IPL 2025: ಜಂಪಾ ಬದಲಿಗೆ ಸನ್ರೈಸರ್ಸ್ ತಂಡ ಸೇರಿದ ಕನ್ನಡಿಗ ಆರ್. ಸ್ಮರಣ್
21 ವರ್ಷದ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಡಿದ 7 ಪ್ರಥಮ ದರ್ಜೆ, 10 ಲಿಸ್ಟ್ ಎ ಮತ್ತು 6 ಟಿ20 ಪಂದ್ಯಗಳಲ್ಲಿ ಅವರು 1,100ಕ್ಕೂ ಅಧಿಕ ರನ್ ಬಾರಿಸಿದ್ದರು.


ಬೆಂಗಳೂರು: ಗಾಯಗೊಂಡು ಐಪಿಎಲ್(IPL 2026)ನಿಂದ ಹೊರಬಿದ್ದ ಸ್ಪಿನ್ನರ್ ಆಡಂ ಜಂಪಾ(Adam Zampa) ಬದಲಿಗೆ ಕರ್ನಾಟಕದ ಬ್ಯಾಟರ್ ಆರ್. ಸ್ಮರಣ್(Ravichandran Smaran) ಸನ್ರೈಸರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಐಪಿಎಲ್ 18ನೇ ಆವೃತ್ತಿಯಲ್ಲಿ ಆಡುವ ಕನ್ನಡಿಗರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಚೆನ್ನೈಯ ಋತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಮುಂಬೈನ 17 ವರ್ಷದ ಬ್ಯಾಟರ್ ಆಯುಷ್ ಮಹಾತ್ರೆ ಸಿಎಸ್ಕೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
21 ವರ್ಷದ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಡಿದ 7 ಪ್ರಥಮ ದರ್ಜೆ, 10 ಲಿಸ್ಟ್ ಎ ಮತ್ತು 6 ಟಿ20 ಪಂದ್ಯಗಳಲ್ಲಿ ಅವರು 1,100ಕ್ಕೂ ಅಧಿಕ ರನ್ ಬಾರಿಸಿದ್ದರು. ಇದೀಗ ಐಪಿಎಲ್‌ನಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಲು ಸಜ್ಜಾಗಿದ್ದಾರೆ. 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ.
ಇದನ್ನೂ ಓದಿ IPL 2025 Points Table: ಗೆದ್ದರೂ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸದ ಚೆನ್ನೈ
ಹಾಲಿ ಆವೃತ್ತಿಯಲ್ಲಿ ಸನ್‌ರೈರ್ಸ್ ತಂಡ 6 ಪಂದ್ಯಗಳಿಂದ 2 ಗೆಲುವು 4 ಸೋಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶ ಪಡೆಯಬೇಕಿದ್ದರೆ ಉಳಿದ ಪಂದ್ಯಗಳಲ್ಲಿ ಗೆಲುವು ಅತ್ಯಗತ್ಯ.
ಐಪಿಎಲ್ನಲ್ಲಿರುವ ಕನ್ನಡಿಗರು
ಶ್ರೇಯಸ್ ಗೋಪಾಲ್(ಸಿಎಸ್ಕೆ), ಕೆಎಲ್ ರಾಹುಲ್, ಕರುಣ್ ನಾಯರ್, ಮನ್ವಂತ್ ಕುಮಾರ್(ಡೆಲ್ಲಿ ಕ್ಯಾಪಿಟಲ್ಸ್), ಪ್ರಸಿದ್ಧ ಕೃಷ್ಣ(ಗುಜರಾತ್), ಮನೀಷ್ ಪಾಂಡೆ, ಲವನೀತ್ ಸಿಸೋಡಿಯಾ(ಕೆಕೆಆರ್), ಕೆಎಲ್ ಶ್ರೀಜಿತ್,(ಮುಂಬೈ), ವೈಶಾಕ್ ವಿಜಯ್ಕುಮಾರ್, ಪ್ರವಿಣ್ ದುಬೆ(ಪಂಜಾಬ್),ದೇವದತ್ ಪಡಿಕ್ಕಲ್, ಮನೋಜ್ ಭಾಂಡಗೆ (ಆರ್ಸಿಬಿ), ಅಭಿನವ್ ಮನೋಹರ್, ಆರ್. ಸ್ಮರಣ್(ಹೈದರಾಬಾದ್).