Karnataka vs Chandigarh: ಸ್ಮರಣ್ ದ್ವಿಶತಕ; ಬೃಹತ್ ಮೊತ್ತ ಕಲೆ ಹಾಕಿದ ಕರ್ನಾಟಕ
Smaran Ravichandran: ಒಟ್ಟು 343 ಎಸೆತಗ ಎದುರಿಸಿದ ಸ್ಮರಣ್, 16 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 227 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಈ ಋತುವಿನಲ್ಲಿ ಸ್ಮರಣ್ ಬಾರಿಸಿದ ಎರಡನೇ ದ್ವಿಶತಕವಾಗಿದೆ. ಇದಕ್ಕೂ ಮುನ್ನ ತಿರುವನಂತಪುರದಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ಅಜೇಯ 220 ರನ್ ಬಾರಿಸಿದ್ದರು.
ಚಂಡೀಗಢ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಆರ್. ಸ್ಮರಣ್ -
ಹುಬ್ಬಳ್ಳಿ: ಸ್ಮರಣ್ ರವಿಚಂದ್ರನ್(Smaran Ravichandran) ಬಾರಿಸಿದ ಸೊಗಸಾದ ದ್ವಿಶತಕದ ನೆರವಿನಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಚಂಡೀಗಢ ಎದುರು ಬೃಹತ್ ಮೊತ್ತ ಕಲೆ ಹಾಕಿ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಎರಡನೇ ದಿನವಾದ ಸೋಮವಾರ 8 ವಿಕೆಟ್‌ಗೆ 547ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟುತ್ತಿರುವ ಚಂಡೀಗಢ(Karnataka vs Chandigarh), ದಿನದಂತ್ಯಕ್ಕೆ 4 ವಿಕೆಟ್ ನಷ್ಟದಲ್ಲಿ 72 ರನ್ ಗಳಿಸಿದ್ದು, 475 ರನ್ ಹಿನ್ನಡೆಯಲ್ಲಿದೆ.
ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲ ದಿನಾಟದಲ್ಲಿ ಅಜೇಯ 110 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸ್ಮರಣ್, ಸೋಮವಾರವೂ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ಮುಂದುವರಿಸಿದರು. ಸುಡು ಬಿಸಿಲನ್ನು ಲೆಕ್ಕಿಸದೆ ತಾಳ್ಮೆಯುತವಾಗಿಯೇ ಬ್ಯಾಟ್ ಬೀಸಿದ ಅವರು ಎದರಾಳಿ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿ ಉತ್ತಮ ಸಾಥ್ ನೀಡಿದರು.
ಒಟ್ಟು 343 ಎಸೆತಗ ಎದುರಿಸಿದ ಸ್ಮರಣ್, 16 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 227 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಈ ಋತುವಿನಲ್ಲಿ ಸ್ಮರಣ್ ಬಾರಿಸಿದ ಎರಡನೇ ದ್ವಿಶತಕವಾಗಿದೆ. ಇದಕ್ಕೂ ಮುನ್ನ ತಿರುವನಂತಪುರದಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ಅಜೇಯ 220 ರನ್ ಬಾರಿಸಿದ್ದರು.
ಶ್ರೇಯಸ್ ಗೋಪಾಲ್ (62) ಮತ್ತು ಶಿಖರ್ ಶೆಟ್ಟಿ(59) ಅರ್ಧಶತಕದ ಕೊಡುಗೆ ನೀಡಿದರು. ವಿದ್ಯಾಧರ ಪಾಟೀಲ 30 ರನ್ ಬಾರಿಸಿದರು. ಕರುಣ್ ನಾಯರ್ ಮೊದಲ ದಿನದಾಟದಲ್ಲಿ 95ರನ್ ಬಾರಿಸಿದ್ದರು. ಎದುರಾಳಿ ತಂಡದ ಪರ ಜಗಜಿತ್ ಸಿಂಗ್, ವಿಷು ಕಶ್ಯಪ್ ಮತ್ತು ನಿಶುಂಕ್ ಬಿರ್ಲಾ ತಲಾ ಎರಡು ವಿಕೆಟ್ ಕಿತ್ತರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಸ್ಪಿನ್ ಜಾದು ನಡೆಸಿದ ಶ್ರೇಯಸ್ ಗೋಪಾಲ್ 18 ರನ್‌ಗೆ 3 ವಿಕೆಟ್ ಕಿತ್ತರು.
ಇದನ್ನೂ ಓದಿ ind vs sa 2nd test: 2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನ ತುಂಬಲು ಕರುಣ್, ಪಡಿಕ್ಕಲ್ ಸೇರಿ 5 ಆಟಗಾರರ ಮಧ್ಯೆ ಪೈಪೋಟಿ
1,000 ಪ್ರಥಮ ದರ್ಜೆ ರನ್‌ಗಳನ್ನು ದಾಟಿದ ಸ್ಮರಣ್
ದ್ವಿಶತಕ ಬಾರಿಸಿದ ಸ್ಮರಣ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾವಿರ ರನ್ ಗಡಿ ದಾಟಿದರು. ಕೇವಲ 22 ವರ್ಷ ವಯಸ್ಸಿನವರಾಗಿರುವ ಸ್ಮರನ್, ತಮ್ಮ 13 ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ್ದಾರೆ. ಕಳೆದ ಋತುವಿನಲ್ಲಿ ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಮೊದಲ ದ್ವಿಶತಕ ಗಳಿಸಿದ್ದರು.