ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಏಕದಿನ ಸಾಧನೆ ಹೇಗಿದೆ?
India's ODI Record At Ekana Stadium: ಭಾರತ ತಂಡವು ಇಲ್ಲಿಯವರೆಗೆ ಲಖನೌದ ಏಕಾನಾ ಸ್ಟೇಡಿಯಂನಲ್ಲಿ ಎರಡು ODI ಪಂದ್ಯಗಳನ್ನು ಆಡಿದೆ. 2023 ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸ್ಮರಣೀಯ ಜಯವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
India vs Afghanistan, 2nd ODI -
ಲಖನೌ, ಜೂ.17: ಭಾರತ ಪುರುಷರ ಕ್ರಿಕೆಟ್ ತಂಡವು ಬುಧವಾರ (ಜೂನ್ 17) ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಎರಡನೇ ಏಕದಿನ(India vs Afghanistan 2nd ODI) ಪಂದ್ಯವನ್ನಾಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣ(Ekana Stadium)ದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಭಾರತದ ಸಾಧನೆ ಹೇಗಿದೆ ಎಂಬ ವರದಿ ಇಲ್ಲಿದೆ.
ಭಾರತ ತಂಡವು ಇಲ್ಲಿಯವರೆಗೆ ಲಖನೌದ ಏಕಾನಾ ಸ್ಟೇಡಿಯಂನಲ್ಲಿ ಎರಡು ODI ಪಂದ್ಯಗಳನ್ನು ಆಡಿದೆ. 2023 ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸ್ಮರಣೀಯ ಜಯವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
ಮೊದಲ ಸರಣಿ ಗೆಲುವಿಗೆ ಗಿಲ್ ಕಾತರ
ಶನಿವಾರ (ಜೂನ್ 13) ಧರ್ಮಶಾಲಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿರುವ ಭಾರತ, ಲಖನೌ ಪಂದ್ಯ ಗೆದ್ದರೆ ಇನ್ನೊಂದು ಪಂಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳಲಿದೆ. ಇದೇ ವೇಳೆ ಶುಭಮನ್ ಗಿಲ್ ಭಾರತದ ನಾಯಕನಾಗಿ ತನ್ನ ಮೊದಲ ಏಕದಿನ ಸರಣಿಯನ್ನು ಗೆದ್ದ ಸಾಧನೆ ಮಾಡಲಿದ್ದಾರೆ. ಆರಂಭಿಕ ಪಂದ್ಯದಲ್ಲಿ, 26 ವರ್ಷದ ಬಲಗೈ ಬ್ಯಾಟ್ಸ್‌ಮನ್ ಅದ್ಭುತ ಅರ್ಧಶತಕ ಗಳಿಸಿದ್ದರು.
A new spin duo in town 😎😉
— BCCI (@BCCI) June 16, 2026
Rohit Sharma 🤝 Yashasvi Jaiswal#TeamIndia | #INDvAFG | @IDFCFIRSTBank | @ImRo45 | @ybj_19 pic.twitter.com/7wrh268mvt
ಈ ಮೈದಾನದಲ್ಲಿ ಭಾರತೀಯ ಆಟಗಾರರ ದಾಖಲೆಗಳು
ಅತ್ಯಧಿಕ ಮೊತ್ತ: ಅಕ್ಟೋಬರ್ 6, 2022 ರಂದು ದಕ್ಷಿಣ ಆಫ್ರಿಕಾ ವಿರುದ್ಧ 40 ಓವರ್‌ಗಳಲ್ಲಿ 240/8.
ಕಡಿಮೆ ಮೊತ್ತ: ಅಕ್ಟೋಬರ್ 29, 2023 ರಂದು ಇಂಗ್ಲೆಂಡ್ ವಿರುದ್ಧ 50 ಓವರ್‌ಗಳಲ್ಲಿ 229/9.
ಅತಿದೊಡ್ಡ ಗೆಲುವು: ಅಕ್ಟೋಬರ್ 29, 2023 ರಂದು ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು.
ಅತಿ ಹೆಚ್ಚು ರನ್‌ಗಳು: ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ 87 ರನ್.
ಅತ್ಯಧಿಕ ಸರಾಸರಿ: ರೋಹಿತ್ ಶರ್ಮಾ 87.00.
ಅತ್ಯಧಿಕ ಸ್ಟ್ರೈಕ್ ರೇಟ್ (ಕನಿಷ್ಠ 25 ಎಸೆತಗಳು): ಸಂಜು ಸ್ಯಾಮ್ಸನ್ 136.50 (ಒಂದು ಪಂದ್ಯದಲ್ಲಿ 86 ರನ್‌ಗಳು).
ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಜೋ ರೂಟ್
ಅತಿ ಹೆಚ್ಚು ಅರ್ಧಶತಕ: ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ತಲಾ 1 ಅರ್ಧಶತಕ.
ಅತಿ ಹೆಚ್ಚು ಡಕ್‌ಗಳು(ಶೂನ್ಯ): ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ತಲಾ 1 ಡಕ್.
ಅತಿ ಹೆಚ್ಚು ಸಿಕ್ಸರ್‌ಗಳು: ರೋಹಿತ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ತಲಾ 3 ಸಿಕ್ಸರ್‌ಗಳು.
ಅತಿ ಹೆಚ್ಚು ವಿಕೆಟ್‌ಗಳು: ಮೊಹಮ್ಮದ್ ಶಮಿ 4 ವಿಕೆಟ್‌ಗಳು.
ಮೆಸ್ಸಿ ಹ್ಯಾಟ್ರಿಕ್ ಗೋಲ್ ಕಮಾಲ್; ಅರ್ಜೆಂಟೀನಾ ಗೆಲುವಿನ ಶುಭಾರಂಭ
ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು: ಅಕ್ಟೋಬರ್ 29, 2023 ರಂದು ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಶಮಿ 7 ಓವರ್‌ಗಳಲ್ಲಿ 22 ರನ್‌ಗಳಿಗೆ 4 ವಿಕೆಟ್‌ಗಳು.
ವಿಕೆಟ್ ಕೀಪಿಂಗ್ ದಾಖಲೆ: ಕೆಎಲ್ ರಾಹುಲ್ ಅವರಿಂದ 2 ಔಟ್ (1 ಕ್ಯಾಚ್ ಮತ್ತು 1 ಸ್ಟಂಪಿಂಗ್).
ಹೆಚ್ಚಿನ ಕ್ಯಾಚ್‌ಗಳು: ಶ್ರೇಯಸ್ ಅಯ್ಯರ್ ಅವರಿಂದ 1 ಕ್ಯಾಚ್.
ಗರಿಷ್ಠ ಜೊತೆಯಾಟ: ಅಕ್ಟೋಬರ್ 6, 2022 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಂಜು ಸ್ಯಾಮ್ಸನ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಆರನೇ ವಿಕೆಟ್‌ಗೆ 93 ರನ್.
ಹೆಚ್ಚಿನ ಪಂದ್ಯಗಳು: ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರಿಂದ ತಲಾ 2 ODIಗಳು.