IPL 2025 Points Table: ಮಳೆಯಿಂದ ಪಂದ್ಯ ರದ್ದುಗೊಂಡರೂ ಅಂಕಪಟ್ಟಿಯಲ್ಲಿ ಮೇಲೇರಿದ ಪಂಜಾಬ್
ಗುಜರಾತ್ ಟೈಟಾನ್ಸ್ ಅಗ್ರ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೂರನೇ ಸ್ಥಾನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು(ಭಾನುವಾರ) ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಯಾರೇ ಗೆದ್ದರೂ ಅಗ್ರಸ್ಥಾನ ಪಡೆಯಲಿದ್ದಾರೆ. ಜತೆಗೆ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದ್ದಾರೆ.

ಕೋಲ್ಕತಾ: ಶನಿವಾರದ ಐಪಿಎಲ್(IPL 2025)ನ ಕೋಲ್ಕತಾ ನೈಟ್‌ರೈಡರ್ಸ್(KKR vs PBKS) ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ ಮಳೆಯಿಂದ ಪೂರ್ಣ ಫಲಿತಾಂಶ ಕಾಣದೆ ರದ್ದುಗೊಂಡಿತು. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಒಂದು ಅಂಕ ಪಡೆದರೂ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ(IPL 2025 Points Table) ಜಿಗಿತ ಕಂಡಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ. ಮುಂಬೈ ಒಂದು ಸ್ಥಾನದ ನಷ್ಟದೊಂದಿಗೆ 5ನೇ ಸ್ಥಾನಕ್ಕೆ ಜಾರಿದೆ. ಮೊತ್ತೊಂಡೆ ಕೆಕೆಆರ್ 7ನೇ ಸ್ಥಾನದಲ್ಲೇ ಮುಂದುವರಿಯಿತು.
ಗುಜರಾತ್ ಟೈಟಾನ್ಸ್ ಅಗ್ರ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೂರನೇ ಸ್ಥಾನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು(ಭಾನುವಾರ) ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಯಾರೇ ಗೆದ್ದರೂ ಅಗ್ರಸ್ಥಾನ ಪಡೆಯಲಿದ್ದಾರೆ. ಜತೆಗೆ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದ್ದಾರೆ.
ದಿನದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಐದು ಪಂದ್ಯಗಳನ್ನು ಗೆದ್ದರುವ ಮುಂಬೈ 5ನೇ ಸ್ಥಾನದಲ್ಲಿದ್ದರೆ, ಲಕ್ನೋ ಕೂಡ 5 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಸಾಯಿ ಸುದರ್ಶನ್( 417) ಆರೆಂಜ್ ಕ್ಯಾಪ್ ಪಡೆದಿದ್ದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ(16) ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಇದನ್ನೂ ಓದಿ IPL 2025: ಕೋಲ್ಕತಾ ನೈಟ್ ರೈಡರ್ಸ್-ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ ಮಳೆಗೆ ಬಲಿ!
ಅಂಕಪಟ್ಟಿ ಹೀಗಿದೆ
IPL 2025 POINTS TABLE.
— Tata IPL 2025 Commentary (@IPL2025Auction) April 26, 2025
- GT, DC, RCB with 12 Points
- PBKS with 11 Points.#KKRvsPBKS pic.twitter.com/a1piKXxLYN