ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವಕ್ಕೆ ಚಾಲನೆ: ಉತ್ಸವವನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು
Nanjangud Srikanteshwara Temple: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು.
Priyanka P
Mar 30, 2026 12:33 PM
ಮೈಸೂರು, ಮಾ.30: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ (Nanjangud Srikanteshwara Temple) ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ವರ್ಷದ ಮುಖ್ಯ ಆಕರ್ಷಣೆ ಎಂದರೆ ಸುಮಾರು 95 ಅಡಿ ಎತ್ತರದ ಭವ್ಯ ತೇರು. ಸಾವಿರಾರು ಭಕ್ತರು ಒಂದೇ ಸಮಯದಲ್ಲಿ ಎಳೆಯುವಂತೆ 360 ಅಡಿ ಉದ್ದದ ಬಲಿಷ್ಠ ತೆಂಗಿನ ನಾರಿನ ಹಗ್ಗವನ್ನು ಸಿದ್ಧಪಡಿಸಲಾಗಿದೆ. ದೇವಾಲಯದ (temple) ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು.