IND vs PAK: ಭಾರತಕ್ಕೆ ಮತ್ತೊಂದು ಗೆಲುವಿನ ತವಕ; ಪಾಕ್‌ಗೆ ಸೇಡಿನ ಕಾತರ
ಪಾಕಿಸ್ತಾನ ಸೇರಿ ಆರಂಭಿಕ ಎರಡು ಲೀಗ್ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ್ದ ಭಾರತ, ಶುಕ್ರವಾರ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯದಲ್ಲಿ ಹಲವು ಪ್ರಯೋಗ ನಡೆಸಿ ಸ್ವಲ್ಪದರಲ್ಲೇ ಸೋಲಿನಿಂದ ಪಾರಾಗಿತ್ತು. ಹೀಗಾಗಿ ಸೂಪರ್-4 ಪಂದ್ಯದಲ್ಲಿ ಯಾವುದೇ ಪ್ರಯೋಗ ನಡೆಸದೆ ಆಡಿದರೆ ಉತ್ತಮ.

-

ದುಬೈ: ಭಾರಿ ವಿರೋಧ, ಬಾಯ್ಕಾಟ್ ಕರೆಯ ನಡುವೆಯೂ ಸಾಂಪ್ರದಾಯಿಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್(IND vs PAK) ತಂಡಗಳು ಏಷ್ಯಾಕಪ್ ಟಿ20(Asia Cup 2025) ಟೂರ್ನಿಯಲ್ಲಿ ಕಳೆದ ಭಾನುವಾರ ಮುಖಾಮುಖಿಯಾದ್ದವು. ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಇದೀಗ ಮತ್ತೊಮ್ಮೆ ಇತ್ತಂಡಗಳ ಹೈಲೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.
ಭಾನುವಾರ(ಸೆ.21) ರಂದು ನಡೆಯಲಿರುವ ಸೂಪರ್-4 ಪಂದ್ಯದಲ್ಲಿ(India vs Pakistan Super 4) ಉಭಯ ತಂಡಗಳು ಸೆಣಸಾಟ ನಡೆಸಲಿದೆ. ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಲೀಗ್ ಹಂತದ ಸೋಲಿಗೆ ಪಾಕ್ ಸೇಡು ತೀರಿಸಿಕೊಂಡಿತೇ, ಅಥವಾ ಭಾರತ ಮತ್ತೊಂದು ಗೆಲುವು ಸಾಧಿಸೀತೇ ಎನ್ನುವುದು ಪಂದ್ಯದ ಕೌತುಕ.
ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರನ್ನು ಕಣ್ಣೆತ್ತಿಯೂ ನೋಡದೆ, ಮಾತನಾಡಿಸದೆ, ಕೈಕುಲುಕದೆ ಭಾರತೀಯ ಆಟಗಾರರು ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ತಕ್ಕ ತಿರುಗೇಟು ನೀಡಿದ್ದರು. ಈ ಸಂಘರ್ಷ ಈ ಪಂದ್ಯದಲ್ಲೂ ಮುಂದುವರಿಯುವ ಸಾಧ್ಯತೆ ಇದೆ.
ಪ್ರಯೋಗ ಸಲ್ಲ
ಪಾಕಿಸ್ತಾನ ಸೇರಿ ಆರಂಭಿಕ ಎರಡು ಲೀಗ್ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ್ದ ಭಾರತ, ಶುಕ್ರವಾರ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯದಲ್ಲಿ ಹಲವು ಪ್ರಯೋಗ ನಡೆಸಿ ಸ್ವಲ್ಪದರಲ್ಲೇ ಸೋಲಿನಿಂದ ಪಾರಾಗಿತ್ತು. ಹೀಗಾಗಿ ಸೂಪರ್-4 ಪಂದ್ಯದಲ್ಲಿ ಯಾವುದೇ ಪ್ರಯೋಗ ನಡೆಸದೆ ಆಡಿದರೆ ಉತ್ತಮ.
ಅಭಿಷೇಕ್ ಶರ್ಮ ಮತ್ತು ಶುಭಮನ್ ಲಿಗ್ ಬೀಸು ಆಟದ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಆದರೆ ಎಲ್ಲ ಪಂದ್ಯಗಳಿಗೂ ಇವರನ್ನೇ ನಂಬಿ ಕುಳಿತರೆ ಆಗದು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಲಯ ಕಂಡುಕೊಳ್ಳಬೇಕು. ಕಳೆದ ಪಂದ್ಯದಲ್ಲಿ ಒಂದಂಕಿಗೆ ಸೀಮಿತರಾಗಿದ್ದರು.
ಅಕ್ಷರ್ ಅನುಮಾನ?
ಒಮಾನ್ ಎದುರಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಫೀಲ್ಡಿಂಗ್ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು. ಫೀಲ್ಡಿಂಗ್ ಕೋಚ್ ದಿಲೀಪ್ ಅವರು ನೀಡಿದ ಮಾಹಿತಿ ಪ್ರಕಾರ ಅಕ್ಷರ್‌ಗೆ ಗಂಭೀರ ಗಾಯವಾದಂತೆ ತೋರುತ್ತಿಲ್ಲ. ಆದರೂ ಅವರ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಅಕ್ಷರ್ ಪಾಕ್ ವಿರುದ್ಧ ಪಂದ್ಯ ಆಡುವ ಬಗ್ಗೆ ಅನುಮಾನವಿದೆ. ಒಂದೊಮ್ಮೆ ಅಕ್ಷರ್ ಹೊರಗುಳಿದರೆ ಹೆಚ್ಚುವರಿ ಬ್ಯಾಟಿಂಗ್ ನಿಟ್ಟಿನಲ್ಲಿ ರಿಂಕು ಸಿಂಗ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಬಹುದು.
ಇದನ್ನೂ ಓದಿ Asia Cup 2025: ಪಾಕ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ
ಬುಮ್ರಾ-ವರಣ್ ಆಗಮನ
ಒಮಾನ್ ವಿರುದ್ಧದ ಔಪಚಾರಿಕ ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದ ಜಸ್‌ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಮತ್ತೆ ತಂಡಕ್ಕೆ ವಾಪಸ್ ಆಗಲಿದ್ದಾರೆ. ಹೀಗಾಗಿ ಹರ್ಷಿತ್ ರಾಣ ಮತ್ತು ಅರ್ಶ್‌ದೀಪ್ ಸಿಂಗ್ ಜಾಗ ಬಿಡಬೇಕಿದೆ.