ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India A Players: ಇಂಗ್ಲೆಂಡ್‌ ತಲುಪಿದ ಭಾರತ ‘ಎ’ ತಂಡದ ಆಟಗಾರರು

ವೇಗಿ ತುಷಾರ್ ದೇಶಪಾಂಡೆ, ಋತುರಾಜ್ ಗಾಯಕ್ವಾಡ್, ತನುಷ್ ಕೋಟ್ಯಾನ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಸರ್ಫರಾಜ್‌ ಖಾನ್‌ ಮತ್ತು ನಾಯಕ ಅಭಿಮನ್ಯು ಇಂಗ್ಲೆಂಡ್‌ ತಲುಪಿದ ಆಟಗಾರರು. ಉಳಿದ ಆಟಗಾರರು ಇನ್ನಡೆರಡು ದಿನದಲ್ಲಿ ತಂಡ ಸೇರಲಿದ್ದಾರೆ.

ಇಂಗ್ಲೆಂಡ್‌ ತಲುಪಿದ ಭಾರತ ‘ಎ’ ತಂಡದ ಆಟಗಾರರು

Profile Abhilash BC May 25, 2025 9:26 PM

ಲಂಡನ್‌: ಇಂಗ್ಲೆಂಡ್‌ ಲಯನ್ಸ್‌(England Lions) ವಿರುದ್ಧದ 2 ಪಂದ್ಯಗಳ ಸರಣಿಗೆ ಭಾರತ ‘ಎ’ ತಂಡ(India Squad)ದ ಕೆಲ ಆಟಗಾರರು(India A Players) ಲಂಡನ್‌ ತಲುಪಿದ್ದಾರೆ. ಅಭಿಮನ್ಯು ಈಶ್ವರನ್ ನೇತೃತ್ವದ ಭಾರತ ಎ ತಂಡದ ಸದಸ್ಯರು ಭಾನುವಾರ ಇಂಗ್ಲೆಂಡ್ ತಲುಪಿದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಭಾರತ ಎ ತಂಡವು ಮೇ 30 ಮತ್ತು ಜೂನ್ 6 ರಂದು ಕ್ಯಾಂಟರ್ಬರಿ ಮತ್ತು ನಾರ್ಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ.

ವೇಗಿ ತುಷಾರ್ ದೇಶಪಾಂಡೆ, ಋತುರಾಜ್ ಗಾಯಕ್ವಾಡ್, ತನುಷ್ ಕೋಟ್ಯಾನ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಸರ್ಫರಾಜ್‌ ಖಾನ್‌ ಮತ್ತು ನಾಯಕ ಅಭಿಮನ್ಯು ಇಂಗ್ಲೆಂಡ್‌ ತಲುಪಿದ ಆಟಗಾರರು. ಉಳಿದ ಆಟಗಾರರು ಇನ್ನಡೆರಡು ದಿನದಲ್ಲಿ ತಂಡ ಸೇರಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಗೊಳ್ಳಲಿದೆ. ಸರಣಿಗೆ ಬಿಸಿಸಿಐ ಶನಿವಾರ 18 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಶುಭಮನ್‌ ಗಿಲ್‌ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ರಿಷಭ್‌ ಪಂತ್ ತಂಡದ ಉಪನಾಯಕರಾಗಿದ್ದಾರೆ.

ಭಾರತ 'ಎ' ತಂಡ

ಅಭಿಮನ್ಯು ಈಶ್ವರನ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಕರುಣ್‌ ನಾಯರ್‌, ಧೃವ್‌ ಜುರೆಲ್‌, ನಿತೀಶ್‌ ರೆಡ್ಡಿ, ಶಾರ್ದೂಲ್‌ ಠಾಕೂರ್‌, ಇಶಾನ್‌ ಕಿಶನ್‌, ಮಾನವ್‌ ಸುಥಾರ್‌, ತನುಷ್‌ ಕೋಟ್ಯಾನ್‌, ಮುಕೇಶ್‌ ಕುಮಾರ್‌, ಆಕಾಶ್‌ ದೀಪ್‌, ಹರ್ಷಿತ್‌ ರಾಣಾ, ಅನ್ಶುಲ್‌ ಕಾಂಬೋಜ್‌, ಖಲೀಲ್‌ ಅಹ್ಮದ್‌, ಋತುರಾಜ್‌ ಗಾಯಕ್ವಾಡ್‌, ಸರ್ಫರಾಜ್‌ ಖಾನ್‌, ತುಷಾರ್‌ ದೇಶಪಾಂಡೆ, ಹರ್ಷ್‌ ದುಬೆ.

ಟೆಸ್ಟ್‌ ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ(ಕೆಲವು ಪಂದ್ಯಕ್ಕೆ ಮಾತ್ರ), ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.

ಇದನ್ನೂ ಓದಿ India's Test Squad: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್‌ ಗಿಲ್‌ ನೂತನ ನಾಯಕ!