ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಗಾಯಗೊಂಡ ಡೇವಿಡ್ ಪೇನ್ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ ಸೇರಿದ ಜೆರಾಲ್ಡ್ ಕೋಟ್ಜಿ

Gerald Coetzee: ಈ ಹಿಂದೆ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಪರ ಆಡಿರುವ ಕೋಟ್ಜಿ ಇದುವರೆಗೆ 14 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿರುವ ಅವರು ಬಿರುಸಿನ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ.

ಬದಲಿ ಆಟಗಾರನಾಗಿ ಸನ್‌ರೈಸರ್ಸ್ ಹೈದರಾಬಾದ್ ಸೇರಿದ ಜೆರಾಲ್ಡ್ ಕೋಟ್ಜಿ

Gerald Coetzee -

Abhilash BC
Abhilash BC Apr 18, 2026 11:10 AM

ಹೈದರಾಬಾದ್‌, ಎ.18: ಗಾಯಗೊಂಡು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ(IPL 2026)ನಿಂದ ಹೊರಬಿದ್ದ ಎಡಗೈ ಸೀಮರ್ ಡೇವಿಡ್ ಪೇನ್ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿ(Gerald Coetzee) ಅವರನ್ನು ಸೇರಿಸಿಕೊಂಡಿದೆ. ಆರೆಂಜ್ ಆರ್ಮಿ ಜೊತೆ ಪೇನ್ ಅವರ ಅವಧಿ ಅಲ್ಪಕಾಲಿಕವಾಗಿತ್ತು. ಕೇವಲ ಎರಡು ಪಂದ್ಯಗಳಲ್ಲಿ ಆಡಿ ಎರಡು ವಿಕೆಟ್ ಪಡೆದಿದ್ದರು. ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಕೋಟ್ಜಿ 2 ಕೋಟಿ ರೂ. ಮೊತ್ತಕ್ಕೆ ಹೈದರಾಬಾದ್ ಫ್ರಾಂಚೈಸಿ ಸೇರಿದರು.

ಜೆರಾಲ್ಡ್ ಕೋಟ್ಜಿ ದಕ್ಷಿಣ ಆಫ್ರಿಕಾ ಪರ 4 ಟೆಸ್ಟ್‌ಗಳು, 14 ಏಕದಿನಗಳು ಮತ್ತು 18 ಟಿ20ಐಗಳಲ್ಲಿ ಆಡಿ, ಒಟ್ಟಾರೆಯಾಗಿ 67 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಗಂಟೆಗೆ 145 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಕೋಟ್ಜಿ, ಹೈದಾರಾಬಾದ್‌ ತಂಡಕ್ಕೆ ಹೆಚ್ಚಿನ ಬಲ ನೀಡುವ ವಿಶ್ವಾಸದಲ್ಲಿದ್ದಾರೆ.

ಈ ಹಿಂದೆ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಪರ ಆಡಿರುವ ಅವರು ಇದುವರೆಗೆ 14 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿರುವ ಅವರು ಬಿರುಸಿನ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ.



ತಂಡವು ಪ್ಯಾಟ್ ಕಮ್ಮಿನ್ಸ್ ಅವರ ಫಿಟ್ನೆಸ್ ಅನ್ನು ಸಹ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬೆನ್ನು ನೋವಿನಿಂದ ಚೇತರಿಸಿಕೊಂಡ ನಂತರ ಆಸ್ಟ್ರೇಲಿಯಾದ ನಾಯಕನಿಗೆ ಬೌಲಿಂಗ್‌ಗೆ ಮರಳಲು ಅನುಮತಿ ನೀಡಲಾಗಿದ್ದರೂ, ಏಪ್ರಿಲ್ ಅಂತ್ಯದಲ್ಲಿ ಅವರನ್ನು ತಂಡಕ್ಕೆ ತಕ್ಷಣವೇ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ವರದಿಗಳು ಸೂಚಿಸುತ್ತವೆ.

ಇಂದು ಚೆನ್ನೈ ವಿರುದ್ಧ ಸೆಣಸು

ಸನ್‌ರೈಸರ್ಸ್‌ ಹೈದರಾಬಾದ್ ತಂಡ ಇಂದು(ಶನಿವಾರ) ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಹೆಚ್ಚಿನ ವಿಶ್ವಾಸದೊಡನೆ ಕಣಕ್ಕಿಳಿಯಲಿದೆ. ಪದಾರ್ಪಣ ಪಂದ್ಯದಲ್ಲೇ ಘಾತಕ ಬೌಲಿಂಗ್‌ ಮೂಲಕ ತಲಾ ನಾಲ್ಕು ವಿಕೆಟ್‌ ಕಿತ್ತು ಮಿಂಚಿದ್ದ ಪ್ರಫುಲ್‌ ಹಿಂಗೆ ಮತ್ತು ಸಾಕಿಬ್ ಹುಸೇನ್ ಪಂದ್ಯದ ಹೈಲೆಟ್ಸ್‌.

ಸತತ 5 ಪಂದ್ಯ ಸೋತ ಕೆಕೆಆರ್‌ಗೆ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

ಅಭಿಷೇಕ್‌, ಟ್ರಾವಿಸ್‌ ಹೆಡ್‌, ಇಶಾನ್ ಕಿಶನ್‌, ಕ್ಲಾಸೆನ್ ಅಂಥ ಆಕ್ರಮಣಕಾರಿ ಬ್ಯಾಟರ್‌ಗಳಿದ್ದರೂ, ಬೌಲಿಂಗ್ ವಿಭಾಗ ಅಷ್ಟೇನೂ ಪ್ರಭಾವಶಾಲಿ ಎನಿಸಿರಲಿಲ್ಲ. ದಿಢೀರ್ ಯಶಸ್ಸಿನಿಂದ ಹಿಂಗೆ ಮತ್ತು ಹುಸೇನ್ ಈಗ ಸೂಪರ್ ಕಿಂಗ್ಸ್ ವಿರುದ್ಧವೂ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಸೋತಿದ್ದ ಸನ್‌ರೈಸರ್ಸ್‌ ನಂತರ ಗೆಲುವಿನ ಹಳಿಗೆ ಮರಳಿದೆ. ಸೂಪರ್ ಕಿಂಗ್ಸ್ ಸಹ ಕೊನೆಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಈಗ ತವರಿನಿಂದ ಹೊರಗೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.