PBKS vs LSG: ಅಬ್ಬರಿಸಿದ ಪ್ರಿಯಾಂಶ್, ಕೊನೋಲಿ; ಪಂಜಾಬ್ ಕಿಂಗ್ಸ್ ಅಜೇಯ ಓಟ
IPL 2026: ಬೃಹತ್ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ಬ್ಯಾಟಿಂಗ್ ಮೂಲಕ ಬೆನ್ನಟಿಕೊಂಡು ಬಂದ ಲಖನೌ, ಅಂತಿಮವಾಗಿ 5 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತಷ್ಟು ಗಟ್ಟಿಗೊಳಿಸಿತು. ಲಖನೌ 4ನೇ ಸೋಲು ಕಂಡಿತು.
Priyansh Arya and Cooper Connolly -
ಚಂಡೀಗಢ, ಎ.19: ಆರಂಭದಲ್ಲಿ ಪ್ರಿಯಾಂಶ್ ಆರ್ಯ (93) ಮತ್ತು ಕೂಪರ್ ಕನೋಲಿ (87) ಅವರ ಅಬ್ಬರದ ಬ್ಯಾಟಿಂಗ್, ಆ ಬಳಿಕ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ(PBKS vs LSG) ಲಖನೌ ಸೂಪರ್ ಜೈಂಟ್ಸ್ ವಿರುದ್ಧ 54 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿತು.
ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನೋಲಿ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 7 ವಿಕೆಟ್‌ಗೆ 254 ಬೃಹತ್ ಮೊತ್ತ ಕಲೆಹಾಕಿತು. ಇದು ಪಂಜಾಬ್ ತಂಡದ ಎರಡನೇ ಅತ್ಯಧಿಕ ಗರಿಷ್ಠ ಮೊತ್ತವಾಗಿದೆ. 2024ರಲ್ಲಿ ಕೆಕೆಆರ್ ವಿರುದ್ಧ 262 ರನ್ ಬಾರಿಸಿದ್ದು ದಾಖಲೆ.
ಬೃಹತ್ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ಬ್ಯಾಟಿಂಗ್ ಮೂಲಕ ಬೆನ್ನಟಿಕೊಂಡು ಬಂದ ಲಖನೌ, ಅಂತಿಮವಾಗಿ 5 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತಷ್ಟು ಗಟ್ಟಿಗೊಳಿಸಿತು. ಲಖನೌ 4ನೇ ಸೋಲು ಕಂಡಿತು.
KKR vs RR: ರಿಂಕು ಅರ್ಧಶತಕ; ಗೆಲುವಿನ ಖಾತೆ ತೆರೆದ ಕೆಕೆಆರ್
ಚೇಸಿಂಗ್ ವೇಳೆ ಮಿಚೆಲ್ ಮಾರ್ಷ್ ಮತ್ತು ಆರಂಭಿಕನಾಗಿ ಬಡ್ತಿ ಪಡೆದು ಬಂದ ಆಯೂಷ್ ಬದೋನಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಲಾರಂಭಿಸಿದರು. ಉಭಯ ಆಟಗಾರರ ಬೀಸಾಟದಿಂದ ತಂಡದ ಮೊತ್ತವೂ ಹಿಗ್ಗಿತು. ಓವರ್‌ಗೆ 12ರಂತೆ ರನ್ ಹರಿದುಬಂದಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕನ್ನಡಿಗ ವಿಜಯಕುಮಾರ್ ವೈಶಾಕ್ ಬೇರ್ಪಡಿಸಿದರು. ತಾವೆಸೆದ ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ಬದೋನಿ ವಿಕೆಟ್ ಕಿತ್ತು ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಬದೋನಿ 21 ಎಸೆತಗಳಿಂದ 35 ರನ್ ಬಾರಿಸಿದರು.
Easy W ✅
— Punjab Kings (@PunjabKingsIPL) April 19, 2026
Still on top ✅
Another home win ✅ pic.twitter.com/atOyiGLQ96
ಬದೋನಿ ವಿಕೆಟ್ ಪತನಗೊಂಡ ಬಳಿಕ ಆಡಲಿಳಿದ ನಾಯಕ ಪಂತ್ ಕೂಡ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು. ಮಾರ್ಕೊ ಜಾನ್ಸೆನ್‌ಗೆ ಸತತ ಸಿಕ್ಸರ್‌ಗಳ ರುಚಿ ತೋರಿಸಿದ ಪಂತ್ ಒಟ್ಟಾರೆ 4 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿ ಅರ್ಶ್‌ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ 40 ರನ್ ಗಳಿಸಿದರು. ಕೆಲ ಕ್ರಮಾಂಕದಲ್ಲಿ ಮಾರ್ಕ್ರಮ್ 42 ರನ್ ಬಾರಿಸಿದರೂ ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ.
ಬೃಹತ್ ಮೊತ್ತದ ಜತೆಯಾಟ ನಡೆಸಿದ ಪ್ರಿಯಾಂಶ್-ಕೊನೋಲಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನೋಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದ ಉಭಯ ಆಟಗಾರರು ಲಖನೌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 2ನೇ ವಿಕೆಟ್‌ಗೆ ಬರೋಬ್ಬರಿ 185 ರನ್ ರಾಶಿ ಹಾಕಿ ತಂಡಕ್ಕೆ ಬದ್ರ ಬುನಾದಿ ಹಾಕಿದರು.
ಪಂದ್ಯ ಗೆದ್ದರೂ ಅನಪೇಕ್ಷಿತ ದಾಖಲೆ ಬರೆದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ
ಬಿರುಸಿನ ಬ್ಯಾಟಿಂಗ್ ನಡೆಸಿದ ಪ್ರಿಯಾಂಶ್ ಆರ್ಯ ಕೇಲವ 37 ಎಸೆತಗಳಿಂದ ಸೊಗಸಾದ 9 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 93 ರನ್ ಬಾರಿಸಿದರು. ಕೇವಲ 7 ರನ್ ಅಂತರದಿಂದ ಶತಕ ವಂಚಿತರಾದರು. ಇವರ ಜತೆಗಾರ ಕೊನೋಲಿ 7 ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ 87 ರನ್ ಕಲೆಹಾಕಿದರು. ಕೆಲ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ 29 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಪ್ರಭ್‌ಸಿಮ್ರಾನ್ ಸಿಂಗ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ನಾಯಕ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ವಿಫಲರಾದರು. 5 ರನ್‌ಗೆ ವಿಕೆಟ್ ಕಳೆದುಕೊಂಡರು.
ಬೌಲಿಂಗ್‌ನಲ್ಲಿ ಲಖನೌ ಪರ ಪ್ರಿನ್ಸ್ ಯಾದವ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ ಎರಡು ವಿಕೆಟ್ ಕಿತ್ತರು. ಐಡೆನ್ ಮಾರ್ಕ್ರಮ್ ಒಂದೇ ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.