ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ; ಭಾರತಕ್ಕೆ ಹೀನಾಯ ಸೋಲು
India vs New Zealand 4th ODI: ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ವಿಲ್ ಯಂಗ್(125) ಆಕರ್ಷಕ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 333 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತದ ಆಟಗಾರರು ಕಿವೀಸ್ ತಂಡದ ಬೌಲರ್‌ಗಳ ಎದುರು ತತ್ತರಿಸಿದರು. 26.4 ಓವರ್‌ಗಳಲ್ಲಿ ಕೇವಲ 89 ರನ್ ಗಳಿಸಿ ಸರ್ವಪತನ ಕಂಡರು.
Matt Henry -
ಮೌಂಟ್ ಮೌಂಗನುಯಿ, ನ.13: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಇಳಿದದ್ದು ಪಾತಾಳಕ್ಕೆ. ಬರೀ ಸೋಲಲ್ಲ ಅತ್ಯಂತ ಹೀನಾಯ ಸೋಲು. 89 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ವಿಲ್ ಯಂಗ್(125) ಆಕರ್ಷಕ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 333 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತದ ಆಟಗಾರರು ಕಿವೀಸ್ ತಂಡದ ಬೌಲರ್‌ಗಳ ಎದುರು ತತ್ತರಿಸಿದರು. 26.4 ಓವರ್‌ಗಳಲ್ಲಿ ಕೇವಲ 89 ರನ್ ಗಳಿಸಿ ಸರ್ವಪತನ ಕಂಡರು. ಗೆಲುವು ಸಾಧಿಸಿದ ಕಿವೀಸ್ ಸರಣಿ ಸೋಲಿನಿಂದ ಸದ್ಯ ಪಾರಾಯಿತು. ಇತ್ತಂಡಗಳ ನಡುವಣ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.
ಹೆನ್ರಿ ದಾಳಿಗೆ ತತ್ತರಿಸಿದ ಭಾರತ
ಕಠಿಣ ಮೊತ್ತದ ಸವಾಲು ಬೆನ್ನತ್ತಿದ ಭಾರತ ತಂಡಕ್ಕೆ ವೇಗಿ ಮ್ಯಾಟ್ ಹೆನ್ರಿ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ತ್ರಿವಳಿ ಆಘಾತವಿಕ್ಕಿದರು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.