IPL 2025: ಅಶ್ವಿನ್ ದಾಖಲೆ ಮುರಿದ ಭುವನೇಶ್ವರ್ ಕುಮಾರ್
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಎಲ್ಲ ಬೌಲರ್‌ಗಳು ದುಬಾರಿಯಾದರೀ ಭುವನೇಶ್ವರ್ 4 ಓವರ್ ಬೌಲಿಂಗ್ ದಾಳಿ ನಡೆಸಿ ಕೇವಲ 26 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದು ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರಿದರು. ಒಂದೊಮ್ಮೆ ಉಳಿದವರಿಂದ ಉತ್ತಮ ಸಾಥ್ ಸಿಗುತ್ತಿದ್ದರೆ ಆರ್‌ಸಿಬಿ ಪಂದ್ಯ ಗೆಲ್ಲುವ ಅವಕಾಶ ಕೂಡ ಇತ್ತು.


ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್(RCB vs DC) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ(RCB) ಸೋಲು ಕಂಡರೂ ವೇಗಿ ಭುವನೇಶ್ವರ್ ಕುಮಾರ್(Bhuvneshwar Kumar) ಎರಡು ವಿಕೆಟ್ ಕೀಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರ್.ಅಶ್ವಿನ್ ಅವರ ಐಪಿಎಲ್ ದಾಖಲೆಯೊಂದನ್ನು ಮುರಿದಿದ್ದಾರೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ 2 ವಿಕೆಟ್ ಕಿತ್ತ ಭುವನೇಶ್ವರ್(186 ವಿಕೆಟ್), ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಮೂರನೇ ಬೌಲರ್ ಎನಿಸಿಕೊಂಡರು.
ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಯುಜವೇಂದ್ರ ಚಹಲ್ ಹೆಸರಿನಲ್ಲಿದೆ. ಚಹಲ್ 206 ವಿಕೆಟ್ ಕಿತ್ತಿದ್ದಾರೆ. 192 ವಿಕೆಟ್ ಕಿತ್ತಿರುವ ಪಿಯೂಷ್ ಚಾವ್ಲಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಅವರಿಗೆ ಚಾವ್ಲಾ ದಾಖಲೆ ಮುರಿಯಲು ಇನ್ನು 6 ವಿಕೆಟ್ ಅಗತ್ಯವಿದೆ. 185 ವಿಕೆಟ್ ಕಿತ್ತಿರುವ ಆರ್.ಅಶ್ವಿನ್ ನಾಲ್ಕನೇ ಸ್ಥಾನಿಯಾಗಿದ್ದಾರೆ. ಇಂದು ನಡೆಯುವ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ 2 ವಿಕೆಟ್ ಕಿತ್ತರೆ ಭುವನೇಶ್ವರ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಎಲ್ಲ ಬೌಲರ್‌ಗಳು ದುಬಾರಿಯಾದರೀ ಭುವನೇಶ್ವರ್ 4 ಓವರ್ ಬೌಲಿಂಗ್ ದಾಳಿ ನಡೆಸಿ ಕೇವಲ 26 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದು ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರಿದರು. ಒಂದೊಮ್ಮೆ ಉಳಿದವರಿಂದ ಉತ್ತಮ ಸಾಥ್ ಸಿಗುತ್ತಿದ್ದರೆ ಆರ್‌ಸಿಬಿ ಪಂದ್ಯ ಗೆಲ್ಲುವ ಅವಕಾಶ ಕೂಡ ಇತ್ತು.
ಅತ್ಯಧಿಕ ಐಪಿಎಲ್ ವಿಕೆಟ್ ಕಿತ್ತ ಬೌಲರ್
ಯಜುವೇಂದ್ರ ಚಹಲ್-206*
ಪಿಯೂಷ್ ಚಾವ್ಲಾ-192
ಭುವನೇಶ್ವರ್ ಕುಮಾರ್-186 *
ಆರ್ ಅಶ್ವಿನ್-185 *
ಡ್ವೇನ್ ಬ್ರಾವೊ-183
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆ ಬರೆದ ಆರ್‌ಸಿಬಿ
6 ವಿಕೆಟ್ ಸೋಲು
ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡ ಡೆಲ್ಲಿ ವಿರುದ್ಧ 6 ವಿಕೆಟ್ ಅಂತರದ ಸೋಲು ಕಂಡು ತವರಿನಲ್ಲಿ ಸತತ ಎರಡನೇ ಸೋಲು ಕಂಡ ಅವಮಾನ ಎದುರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 163 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ರಾಹುಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.