪಂದ್ಯಶ್ರೇಷ್ಠ: ಇಶಾನ್ ಕಿಶನ್