ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravindra Jadeja: ಡಬ್ಲ್ಯೂಟಿಸಿಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

ಅಶ್ವಿನ್ ಈಗಾಗಲೇ ನಿವೃತ್ತಿ ಹೊಂದಿದ್ದು, ಕಮ್ಮಿನ್ಸ್ ಹೆಚ್ಚು ಬೌಲರ್ ಆಗಿರುವುದರಿಂದ ಜಡೇಜಾ ಅವರ ದಾಖಲೆಯನ್ನು ಈ ವಿಷಯದಲ್ಲಿ ಶೀಘ್ರದಲ್ಲೇ ಮುರಿಯುವ ಸಾಧ್ಯತೆ ಕಡಿಮೆ. ಇಂಗ್ಲೆಂಡ್ ಟೆಸ್ಟ್‌ ನಾಯಕ ಬೆನ್ ಸ್ಟೋಕ್ಸ್, ಅವರು ವಿಶ್ವ ಟೆಸ್ಟ್‌ನಲ್ಲಿ ಇದುವರೆಗೆ 3616 ರನ್ ಮತ್ತು 97 ವಿಕೆಟ್‌ಗಳನ್ನು ಪಡೆದಿದ್ದಾರೆ.

ಡಬ್ಲ್ಯೂಟಿಸಿಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

-

Abhilash BC
Abhilash BC Nov 17, 2025 5:14 PM

ಕೋಲ್ಕತಾ: ಟೀಮ್‌ ಇಂಡಿಯಾದ ಅನುಭವಿ ಆಲ್‌ರೌಂಡರ್‌ ರವೀಂದ್ರ ಜಡೇಜಾ(Ravindra Jadeja) ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಮತ್ತು ಪಂದ್ಯದಲ್ಲಿ ಒಟ್ಟು 45 ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇದೇ ವೇಳೆ ಡಬ್ಲ್ಯೂಟಿಸಿ(WTC) ಇತಿಹಾಸದಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿ 150 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆಗಸ್ಟ್ 2019 ರಲ್ಲಿ ಡಬ್ಲ್ಯೂಟಿಸಿ ಆರಂಭವಾದಾಗಿನಿಂದ ಕೇವಲ 16 ಬೌಲರ್‌ಗಳು ಮಾತ್ರ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಕೆಲವೇ ಕೆಲವರು ಬ್ಯಾಟರ್‌ಗಳು 1000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಜಡೇಜ ಹೊರತುಪಡಿಸಿ ಪ್ಯಾಟ್ ಕಮ್ಮಿನ್ಸ್ ಮತ್ತು ಆರ್‌. ಅಶ್ವಿನ್ ಡಬ್ಲ್ಯೂಟಿಸಿಯಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳು ಮತ್ತು 1000 ರನ್‌ಗಳನ್ನು ಪಡೆದ ಆಟಗಾರರಾಗಿದ್ದಾರೆ. ಆದಾಗ್ಯೂ, ಅವರಲ್ಲಿ ಯಾರೂ ಪಂದ್ಯಾವಳಿಯಲ್ಲಿ 2000 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿಲ್ಲ.

ಅಶ್ವಿನ್ ಈಗಾಗಲೇ ನಿವೃತ್ತಿ ಹೊಂದಿದ್ದು, ಕಮ್ಮಿನ್ಸ್ ಹೆಚ್ಚು ಬೌಲರ್ ಆಗಿರುವುದರಿಂದ ಜಡೇಜಾ ಅವರ ದಾಖಲೆಯನ್ನು ಈ ವಿಷಯದಲ್ಲಿ ಶೀಘ್ರದಲ್ಲೇ ಮುರಿಯುವ ಸಾಧ್ಯತೆ ಕಡಿಮೆ. ಇಂಗ್ಲೆಂಡ್ ಟೆಸ್ಟ್‌ ನಾಯಕ ಬೆನ್ ಸ್ಟೋಕ್ಸ್, ಅವರು ವಿಶ್ವ ಟೆಸ್ಟ್‌ನಲ್ಲಿ ಇದುವರೆಗೆ 3616 ರನ್ ಮತ್ತು 97 ವಿಕೆಟ್‌ಗಳನ್ನು ಪಡೆದಿದ್ದಾರೆ.

ನವೆಂಬರ್ 22 ರಿಂದ ಗುವಾಹಟಿಯಲ್ಲಿ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಮುಂದಿನ ಪಂದ್ಯವಾಡಲಿದ್ದಾರೆ.

WTCಯಲ್ಲಿ 1000 ಕ್ಕೂ ಹೆಚ್ಚು ರನ್‌ ಮತ್ತು 150 ಪ್ಲಸ್‌ ವಿಕೆಟ್‌ ಕಿತ್ತ ಆಟಗಾರರು

ರವೀಂದ್ರ ಜಡೇಜಾ; 2550 ರನ್‌, 150 ವಿಕೆಟ್‌

ಆರ್‌ ಅಶ್ವಿನ್‌; 1142 ರನ್‌, 195 ವಿಕೆಟ್‌

ಪ್ಯಾಟ್‌ ಕಮಿನ್ಸ್‌; 1020 ರನ್‌, 215 ವಿಕೆಟ್‌

ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಮತ್ತು 300 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಹಾಗೂ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು. ಈ ಮೂಲಕ 36 ವರ್ಷದ ಜಡೇಜಾ, ಕಪಿಲ್ ದೇವ್, ಇಯಾನ್ ಬೋಥಮ್ ಮತ್ತು ಡೇನಿಯಲ್ ವೆಟ್ಟೋರಿ ಅವರ ವಿಶೇಷ ಪಟ್ಟಿಗೆ ಸೇರಿದರು. ಅತಿ ಕಡಿಮೆ ಇನಿಂಗ್ಸ್‌ ಲೆಕ್ಕಾಚಾರದಲ್ಲಿ ಬೋಥಮ್ ಮುಂದಿದ್ದಾರೆ. ಅವರು ತಮ್ಮ 72 ನೇ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು.

ಇದನ್ನೂ ಓದಿ ind vs sa 2nd test: 2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನ ತುಂಬಲು ಕರುಣ್‌, ಪಡಿಕ್ಕಲ್‌ ಸೇರಿ 5 ಆಟಗಾರರ ಮಧ್ಯೆ ಪೈಪೋಟಿ

4000 ಟೆಸ್ಟ್ ರನ್ ಮತ್ತು 300 ಟೆಸ್ಟ್ ವಿಕೆಟ್ ಪಡೆದ ಆಟಗಾರರು

ಕಪಿಲ್ ದೇವ್ - 5248 ರನ್‌ಗಳು, 434 ವಿಕೆಟ್‌ಗಳು

ಇಯಾನ್ ಬೋಥಮ್- 5200 ರನ್‌ಗಳು, 383 ವಿಕೆಟ್‌ಗಳು

ಡೇನಿಯಲ್ ವೆಟ್ಟೋರಿ- 4531 ರನ್‌ಗಳು, 362 ವಿಕೆಟ್‌ಗಳು

ರವೀಂದ್ರ ಜಡೇಜ 4000 ರನ್‌ಗಳು, 338 ವಿಕೆಟ್‌ಗಳು*