"ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ"; ಟಿ20 ವಿಶ್ವಕಪ್ ವೈಫಲ್ಯದ ಬಳಿಕ ಪಾಕ್ ನಾಯಕನ ಹೇಳಿಕೆ
Salman Ali Agha: ಟಿ20 ವಿಶ್ವಕಪ್ ಉದ್ದಕ್ಕೂ ಬಾಬರ್ ಅಜಮ್ ಅವರ ಆಯ್ಕೆ ಮತ್ತು ಅವರ 4ನೇ ಕ್ರಮಾಂಕದ ನಿಯೋಜನೆಯು ನಿರಂತರವಾಗಿ ಚರ್ಚೆಗೆ ಗ್ರಾಸವಾಗಿತ್ತು. ನಮೀಬಿಯಾ ವಿರುದ್ಧದ ಪಂದ್ಯದ ಸಮಯದಲ್ಲಿ ಅಜಮ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸದ ನಂತರ ಕೋಚ್ ಮೈಕ್ ಹೆಸ್ಸನ್ ಚರ್ಚೆಯನ್ನು ಮತ್ತಷ್ಟು ಕೆರಳಿಸಿದರು.
Pakistan skipper Agha -
ಕೊಲಂಬೊ, ಮಾ.1: 2026ರ ಟಿ20 ವಿಶ್ವಕಪ್(T20 World Cup 2026)ನಲ್ಲಿ ತಮ್ಮ ತಂಡ ಸೆಮಿಫೈನಲ್‌ಗೆ ತಲುಪಲು ವಿಫಲವಾದ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ(Salman Ali Agha) ಹೇಳಿದರು. ಕ್ಯಾಂಡಿಯಲ್ಲಿ ನಡೆದ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಪಾಕ್(Pakistan vs Sri Lanka)ಗೆ ಶ್ರೀಲಂಕಾವನ್ನು 147 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ತಲುಪುವ ಅಗತ್ಯವಿತ್ತು. ಆದರೆ ದಾಸುನ್ ಶನಕ ಮತ್ತು ಪವನ್ ರತ್ನಾಯಕೆ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದ ಅವಕಾಶ ಕೈತಪ್ಪಿತ್ತು.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಘಾ, "ನಾನು ತಂಡದ ಆಯ್ಕೆಯಲ್ಲಿ ಭಾಗಿಯಾಗಿದ್ದರಿಂದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಮತ್ತು ಕೋಚ್ ಕೂಡ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಖಚಿತವಾಗಿದೆ. ನಾವು ಒತ್ತಡದಲ್ಲಿದ್ದಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ನಾವು ಒತ್ತಡದಲ್ಲಿ ತಪ್ಪುಗಳನ್ನು ಮಾಡಿದ್ದೇವೆ. ಮತ್ತು ಐಸಿಸಿ ಈವೆಂಟ್‌ಗಳಲ್ಲಿ, ನೀವು ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಆಡುತ್ತಿರುವುದರಿಂದ ಒತ್ತಡ ಹೆಚ್ಚಾಗಿರುತ್ತದೆ" ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನದ ಟಿ20ಐ ನಾಯಕನಾಗಿ ಉಳಿಯಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ಮುಂಬರುವ ದಿನಗಳಲ್ಲಿ ಪರಿಶೀಲಿಸುವುದಾಗಿ ಆಘಾ ಹೇಳಿದರು. ವಿಶೇಷವಾಗಿ ಅವರ ಬ್ಯಾಟಿಂಗ್ ಫಾರ್ಮ್ ಪರಿಶೀಲನೆಗೆ ಒಳಪಟ್ಟ ನಂತರ. ವಿಶ್ವಕಪ್‌ನಲ್ಲಿ ಅವರು ಏಳು ಪಂದ್ಯಗಳಲ್ಲಿ ಕೇವಲ 60 ರನ್‌ಗಳನ್ನು ಮಾತ್ರ ಗಳಿಸಿದರು.
ಐಪಿಎಲ್ ಸಿದ್ಧತೆಗೆ ಚೆನ್ನೈ ತಲುಪಿದ ಎಂ.ಎಸ್ ಧೋನಿ; ಅಭಿಮಾನಿಗಳಿಂದ ಭರ್ಜರಿ ಸ್ವಾಗತ
"ನಾನು ಮೂರನೇ ಸ್ಥಾನದಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮವಾಗಿ ಆಡಿದೆ. ಆದರೆ ವಿಶ್ವಕಪ್‌ನಲ್ಲಿ ಆ ಪ್ರದರ್ಶನ ನೀಡಲು ನನಗೆ ಸಾಧ್ಯವಾಗಲಿಲ್ಲ. ಇದೀಗ, ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಭಾವನಾತ್ಮಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಹಿಂತಿರುಗಿ ಸ್ವಲ್ಪ ಸಮಯ ತೆಗೆದುಕೊಂಡು ನಂತರ ಅಗತ್ಯವಿರುವ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ" ಎಂದು ಆಘಾ ಹೇಳಿದರು.
ಟಿ20 ವಿಶ್ವಕಪ್ ಉದ್ದಕ್ಕೂ ಬಾಬರ್ ಅಜಮ್ ಅವರ ಆಯ್ಕೆ ಮತ್ತು ಅವರ 4ನೇ ಕ್ರಮಾಂಕದ ನಿಯೋಜನೆಯು ನಿರಂತರವಾಗಿ ಚರ್ಚೆಗೆ ಗ್ರಾಸವಾಗಿತ್ತು. ನಮೀಬಿಯಾ ವಿರುದ್ಧದ ಪಂದ್ಯದ ಸಮಯದಲ್ಲಿ ಅಜಮ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸದ ನಂತರ ಕೋಚ್ ಮೈಕ್ ಹೆಸ್ಸನ್ ಚರ್ಚೆಯನ್ನು ಮತ್ತಷ್ಟು ಕೆರಳಿಸಿದರು. ಪವರ್‌ಪ್ಲೇ ಅಥವಾ ಡೆತ್ ಹಂತದಲ್ಲಿ ಬ್ಯಾಟಿಂಗ್ ಮಾಡಲು ಬಾಬರ್ 'ಆದರ್ಶ ಆಯ್ಕೆ' ಅಲ್ಲ ಎಂದು ಅವರು ಹೇಳಿದ್ದರು.