ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಬಡವರಿಗೆ ಮನೆಗಾಗಿ ಹೋರಾಟಕ್ಕೆ ಘೋಷಣೆ: ಡಾ.ಬಿ.ಎನ್.ವೆಂಕಟೇಶ್

ಒಂದೇ ಮನೆಯಲ್ಲಿ ಹಲವರು ವಾಸಿಸುವ ದುಸ್ಥಿತಿ ಇದೆ. ಸ್ಥಳೀಯ ಶಾಸಕರು ಮತ್ತು ಸಂಸದರು ಬಡವ ರಿಗೆ ಸೈಟು ಹಾಗೂ ಮನೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರ ಸರ್ಕಾರದ ವಿರುದ್ಧವೂ ಹೋರಾಟಕ್ಕೆ ಮುಂದಾಗುತ್ತೇವೆ

ಬಡವರಿಗೆ ಮನೆಗಾಗಿ ಹೋರಾಟಕ್ಕೆ ಘೋಷಣೆ: ಡಾ.ಬಿ.ಎನ್.ವೆಂಕಟೇಶ್

-

Profile
Ashok Nayak Apr 19, 2026 11:21 PM

ಶಿಡ್ಲಘಟ್ಟ : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದಿದ್ದು, ಬಡವರಿಗೆ ವಾಸಿಸಲು ಮನೆಗಳ ಕೊರತೆ ತೀವ್ರವಾಗಿದೆ. ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ ಎಂದು ರಾಜ್ಯಾಧ್ಯಕ್ಷ ಡಾ.ಬಿ.ಎನ್.ವೆಂಕಟೇಶ್ ಹೇಳಿದರು.

ನಗರದ ಹೊಸನಗರ ಸಭೆ ಮುಂಭಾಗ ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ 135ನೇ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: Shidlaghatta News: ಗೋಮಾಳ ಜಮೀನು ಒತ್ತುವರಿ ವಿರುದ್ಧ ದಲಿತ ಕುಟುಂಬ ಪಾದಯಾತ್ರೆ: ಆಡಳಿತಕ್ಕೆ  ಮನವಿ

ಒಂದೇ ಮನೆಯಲ್ಲಿ ಹಲವರು ವಾಸಿಸುವ ದುಸ್ಥಿತಿ ಇದೆ. ಸ್ಥಳೀಯ ಶಾಸಕರು ಮತ್ತು ಸಂಸದರು ಬಡವರಿಗೆ ಸೈಟು ಹಾಗೂ ಮನೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರ ಸರ್ಕಾರದ ವಿರುದ್ಧವೂ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ತೋರಿದ ದಾರಿಯನ್ನು ಅನುಸರಿಸುವುದು ನಮ್ಮ ಕರ್ತವ್ಯ. ಮಕ್ಕಳಿಗೆ ಶಿಕ್ಷಣ ಒದಗಿಸಿ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ನಾಗವೇಣಿ, ಸಮಾಜಸೇವಕ ಬೀರಪ್ಪನಹಳ್ಳಿ ನರಸಿಂಹ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ದಲಿತ ಮುಖಂಡ ನಾಗ ನರಸಿಂಹ, ಜಿಲ್ಲಾ ಮಾದರ ಮಹಾಸಭಾ ಕಾರ್ಯದರ್ಶಿ ವಿಶ್ವನಾಥ್, ಚಲಪತಿ, ರಾಮಾಂಜಿನಪ್ಪ,ಮೂರ್ತಿ ಸಾಮ್ರಾಟ್, ಮಾದರ ಮಹಾಸಭಾ ಅಧ್ಯಕ್ಷ ದೇವರಾಜ್, ಮುತ್ತೂರು ವೆಂಕಟೇಶ್, ಎನ್‌ಎಸ್‌ಯುಐ ಮುಖಂಡ ಮುನೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.