ಅಂಧರ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ-ಪಾಕ್ ಹ್ಯಾಂಡ್‌ಶೇಕ್, ಒಂದೇ ಬಸ್‌ನಲ್ಲಿ ಪ್ರಯಾಣ!
ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 8 ವಿಕೆಟ್ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಕೇವಲ 10.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತ ಪರ ದೀಪಿಕಾ ಟಿ.ಸಿ. 21 ಎಸೆತಗಳಲ್ಲಿ 45 ರನ್ ಗಳಿಸಿದರೆ, ಅನೇಖಾ ದೇವಿ 34 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು.
-
ಕೊಲಂಬೊ: ಇಲ್ಲಿ ನಡೆಯುತ್ತಿರುವ ಅಂಧರ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಆಟಗಾರ್ತಿಯರು ಪರಸ್ಪರ ಕೈಕುಲುಕಿ, ಹೈ-ಫೈವ್ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದರು. ಗಡಿಯಾಚೆಗಿನ ಉದ್ವಿಗ್ನತೆಗಳ ಕಾರಣ ಭಾರತ ತಂಡದ ಆಟಗಾರರು ಏಷ್ಯಕಪ್ ಟಿ20, ಮಹಿಳಾ ಏಕದಿನ ವಿಶ್ವಕಪ್, ಮತ್ತು ದೋಹಾದಲ್ಲಿ ಭಾನುವಾರ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯದ ಸಮಯದಲ್ಲಿ ಪಾಕ್ ಆಟಗಾರರ ಜತೆ ನೋ ಹ್ಯಾಂಡ್ ಶೇಕ್ ನಿಮಯ ಪಾಲನೆ ಮಾಡಿದ್ದರು. ಆದರೆ ಆ ನಿಯಮ ಅಂಧರ ತಂಡಕ್ಕೆ ಅನ್ವಯವಾಗಿಲ್ಲ.
ಹ್ಯಾಂಡ್ ಶೇಕ್ ಮಾತ್ರವಲ್ಲದೆ ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಘರ್ಷಣೆಯ ಹೊರತಾಗಿಯೂ, ಪಂದ್ಯದ ಕೊನೆಯಲ್ಲಿ ಉಭಯ ಆಟಗಾರ್ತಿಯರು ಒಂದೇ ಬಸ್‌ನಲ್ಲಿ ಪ್ರಯಾಣಿಸಿದವು. ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನದ ನಾಯಕಿ ನಿಮ್ರಾ ರಫೀಕ್ ಭಾರತದ ಗೆಲುವನ್ನು ಶ್ಲಾಘಿಸಿದರು. ಅತ್ತ ಭಾರತದ ನಾಯಕಿ ದೀಪಿಕಾ ಪಾಕಿಸ್ತಾನದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.
ಭಾರತಕ್ಕೆ 8 ವಿಕೆಟ್ ಜಯ
ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 8 ವಿಕೆಟ್ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಕೇವಲ 10.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತ ಪರ ದೀಪಿಕಾ ಟಿ.ಸಿ. 21 ಎಸೆತಗಳಲ್ಲಿ 45 ರನ್ ಗಳಿಸಿದರೆ, ಅನೇಖಾ ದೇವಿ 34 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು.
Women Blind Cricket World Cup Colombo:.India women Blind won against Pakistan
— Sohail Imran (@sohailimrangeo) November 16, 2025
Good to see Blind teams Hand shake. pic.twitter.com/jpjfM0XxFW
ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಾಬಲ್ಯ!
ಶ್ರೀಲಂಕಾದಲ್ಲಿ ನಡೆಯುತ್ತಿರುವ ಈ ಮಹಿಳಾ ಟಿ20 ಅಂಧರ ವಿಶ್ವಕಪ್‌ನಲ್ಲಿ ಭಾರತ ಇಲ್ಲಿಯವರೆಗೆ ಅಸಾಧಾರಣ ಪ್ರದರ್ಶನ ನೀಡಿದೆ. ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ ಭಾರತೀಯ ಮಹಿಳೆಯರು, ಸತತ ನಾಲ್ಕು ಗೆಲುವು ಸಾಧಿಸಿ ಅಜೇಯ ಓಟ ಮುಂದುವರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 20 ಓವರ್‌ಗಳಲ್ಲಿ 292/4 ರನ್ ಗಳಿಸಿತು. ನಾಯಕಿ ದೀಪಿಕಾ ಟಿಸಿ 58 ಎಸೆತಗಳಲ್ಲಿ 91 ರನ್ ಗಳಿಸಿದರು ಮತ್ತು ಫುಲಾ ಸರೇನ್ ಅಜೇಯ 54 ರನ್ ಗಳಿಸಿದರು. ನಂತರ ಆಸ್ಟ್ರೇಲಿಯಾ ತಂಡವು 57 ರನ್‌ಗಳಿಗೆ ಆಲೌಟ್ ಆಗಿ, ಭಾರತ 209 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.