ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೀಟರ್ಸನ್‌ ಮೆಂಟರ್‌

Kevin Pietersen: ಪೀಟರ್ಸನ್‌ ಡೆಲ್ಲಿ ತಂಡದ ಪರವೂ ಆಡಿದ್ದರು. 2014ರಲ್ಲಿ ಅವರು ಡೆಲ್ಲಿ ತಂಡದ ನಾಯಕನಾಗಿದ್ದರು. ಆದರೆ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೆಂಟರ್‌ ಆದ ಪೀಟರ್ಸನ್‌

Profile Abhilash BC Feb 27, 2025 4:56 PM

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 2025 ರ(IPL 2025) ಸೀಸನ್‌ಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಫ್ರಾಂಚೈಸಿ, ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್(Kevin Pietersen) ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಿದೆ. ಪೀಟರ್ಸನ್ ಅವರು ಹೇಮಂಗ್ ಬದಾನಿ (ಮುಖ್ಯ ಕೋಚ್), ಮ್ಯಾಥ್ಯೂ ಮೋಟ್ (ಸಹಾಯಕ ಕೋಚ್), ಮುನಾಫ್ ಪಟೇಲ್ (ಬೌಲಿಂಗ್ ಕೋಚ್) ಮತ್ತು ವೇಣುಗೋಪಾಲ್ ರಾವ್ (ಕ್ರಿಕೆಟ್ ನಿರ್ದೇಶಕ) ಜತೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಐಪಿಎಲ್‌ನಲ್ಲಿ ಪೀಟರ್ಸನ್‌ ಕೋಚಿಂಗ್‌ ನಡೆಸುತ್ತಿರುವುದು ಇದೇ ಮೊದಲ ಬಾರಿಗೆ.

2016ರ ಐಪಿಎಲ್‌ ಆವೃತ್ತಿಯಲ್ಲಿ ಪೀಟರ್ಸನ್‌ ತಮ್ಮ ಕೊನೆಯ ಐಪಿಎಲ್‌ ಪಂದ್ಯವನ್ನಾಡಿದ್ದರು. ಆಗ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡಲ್ಲಿದ್ದರು. ಪೀಟರ್ಸನ್‌ ಡೆಲ್ಲಿ ತಂಡದ ಪರವೂ ಆಡಿದ್ದರು. 2014ರಲ್ಲಿ ಅವರು ಡೆಲ್ಲಿ ತಂಡದ ನಾಯಕನಾಗಿದ್ದರು. ಆದರೆ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿತ್ತು. ಪೀಟರ್ಸನ್‌ ಹಲವು ಐಪಿಎಲ್‌ ಫ್ರಾಂಚೈಸಿ ಪರ ಒಟ್ಟು 36 ಪಂದ್ಯಗಳನ್ನಾಡಿ 1001 ರನ್‌ ಮತ್ತು 7 ವಿಕೆಟ್‌ ಕಿತ್ತಿದ್ದಾರೆ. ಒಂದು ಶತಕ ಮತ್ತು 4 ಅರ್ಧಶತಕ ಕೂಡ ಬಾರಿಸಿದ್ದಾರೆ.



18ನೇ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಬೌಲಿಂಗ್​ ಆಲ್ರೌಂಡರ್​ ಅಕ್ಷರ್​ ಪಟೇಲ್​ಗೆ(Axar Patel) ನಾಯಕತ್ವ ನೀಡುವ ಸಾಧ್ಯತೆ ಅಧಿಕವಾಗಿದೆ. ಅಕ್ಷರ್​ ಪಟೇಲ್ ಅವರನ್ನು​ 16.50 ಕೋಟಿ ರೂ.ಗೆ ಡೆಲ್ಲಿ ತಂಡ ರಿಟೇನ್​ ಮಾಡಿತ್ತು. 2019ರಿಂದ ಡೆಲ್ಲಿ ತಂಡದಲ್ಲೇ ಇರುವ ಅಕ್ಷರ್​, ಕಳೆದೆರಡು ಆವೃತ್ತಿಗಳಲ್ಲಿ ತಂಡದ ಉಪನಾಯಕನಾಗಿ ಕೆಲ ಪಂದ್ಯಗಳಲ್ಲಿ ಹಂಗಾಮಿ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಭಾರತ ಟಿ20 ತಂಡದಲ್ಲಿಯೂ ಅಕ್ಷರ್‌ ಉಪನಾಯಕನಾಗಿದ್ದಾರೆ.

ಇದನ್ನೂ ಓದಿ IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಬೌಲಿಂಗ್‌ ಕೋಚ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡ

ಕೆಎಲ್​ ರಾಹುಲ್,​ ಮಿಚೆಲ್​ ಸ್ಟಾರ್ಕ್​, ಟಿ. ನಟರಾಜನ್, ಜೇಕ್​ ಫ್ರೇಸರ್​ ಮೆಕ್​ಗುರ್ಕ್​, ಹ್ಯಾರಿ ಬ್ರೂಕ್​ ,ಕರುಣ್​ ನಾಯರ್, ಸಮೀರ್​ ರಿಜ್ವಿ, ಆಶುತೋಷ್​ ಶರ್ಮ, ಮೋಹಿತ್​ ಶರ್ಮ, ಮುಕೇಶ್​ ಕುಮಾರ್​, ಫಾಫ್ ಡು ಪ್ಲೆಸಿಸ್, ದರ್ಶನ್​ ನಲ್ಕಂಡೆ, ವಿಪ್ರಜ್​ ನಿಗಮ್, ದುಶ್ಮಂತ ಚಮೀರ, ಡೊನೊವನ್​ ಫೆರೀರ , ಅಜಯ್​ ಮಂಡಲ್​, ಮನ್ವಂತ್​ ಕುಮಾರ್, ತ್ರಿಪುರಣ ವಿಜಯ್​, ಮಾಧವ್​ ತಿವಾರಿ.