ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌

2018 ರಲ್ಲಿ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಶುಭಮನ್‌ ಗಿಲ್‌ ಆರಂಭದಲ್ಲಿ ಕೆಕೆಆರ್‌ ತಂಡದ ಪರ ಆಡಿದ್ದರು. ಕೆಕೆಆರ್‌ ಪರ 58 ಪಂದ್ಯಗಳಲ್ಲಿ 1417 ರನ್‌ಗಳನ್ನು ಗಳಿಸಿದ್ದರು. 2022 ರಲ್ಲಿ ಗುಜರಾತ್‌ ಟೈಟಾನ್ಸ್‌ ಸೇರಿದರು ಮತ್ತು ಫ್ರಾಂಚೈಸಿ ಪರ 2,104 ರನ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌

Profile Abhilash BC Apr 22, 2025 7:54 AM

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders) ವಿರುದ್ಧ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ 90 ರನ್‌ ಬಾರಿಸಿದ್ದ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌(Shubman Gill) ಐಪಿಎಲ್‌(IPL 2025)ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3500 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು 25 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ರಿಷಭ್ ಪಂತ್ ಈ ಸಾಧಕರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಗಿಲ್ (25 ವರ್ಷ 225 ದಿನಗಳು) ಅವರಿಗಿಂತ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ (27 ವರ್ಷ 171 ದಿನಗಳು) ಹೆಸರಿನಲ್ಲಿತ್ತು. ಕೊಹ್ಲಿ 2016 ರ ಋತುವಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಸಂಜು ಸ್ಯಾಮ್ಸನ್ ಎರಡನೇ ಕಿರಿಯ (27 ವರ್ಷ 197 ದಿನಗಳು) ಆಗಿದ್ದರು. ಇದೀಗ ಗಿಲ್‌ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

2018 ರಲ್ಲಿ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಶುಭಮನ್‌ ಗಿಲ್‌ ಆರಂಭದಲ್ಲಿ ಕೆಕೆಆರ್‌ ತಂಡದ ಪರ ಆಡಿದ್ದರು. ಕೆಕೆಆರ್‌ ಪರ 58 ಪಂದ್ಯಗಳಲ್ಲಿ 1417 ರನ್‌ಗಳನ್ನು ಗಳಿಸಿದ್ದರು. 2022 ರಲ್ಲಿ ಗುಜರಾತ್‌ ಟೈಟಾನ್ಸ್‌ ಸೇರಿದರು ಮತ್ತು ಫ್ರಾಂಚೈಸಿ ಪರ 2,104 ರನ್‌ಗಳನ್ನು ಗಳಿಸಿದ್ದಾರೆ.

25ನೇ ವಯಸ್ಸಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ಶುಭಮನ್ ಗಿಲ್-3511ರನ್‌

ರಿಷಭ್‌ ಪಂತ್‌-2838 ರನ್‌

ಇಶಾನ್‌ ಕಿಶನ್‌-2644 ರನ್‌

ವಿರಾಟ್‌ ಕೊಹ್ಲಿ-2632 ರನ್‌

ಸಂಜು ಸ್ಯಾಮ್ಸನ್‌-2584



ಕೆಕೆಆರ್‌ ವಿರುದ್ಧ ಶುಭಮನ್‌ ಗಿಲ್‌, 55 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 10 ಮನಮೋಹಕ ಬೌಂಡರಿಗಳೊಂದಿಗೆ 90 ರನ್‌ಗಳನ್ನು ಸಿಡಿಸಿದರು. ಆದರೆ, 18ನೇ ಓವರ್‌ನ ಕೊನೆಯ ಎಸೆತದಲ್ಲಿ ವೈಭವ್‌ ಅರೋರಾಗೆ ವಿಕೆಟ್‌ ಒಪ್ಪಿಸುವ ಮೂಲಕ ಕೇವಲ10 ರನ್‌ ಅಂತರದಲ್ಲಿ ಶತಕ ವಂಚಿತರಾದರು.

ಇದನ್ನೂ ಓದಿ IPL 2025: ಕೆಕೆಆರ್‌ ತಂಡದ ಪ್ಲೇ-ಆಫ್‌ ಪ್ರವೇಶದ ಲೆಕ್ಕಾಚಾರ ಹೇಗಿದೆ?